ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಆಂಜನೇಯ ಕಾಟನ್ ಮಿಲ್ ಕಾರ್ಮಿಕ ಕಾಲೋನಿಯಲ್ಲಿ ಕಚೇರಿಗಾಗಿ ಮೀಸಲಿಟ್ಟಿದ್ದ ಸೈಟ್ ನಂ.46ರ 20-30 ಅಡಿ ಅಳತೆ, ಡೋ.ನಂ.322/3-46 ಜಾಗವು ಮೂಲತಃ ಸಿಪಿಐನ ತಾಲೂಕು ಸಮಿತಿ ಹೆಸರಿನಲ್ಲಿದ್ದುದನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದರು.
ಮಾರಾಟ ಮಾಡಿದ ಜಾಗವನ್ನು ಸಿಪಿಐ ಜಿಲ್ಲಾ ಮಂಡಳಿ ಹೆಸರಿಗೆ ವರ್ಗಾವಣೆ ಮಾಡಿ, 2024ರ ಅ.31ರಂದು ಅಂಜನಾ ಆರ್. ಎಂಬುವರಿಗೆ 3.91 ಲಕ್ಷ ರು.ಗೆ ಮಾರಾಟ ಮಾಡಿರುವುದಾಗಿ ದಾಖಲೆ ಇದ್ದು, ಇದು ಸಬ್ ರಿಜಿಸ್ಟರ್ ನಿರ್ಧರಿತ ದರವಾಗಿದೆ. ಆದರೆ, ವಾಸ್ತವದಲ್ಲಿ 14 ಲಕ್ಷ ರು.ಗೂ ಅದಿಕ ಹಣಕ್ಕೆ ನಿವೇಶನ ಮಾರಿಕೊಂಡಿದ್ದಾರೆಂಬ ಶಂಕೆ ನಮಗಿದೆ ಎಂದು ದೂರಿದರು.ಜಿಲ್ಲೆಯಲ್ಲಿ ಸಿಪಿಐನ ಸುಮಾರು 41 ಕೋಟಿ ರು.ಗೂ ಅದಿಕ ಮೌಲ್ಯದ ಆಸ್ತಿ ಇದೆ. ಇಲ್ಲಿನ ಡಾಂಗೇ ಪಾರ್ಕ್ ಎದುರಿನ ನಿವೇಶನ, ಭಗತ್ ಸಿಂಗ್ ನಗರದ ಮೂಲೆಯಲ್ಲಿ 13 ಮಳಿಗೆಗಳ ಸಂಕೀರ್ಣ, ಬೇತೂರು ರಸ್ತೆಯ 9 ಮಳಿಗೆಗಳು ಅಶೋಕ ರಸ್ತೆಯ ಸಿಪಿಐ ಕಚೇರಿ ಕಟ್ಟಡ, ಕೆಳಗೆ ಮತ್ತು ಪಕ್ಕ ಬಾಡಿಗೆ 5 ಮಳಿಗೆಗಳು, ಕುಂದುವಾಡ ಗ್ರಾಮದ ಕಚೇರಿ ಜಾಗ, ಹರಿಹರದ ಕಚೇರಿ ಜಾಗವಿದ್ದು, 2 ಮನೆ ಬಾಡಿಗೆ, ಆವರಗೆರೆ ಗ್ರಾಮದಲ್ಲಿ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಎರಡು ನಿವೇಶನ, ಅಡಿವೆಪ್ಪ ಸಮುದಾಯ ಭವನ ಸೇರಿದಂತೆ ಬಹುಕೋಟಿ ಮೌಲ್ಯದ ಆಸ್ತಿ ಸಿಪಿಐ ಹೊಂದಿದೆ ಎಂದು ತಿಳಿಸಿದರು.
ಕಾಮ್ರೆಡ್ ಸುರೇಶ, ಶೇಖರಪ್ಪ, ಟ್ರಸ್ಟ್‌ನ ಅಧ್ಯಕ್ಷ ಟಿ.ಎಸ್.ನಾಗರಾಜ, ಎನ್.ಟಿ.ತಿಪ್ಪೇಸ್ವಾಮಿ, ಎನ್.ಎಚ್.ರಾಮಪ್ಪ, ವಿಶಾಲಾಕ್ಷಿ, ಎಂ.ಬಿ.ಶಾರದಮ್ಮ, ಶಿವಶರಣಪ್ಪ, ಬಿ.ಓ.ವೀರಣ್ಣ, ಬಸವರಾಜಪ್ಪ, ಕೆ.ಜಿ.ವೆಂಕಟೇಶ, ಮಹಮ್ಮದ್ ಬಾಷಾ, ರಫೀಕ್ ಇತರರು ಇದ್ದರು.