ಸಂತ ಸೇವಾಲಾಲರು ಮಹಾನ್‌ ಚೇತನ: ಶಿವಬಸವ ಶ್ರೀ

KannadaprabhaNewsNetwork |  
Published : Feb 16, 2024, 01:48 AM IST
ಪೋಟೊ ಶೀರ್ಷಿಕೆ : 15ಎಚ್‌ಯುಬಿ-ಎಕೆಎಲ್1:ಅಕ್ಕಿಆಲೂರ ಸಮೀಪದ ಗುರುರಾಯಪಟ್ಟಣದಲ್ಲಿ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತ್ಯುತ್ಸವದ ಪ್ರಯುಕ್ತ ಸಂತರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು.  | Kannada Prabha

ಸಾರಾಂಶ

ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಏಕೈಕ ರಾಷ್ಟ್ರವಾಗಿದ್ದು, ಹಲವಾರು ಸಾಂಸ್ಕೃತಿಕ ರಾಯಭಾರಿಗಳಿಂದ ಇದು ಸಾಧ್ಯವಾಗಿದೆ.

ಕನ್ನಡಪ್ರಭ ವಾರ್ತೆ ಅಕ್ಕಿಆಲೂರು

ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಏಕೈಕ ರಾಷ್ಟ್ರವಾಗಿದ್ದು, ಹಲವಾರು ಸಾಂಸ್ಕೃತಿಕ ರಾಯಭಾರಿಗಳಿಂದ ಇದು ಸಾಧ್ಯವಾಗಿದೆ. ಅಂತಹ ಮಹಾನ್ ಚೇತನರ ಸಾಲಿಗೆ ಸಂತ ಸೇವಾಲಾಲ ಮಹಾರಾಜರು ಕೂಡ ಸೇರುತ್ತಾರೆ ಎಂದು ವಿರಕ್ತಮಠದ ಶಿವಬಸವ ಶ್ರೀಗಳು ಹೇಳಿದರು.

ಸಮೀಪದ ಗುರುರಾಯಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸಂತ ಸೇವಾಲಾಲ ಮಹಾರಾಜರ 285ನೇ ಜಯಂತ್ಯುತ್ಸವದ ಮೆರವಣಿಗೆ ಪಟ್ಟಣಕ್ಕೆ ಆಗಮಿಸಿದ ಹಿನ್ನೆಲೆ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು. ಭಾರತದ ನೆಲದಲ್ಲಿ ಹಲವಾರು ಮಹಾನ್ ಸಂತರು, ತತ್ವಜ್ಞಾನಿಗಳು, ವಚನಕಾರರು, ಧರ್ಮ ಸುಧಾರಕರು ಜನ್ಮಪಡೆದು ಜನರಲ್ಲಿನ ತಮಂಧತೆಯನ್ನು ಹೋಗಲಾಡಿಸಿದ್ದಾರೆ. ಅಂತಹ ಮಹಾನ್ ಚೇತನಗಳಲ್ಲಿ ಲಂಬಾಣಿ ಸಮುದಾಯದ ಆರಾಧ್ಯ ದೈವ, ಸಂತ ಸೇವಾಲಾಲ್ ಮಹಾರಾಜರು ಒಬ್ಬರಾಗಿದ್ದಾರೆ. ಸೇವಾಲಾಲರು ತಮ್ಮ ಲೀಲೆ ಮತ್ತು ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ಗುರುವಿನ ಸ್ಥಾನ ಪಡೆದಿದ್ದಾರೆ. 18ನೇ ಶತಮಾನದಲ್ಲಿ ಲಂಬಾಣಿ ಜನಾಂಗದ ಹಕ್ಕು ಮತ್ತು ಸೌಲಭ್ಯಗಳಿಗಾಗಿ ಅಂದಿನ ಮೈಸೂರು ಅರಸರೊಂದಿಗೆ ಹೋರಾಡಿದ ಶ್ರೇಯ ಅವರಿಗೆ ಸಲ್ಲುತ್ತದೆ ಎಂದರು.

ಬಾಳೂರಿನ ಅಡವಿಸ್ವಾಮಿಮಠದ ಕುಮಾರ ಶ್ರೀಗಳು ಆಶೀರ್ವಚನ ನೀಡಿ, ಲಂಬಾಣಿ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರುವ ಪ್ರಯತ್ನ ನಡೆಸಿದ್ದು, ಅವರಿಗೆ ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕಿದೆ. ಅವರಲ್ಲಿನ ಅಜ್ಞಾನ-ಅಂಧಕಾರವನ್ನು ತೊಡೆದು ಹಾಕುವಲ್ಲಿ ಸಮುದಾಯ ಮುಂದಡಿಯಿಡಬೇಕಿದೆ ಎಂದರು.

ಇದಕ್ಕೂ ಮುನ್ನ ಸಂತ ಸೇವಾಲಾಲ ಮಹಾರಾಜರ ಭಾವಚಿತ್ರದ ಮೆರವಣಿಗೆ ಗುರುರಾಯಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಕ್ಕಿಆಲೂರಿಗೆ ಆಗಮಿಸಿತು. ಅಕ್ಕಿಆಲೂರಿನ ಪ್ರಮುಖ ಬೀದಿಗಳಲ್ಲಿ ಸಾಗಿಬಂದ ಮೆರವಣಿಗೆಗೆ ವಿರಕ್ತಮಠದ ಹತ್ತಿರ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಬಾಬಣ್ಣ ಲಮಾಣಿ, ಚಂದ್ರು ಲಮಾಣಿ, ಗ್ರಾಪಂ ಅಧ್ಯಕ್ಷರಾದ ಗೇಮಣ್ಣ ಲಮಾಣಿ, ವೀರೇಶ ಲಮಾಣಿ, ಹಿಂದೂ ಜಾಗರಣಾ ವೇದಿಕೆ ಸಂಯೋಜಕ ಹರೀಶ ಹಾನಗಲ್ಲ, ಪ್ರದೀಪ ಮಹೇಂದ್ರಕರ, ಗಿರೀಶ ಕರಿದ್ಯಾವಣ್ಣನವರ, ಸಿದ್ದು ಬೇಲೂರ, ಪ್ರಸಾದ ಪಾವಲಿ, ಶಿವಾಜಿ ಲಮಾಣಿ ಸೇರಿದಂತೆ ಪ್ರಮುಖರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌