ಕನ್ನಡಪ್ರಭ ವಾರ್ತೆ ಮೂಲ್ಕಿ
ಉಪ್ಪು ನೀರು ಗದ್ದೆಗೆ ನುಗ್ಗಿದ್ದರಿಂದ ಎರಡನೇ ಬಾರಿ ಗದ್ದೆಯಲ್ಲಿ ಕೃಷಿ ಮಾಡಲು ತೊಡಕಾಗಿದೆ. ಮುಂದಿನ ದಿನಗಳಲ್ಲಿ ಬಾವಿಗೆ ಉಪ್ಪು ನೀರು ಸೇರುವ ಸಾಧ್ಯತೆಯಿದ್ದು ಕುಡಿಯುವ ನೀರಿಗೂ ಅಭಾವ ಎದುರಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪಡುಪಣಂಬೂರು ಗ್ರಾಮ ಪಂಚಾಯಿತಿ ಹಾಗೂ ಮುಲ್ಕಿ ನಗರ ಪಂಚಾಯಿತಿ ಗಡಿಭಾಗದ ಶೇಡಿಕಟ್ಟ ಹಳೆಯ ಅಣೆಕಟ್ಟಿಗೆ ಸರಿಯಾಗಿ ಹಲಗೆ ಹಾಕದೆ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದ್ದು ಕೃಷಿಕರಿಗೆ ಹೆಚ್ಚಿನ ಸಮಸ್ಯೆಯಾಗಿದೆ. ಈ ಬಗ್ಗೆ ಅನೇಕ ಬಾರಿ ಮೂಲ್ಕಿ ನಗರ ಪಂಚಾಯಿತಿಗೆ ಅಣೆಕಟ್ಟು ದುರಸ್ತಿ ಬಗ್ಗೆ ಮನವಿ ನೀಡಿದರೂ ಇದುವರೆಗೂ ಸ್ಪಂದನೆ ಸಿಕ್ಕಿಲ್ಲ ಎಂದು ಸ್ಥಳೀಯರಾದ ರಮಾನಂದ ಪಡುಬೈಲು ತಿಳಿಸಿದ್ದಾರೆ.