ಸಮಾಜ ಅಭಿವೃದ್ಧಿಗೆ ಜೀವನ ಮುಡಿಪಾಗಿಟ್ಟ ಸಂತ ಸೇವಾಲಾಲ್ : ಶ್ರೀ ಸೇನಾ ಭಗತ್ ಸ್ವಾಮೀಜಿ

KannadaprabhaNewsNetwork |  
Published : Feb 23, 2024, 01:50 AM IST
ಶ್ರೀ ಸಂತ ಸೇವಾಲಾಲ್ ಮಹಾರಾಜರು  ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ | Kannada Prabha

ಸಾರಾಂಶ

ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಸಹ ಬಂಜಾರ ಸಮಾಜದ ಬಂಧುಗಳು ವಾಸವಾಗಿದ್ದರೂ ಭಾಷೆ ಮಾತ್ರ ಒಂದೇ ದೈವ ಒಂದೇ ಸಂಸ್ಕೃತಿ ಒಂದೇ ಆಗಿದೆ ಎಂದು ಶಿಕಾರಿಪುರ ಸಾಲೂರು ಮಠದ ಶ್ರೀ ಸೇನಾ ಭಗತ್ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ, ತರೀಕೆರೆ

ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಸಹ ಬಂಜಾರ ಸಮಾಜದ ಬಂಧುಗಳು ವಾಸವಾಗಿದ್ದರೂ ಭಾಷೆ ಮಾತ್ರ ಒಂದೇ ದೈವ ಒಂದೇ ಸಂಸ್ಕೃತಿ ಒಂದೇ ಆಗಿದೆ ಎಂದು ಶಿಕಾರಿಪುರ ಸಾಲೂರು ಮಠದ ಶ್ರೀ ಸೇನಾ ಭಗತ್ ಸ್ವಾಮೀಜಿ ಹೇಳಿದರು.

ಬಾವಿಕೆರೆ ಗ್ರಾಮದಲ್ಲಿ ಶ್ರೀ ಸೇವಾಲಾಲ್ ಬಂಜಾರ ಸೇವಾ ಸಮಿತಿ ಏರ್ಪಡಿಸಿದ್ದ ಶ್ರೀ ಸಂತ ಸೇವಾಲಾಲ್ ಮರಿಯಮ್ಮ ದೇವಿ ಶಿಲಾಮೂರ್ತಿ ಪ್ರತಿಷ್ಠಾಪನೆ, ನೂತನ ಗೃಹಪ್ರವೇಶ ಹಾಗೂ ಕಳಸ ಪ್ರತಿಷ್ಠಾಪನೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಶ್ರೀ ಸಂತ ಸೇವಾಲಾಲ್ ಮಹಾರಾಜರು ತಮ್ಮ ಜೀವನವನ್ನೇ ಸಮಾಜದ ಅಭಿವೃದ್ಧಿಗೆ ಮುಡಿಪಾಗಿಟ್ಟವರು, ಬಂಜಾರ ಸಮಾಜದವರಿಗೆ ಅರಿವು ಮೂಡಿಸುವಲ್ಲಿ ಶ್ರಮಿಸಿದ್ದಾರೆ ಎಂದು ಹೇಳಿದರು.

ಹುರುಳಿಭಾರೆ ಮಠದ ಶ್ರೀ ಮಂಜು ಮಹಾರಾಜ ಸ್ವಾಮೀಜಿ ಆಶೀರ್ವಚನ ನೀಡಿ, ದೇವಸ್ಥಾನವನ್ನು ಕಟ್ಟಿಸಿದ್ದೀರಿ. ಪ್ರತಿ ಅಮಾವಾಸ್ಯೆ ದಿವಸ ವಿಶೇಷ ಪೂಜೆ, ವ್ರತಗಳನ್ನು ಮಾಡುತ್ತೇವೆ ಎಂದು ಸಂಕಲ್ಪ ಮಾಡಿರಿ, ಬಡ ಮಕ್ಕಳ ವ್ಯಾಸಂಗಕ್ಕೆ ಅನುಕೂಲ ಮಾಡಿರಿ ದೇವರ ಸೇವೆ ಮಾಡಿದ ಪುಣ್ಯಸಿಗುಗುತ್ತದೆ ಎಂದು ಹೇಳಿದರು.

ಶಾಸಕ ಜಿಎಚ್ ಶ್ರೀನಿವಾಸ್ ರವರ ಪುತ್ರಿ ರಚನಾ ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಂಜಾರ ಭಾಷೆ ಮತ್ತು ಸಂಸ್ಕೃತಿ ವೈವಿಧ್ಯತೆಯಿಂದ ಕೂಡಿದೆ. ನಿಮ್ಮ ಸಂಸ್ಕೃತಿ ಭಾಷೆ ಉಳಿಸಿ, ಬೆಳೆಸಿರಿ, ನೀವೆಲ್ಲರೂ ಸಹ ನಮಗೆ ತೋರಿದ ಪ್ರೀತಿ ಅಭಿಮಾನಕ್ಕೆ ನಾವೆಂದು ಋಣಿ. ನಿಮ್ಮ ಸಮಾಜಕ್ಕೆ ನಮ್ಮ ಸಹಕಾರ ಖಂಡಿತ ಇದೆ

ಎಂದು ಹೇಳಿದರು.

ಬಣಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಗಿರೀಶ್ ಅವರು ಮಾತನಾಡಿ ಸಂತ ಸೇವಾಲಾಲ್ ಮಹಾರಾಜ್ ವ್ಯಕ್ತಿಯಾಗಿ ದೈವತ್ವವನ್ನು ತೋರಿಸಿಕೊಟ್ಟರು, ಕಾಯಕದಿಂದ ದುಡಿದು ಬದುಕಬೇಕೆಂದು ಉಪದೇಶ ನೀಡಿದ್ದಾರೆ. ಎಂದು ಹೇಳಿದರು.

ಸೇವಾಲಾಲ್ ಬಂಜಾರ್ ಸೇವಾ ಸಮಿತಿ ಅಧ್ಯಕ್ಷೆ ಸಾಮ್ಯ ನಾಯಕ್ ಮಾತನಾಡಿ, ದಾನಿಗಳಿಂದ ದೇಣಿಗೆ ಪಡೆದು, ಶ್ರೀ ಕ್ಷೇತ್ರ ಧರ್ಮಸ್ಥಳ ವೀರೇಂದ್ರ ಹೆಗಡೆ, ಶಾಸಕ ಜಿ ಎಚ್ ಶ್ರೀನಿವಾಸ್ ಅವರಿಂದ ಸಹಕಾರ ಪಡೆದು ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಬಂಜಾರ ಬಳಗದ ಅಧ್ಯಕ್ಷ ಬಿ ಕೃಷ್ಣ ನಾಯ್ಕ, ತಾಲೂಕು ಬಂಜಾರ್ ಸಂಘದ ಅಧ್ಯಕ್ಷ ಕರಕುಚ್ಚಿ ರಾಮಾನಾಯ್ಕ್, ಶಿಕ್ಷಕ ಚನ್ನನಾಯಕ, ವಕೀಲರಾದ ಶೇಖರ್ ನಾಯ್ಕ, ಶಿವಶಂಕರ್ ನಾಯ್ಕ, ಪತ್ರಕರ್ತ ಪ್ರದೀಪ್ ನಾಯಕ್ ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್, ಮಹಾಬಲ, ಕರವೇ ನಾಗರಾಜ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಾಖ ವ್ಯವಸ್ಥಾಪಕ ಕುಸುಮಾದರ್ ಉಪಸ್ಥಿತರಿದ್ದರು.

ಈ ಸಮಾರಂಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್ ವೆಂಕಟೇಶ್ ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಮಾಡಲಾಯಿತು.

22ಕೆಟಿಆರ್.ಕೆ.6ಃ

ತರೀಕೆರೆ ಸಮೀೂಪದ ಬಾವಿಕೆರೆ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಪುತ್ರಿ ರಚನ ಶ್ರೀನಿವಾಸ್ ಉದ್ಘಾಟಿಸಿದರು. ಶಿಕಾರಿಪುರ ಸಾಲೂರು ಮಠ ಶ್ರೀ ಸೇನಾ ಭಗತ್ ಸ್ವಾಮೀಜಿ, ಹುರುಳಿಭಾರೆ ಮಠದ ಶ್ರೀ ಮಂಜು ಮಹಾರಾಜ್ ಸ್ವಾಮೀಜಿ, ಸೇವಾಲಾಲ್ ಬಂಜಾರ್ ಸೇವಾ ಸಮಿತಿ ಅಧ್ಯಕ್ಷೆ ಸಾಮ್ಯ ನಾಯಕ್, ಬಂಜಾರ ಬಳಗದ ಅಧ್ಯಕ್ಷ ಬಿ. ಕೃಷ್ಣ ನಾಯ್ಕ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ