ಗಾಂಜಾ ಮಾರಾಟ: ೯ ಮಂದಿ ಬಂಧನ

KannadaprabhaNewsNetwork |  
Published : Dec 02, 2024, 01:15 AM IST
೧ ಟಿವಿಕೆ ೧ - ತುರುವೇಕೆರೆ ತಾಲ್ಲೂಕು ಅಬಕಾರಿ ಇಲಾಖೆಯ ಪೊಲೀಸರು ಗಾಂಜಾ ಸಂಗ್ರಹ ಮಾಡಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಗೋಡೆಕೆರೆ ಗ್ರಾಮದ ನರೇಶ್‌ನನ್ನು ವಶಕ್ಕೆ ಪಡೆದಿರುವುದು. | Kannada Prabha

ಸಾರಾಂಶ

ತುರುವೇಕೆರೆ ತಾಲೂಕು ಆಡಳಿತ ಗಾಂಜಾ ಮಾರಾಟ ಮಾಡುತ್ತಿದ್ದ ೯ ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭವಾರ್ತೆ ತುರುವೇಕೆರೆ

ತಾಲೂಕು ಆಡಳಿತ ಗಾಂಜಾ ಮಾರಾಟ ಮಾಡುತ್ತಿದ್ದ ೯ ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನಲ್ಲಿ ಗಾಂಜಾ ಮಾರಾಟ ಮತ್ತು ಸಂಗ್ರಹಣೆ ಮಾಡಿರುವ ಆರೋಪದಡಿ ಪಟ್ಟಣದ ಪೊಲೀಸರು ಮತ್ತು ತಾಲೂಕು ಅಬಕಾರಿ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ೯ ಮಂದಿಯನ್ನು ಬಂಧಿಸಿದ್ದಾರೆ. ಪಟ್ಟಣದ ದರ್ಶನ್, ತಿಲಕ್, ಹರ್ಷವರ್ಧನ, ಮಹಮದ್ ಖಲೀಲ್ ಮತ್ತು ತಾಲ್ಲೂಕಿನ ಚಂದ್ರಮೋಹನ, ಮನು, ಪ್ರೀತಂ, ರಾಕೇಶ್ (ತಿಪಟೂರು) ಹಾಗು ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿಯ ಗೋಡೆಕೆರೆ ಗ್ರಾಮದ ನರೇಶ್ ಜಿ.ಎಚ್ ಬಂಧಿತ ಆರೋಪಿಗಳಾಗಿದ್ದಾರೆ. ತಹಶೀಲ್ದಾರ್ ಎನ್.ಎ.ಕುಂಞ ಅಹಮದ್ ಮತ್ತು ತುರುವೇಕೆರೆ ಸಿಪಿಐ ಲೋಹಿತ್ ಪಿಎಸ್‌ಐಗಳಾದ ಪಾಂಡು ಮತ್ತು ಚಿತ್ತರಂಜನ್ ಅವರ ತಂಡ ರಚಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಬಂಧಿತ ಆರೋಪಿಗಳಿಂದ ಸುಮಾರು ೧ ಕೆ.ಜಿಗೂ ಹೆಚ್ಚಿನ ಗಾಂಜಾ ಸೊಪ್ಪು ಮತ್ತು ಇನ್ನಿತರ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಇವರ ಹಿಂದೆ ದೊಡ್ಡ ಜಾಲವೇ ಇರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಸಾಕಷ್ಟು ಆರೋಪಿಗಳು ಸಿಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ
ರಾಜಕ್ಕೆ ಕೇಂದ್ರ ಬಜೆಟ್ಟಲ್ಲಿ ಚೊಂಬು : ಸಿಎಂ ಸಿಡಿಮಿಡಿ