ಹುಬ್ಬಳ್ಳಿ: ರಾಜ್ಯದಲ್ಲಿ ಜಾರಿಯಾಗಿರುವ ಪರಿಶಿಷ್ಟರಲ್ಲಿನ ಒಳಮೀಸಲು ಹಕ್ಕಿಗಾಗಿ ಹೋರಾಟ ನಡೆಸಲು ಸಮಗಾರ (ಚಮ್ಮಾರ) ಹರಳಯ್ಯ ಸಮಾಜ ನಿರ್ಧರಿಸಿದೆ.
ಸುಧೀರ್ಘ ಹೋರಾಟದ ಬಳಿಕ ರಾಜ್ಯ ಸರ್ಕಾರ ಪರಿಶಿಷ್ಟರ ಮೀಸಲಾತಿಯಲ್ಲಿ ಒಳಮೀಸಲು ಕಲ್ಪಿಸಿದೆ. ಹಾಗಾಗಿ ಮಾದಿಗ ಸಮಾಜದೊಂದಿಗೆ ಎ ಗ್ರೂಪ್‌ನಲ್ಲಿ ಸೇರಿರುವ ಸಮಗಾರ ಸಮಾಜದ ಹಕ್ಕಿನ ಪಾಲು ಪಡೆಯುವುದು ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯ ಇದ್ದು, ಹೋರಾಟ ಅನಿವಾರ್ಯ ಎನ್ನುವ ಅಭಿಪ್ರಾಯವನ್ನು ಮುಖಂಡರು ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಗುರುನಾಥ ಉಳ್ಳಿಕಾಶಿ, ಆನಂದ ಮೊದಲಭಾವಿ, ಸಂಜೀವ ಲೋಕಾಪೂರ, ಪ್ರಭು ಅಣ್ಣಿಗೇರಿ, ಮುತ್ತಪ್ಪ ಕಬಾಡೆ, ಮೈಲಾರೆಪ್ಪ ಸೌದಾಗರ, ಮಂಜುಳಾ ಬೆಣಗಿ, ಡಾ.ಶಿವಾನಂದ ದೊಡಮನಿ, ಅಶೋಕ ಹೊನಕೇರಿ, ಭರಮರೆಡ್ಡಿ ದೊಡಮನಿ, ವೈ.ಸಿ. ಕಾಂಬಳೆ, ಸಂತೋಷ ಕುಮಾರ ಮಾನೆ, ಅಶೋಕ ಭಂಡಾರಿ, ಜಟ್ಟೆಪ್ಪ ಕಾಂಬಳೆ, ಡಾ.ಸಿದ್ದಪ್ಪ ತೇರದಾಳ, ಬಸವಂತಪ್ಪ ಸಣ್ಣಕ್ಕಿ, ರಮೇಶ ದೇವಮಾನೆ, ಶ್ರೀಪಾದ ಬೆಟಗೇರಿ ಸಮಾಜದ ಒಳಿತಿಗಾಗಿ "ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಸಂಘ "ದ ಹಿಂದಿನ ಪದಾಧಿಕಾರಿಗಳ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ಮುಂದುವರೆದಿದ್ದಾರೆ. ತಕ್ಷಣ ನೂತನ ಪದಾಧಿಕಾರಿಗಳನ್ನು ನೇಮಿಸಿ, ಸದಸ್ಯತ್ವದ ಹಣವನ್ನು ಬಡ್ಡಿ ಸಹಿತ ವಸೂಲು ಮಾಡಬೇಕು. ಸಂಘದ ಕಾರ್ಯವನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸುವ ಮೂಲಕ ಸಮಾಜವನ್ನು ಸಂಘಟಿಸಿ, ನಮ್ಮ ಹಕ್ಕಿಗಾಗಿ ರಾಜ್ಯಾದ್ಯಂತ ಹೋರಾಟಕ್ಕೆ ಅಣಿಯಾಗಲು ಮನವಿ ಮಾಡಿದರು.15 ಅಂಶಗಳ ವಿಷಯಾಧಾರಿತ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನಸೆಳೆಯಲು ಮತ್ತು ಸಮಾಜದ ಒಳಿತನ್ನು ಬಯಸುವ ಪ್ರಜ್ಞಾವಂತರ ಕೈಗೆ ರಾಜ್ಯ ಸಂಘವನ್ನು ನೀಡುವುದಕ್ಕೆ ಸಭೆ ಒಮ್ಮತದ ನಿರ್ಣಯ ಕೈಕೊಂಡಿತು.
ಡಾ.ಈ.ಡಿ.ಸೇಡಂಕರ, ಅಶೋಕ ಉಳ್ಳಿಕಾಶಿ, ಎಸ್.ಕೆ ಮಿರಜಕರ, ಪರಶುರಾಮ ರಾಯಭಾಗ, ರಾಘವೇಂದ್ರ ಹೊನಕೋಟೆ, ಸಂತೋಷ ಹಂಜಗಿ, ರಮೇಶ ಸಾಂಬ್ರಾಣಿ, ಧ್ರುವ ಗಾಮನಗಟ್ಟಿ, ಮಹೇಶ ಹೊನ್ನಮೋರೆ, ಬಿ.ಎ ಜಾಧವ, ಲ.ಶ.ಹೊಸಮನಿ, ಸಿದ್ದು, ಹೇಮಂತ ಸೂರ್ಯವಂಶಿ, ನಾಗೇಶ ಚಂದಾವರಿ, ಶಂಕರ ಚಂದಾವರಿ, ಮುತ್ತಣ್ಣ ಕಬಾಡೆ, ಮಾರುತಿ ಹಂಜಗಿ, ವೀರಣ್ಣ ವಿಜಾಪುರ, ಶಿವಾಜಿ ಕಾಂಬ್ಳೆ, ಅಶೋಕ ಹೊನಕೇರಿ, ಮಂಜುನಾಥ ಸಾಬೋಜಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 120 ಕ್ಕೂ ಹೆಚ್ಚು ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು.