ಮೆರವಣಿಗೆಯಲ್ಲಿ ೮೭ ಸಮ್ಮೇಳನದ ಅಧ್ಯಕ್ಷರ ಭಾವಚಿತ್ರದೊಂದಿಗೆ ಕನ್ನಡದ ಬಾವುಟದೊಂದಿಗೆ ಅಲಂಕೃತವಾಗಿ ಭಾಗವಹಿಸಲು ಸಿಂಗರಿಸಬೇಕು. ಮೆರವಣಿಗೆಯಲ್ಲಿ ೨೦ ಎತ್ತಿನಗಾಡಿಗಳು ರೈತರ ಗೌರವವನ್ನು ಹೆಚ್ಚಿಸುವ ರೀತಿ ಜಿಲ್ಲೆಯ ಗ್ರಾಮೀಣ ಸೊಗಡಿನ ಕಂಪನ್ನು ಸೂಸುವ ರೀತಿ ಸಜ್ಜುಗೊಳಿಸಲು ಯೋಜನೆ ರೂಪಿಸಿ. ಇದಕ್ಕಾಗಿ ಸಮಿತಿಯ ಎಲ್ಲಾ ಸದಸ್ಯರು ಕಾರ್ಯಪ್ರವೃತರಾಗಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೆರವಣಿಗೆಯು ಆಕರ್ಷಣೀಯವಾಗಿ ಜನ- ಮನದಲ್ಲಿ ಚಿರಕಾಲ ಉಳಿಯಬೇಕು ಎಂದರೆ ಮೆರವಣಿಗೆಗೆ ಉತ್ತಮ ಕಲಾತಂಡಗಳ ಆಯ್ಕೆ ಮುಖ್ಯ ಎಂದು ವಿಧಾನ ಪರಿಷತ್ ಶಾಸಕ ಮಧು ಜಿ.ಮಾದೇಗೌಡ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೆರವಣಿಗೆ ಉಪಸಮಿತಿ ಸಭೆ ನಡೆಸಿ ಮಾತನಾಡಿ, ಮೆರವಣಿಗೆ ಉಪ ಸಮಿತಿಯಿಂದ ೯೫ ಲಕ್ಷ ರು. ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ತಾತ್ಕಾಲಿಕವಾಗಿ ಅಂದಾಜು ೭೦ ಲಕ್ಷ ರು. ನೀಡಲಾಗಿದೆ. ಈ ಅನುದಾನದಲ್ಲಿ ಮೆರವಣಿಗೆಯನ್ನು ಉತ್ತಮವಾಗಿ ಆಯೋಜಿಸಬೇಕು ಎಂದರು.
ಪ್ರತಿ ಜಿಲ್ಲೆಯಿಂದ ೩ ಕಲಾ ತಂಡಗಳ ವಿವರ ಸಮಿತಿಯಲ್ಲಿ ಲಭ್ಯವಿದ್ದು, ಒಂದೊಂದು ತಂಡವನ್ನು ಅವರ ಪ್ರದರ್ಶನದ ವಿಡಿಯೋ ತುಣುಕುಗಳನ್ನು ನೋಡಿ ಆಯ್ಕೆ ಮಾಡಬೇಕು. ಆಯ್ಕೆ ಮಾಡುವಾಗ ಬೇರೆ ಬೇರೆ ಕಲಾ ಪ್ರಕಾರಗಳನ್ನು ಆಯ್ಕೆ ಮಾಡುವಂತೆ ತಿಳಿಸಿದರು.
ಮೆರವಣಿಗೆಯಲ್ಲಿ ೮೭ ಅಟೋಗಳು:
ಮೆರವಣಿಗೆಯಲ್ಲಿ ೮೭ ಸಮ್ಮೇಳನದ ಅಧ್ಯಕ್ಷರ ಭಾವಚಿತ್ರದೊಂದಿಗೆ ಕನ್ನಡದ ಬಾವುಟದೊಂದಿಗೆ ಅಲಂಕೃತವಾಗಿ ಭಾಗವಹಿಸಲು ಸಿಂಗರಿಸಬೇಕು. ಮೆರವಣಿಗೆಯಲ್ಲಿ ೨೦ ಎತ್ತಿನಗಾಡಿಗಳು ರೈತರ ಗೌರವವನ್ನು ಹೆಚ್ಚಿಸುವ ರೀತಿ ಜಿಲ್ಲೆಯ ಗ್ರಾಮೀಣ ಸೊಗಡಿನ ಕಂಪನ್ನು ಸೂಸುವ ರೀತಿ ಸಜ್ಜುಗೊಳಿಸಲು ಯೋಜನೆ ರೂಪಿಸಿ. ಇದಕ್ಕಾಗಿ ಸಮಿತಿಯ ಎಲ್ಲಾ ಸದಸ್ಯರು ಕಾರ್ಯಪ್ರವೃತರಾಗುವಂತೆ ಹೇಳಿದರು.
ಸ್ತಬ್ಧಚಿತ್ರಗಳು:
ಜಿಲ್ಲೆಯ ಸಂಸ್ಕೃತಿ, ಸಾಹಿತಿ, ಕೃಷಿ ಸೇರಿದಂತೆ ಇನ್ನಿತರೆ ವೈವಿದ್ಯಮಯ ವಿಷಯಗಳನ್ನು ಒಟ್ಟುಗೂಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ರೀತಿ ೫ ಸ್ತಬ್ಧ ಚಿತ್ರಗಳನ್ನು ಸಿದ್ಧಪಡಿಸಬೇಕು. ಮೆರವಣಿಗೆಯಲ್ಲಿ ಭಾಗವಹಿಸುವ ಎಲ್ಲಾ ಕಲಾವಿದರಿಗೆ ವಸತಿ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ವ್ಯವಸ್ಥೆ ವ್ಯವಸ್ಥಿತವಾಗಿ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಅರುಣ್‌ಕುಮಾರ್, ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಕಸಾಪ ಗೌರವ ಕಾರ್ಯದರ್ಶಿ ಹರ್ಷ, ಕೃಷ್ಣೇಗೌಡ ಹುಸ್ಕೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ನಂದೀಶ್ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.