ಕನ್ನಡಪ್ರಭ ವಾರ್ತೆ ಅಥಣಿ
ಅನುಭಾವ ನಿಜವಾದ ಅರ್ಥ ಆಗುವುದು ಸತ್ಯ ಶಾಂತಿಯಿಂದ, ಭಕ್ತಿ ಶ್ರದ್ದೆಯಿಂದ ದೇವರನ್ನು ಪ್ರಾರ್ಥನೆ ಮಾಡಿದಾಗ ಮಾತ್ರ ಎಂದು ನಿವೃತ್ತ ಪ್ರಾಚಾರ್ಯ ಸಿದ್ದಣ್ಣಾ ಉತ್ನಾಳ ಹೇಳಿದರು.ಶ್ರೀ ಮುರುಘೇಂದ್ರ ಶಿವಯೋಗಿ ವಿಶ್ವಸ್ಥತ ಸಂಸ್ಥೆ ಆಯೋಜಿಸಿದ ಶ್ರೀ ರೇಣುಕಾಚಾರ್ಯ ಜಯಂತಿ ಮತ್ತು ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಜಾತಿ ಭೇದ ಮಾಡದೆ ಅನೇಕ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತಂದ ಕೀರ್ತಿ ವೀರಶೈವ - ಲಿಂಗಾಯತ ಮಠಾಧೀಶರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಲ್ಲುತ್ತದೆ. ನಮ್ಮ ದೇಶದಲ್ಲಿ ಸಂಸ್ಕ್ರತಿ ಸಂಸ್ಕಾರ ಉಳಿಸುವುದಕ್ಕೆ ಸಂಘ ಸಂಸ್ಥೆಗಳು ಧರ್ಮಗುರುಗಳ ಸಮಾಜ ಸೇವಕರ ಪಾತ್ರ ದೊಡ್ಡದಿದೆ ಎಂದು ಹೇಳಿದರು.
ಯಾವುದೇ ಕಾಯವನ್ನು ಸಂಸ್ಕಾರದಿಂದ ಮಾಡಿದವರಿಗೆ ಸಮಾಜದಲ್ಲಿ ಉನ್ನತ ಸ್ಥಾನ ಸಿಗುವುದು. ಅವರೇ ಮುಂದೆ ಇತಿಹಾಸ ಪುಟದಲ್ಲಿ ಸಾಧಕರಾಗುತ್ತಾರೆ ಎಂದು ಹೇಳಿದರು.ದಿವ್ಯ ಸಾನ್ನಿಧ್ಯವನ್ನು ಶಿವಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಶ್ರದ್ಧೆ, ನಿಷ್ಕಾಮ ಸೇವೆ ಜೀವನದಲ್ಲಿ ಒಮ್ಮೆ ನಮಗೆ ಫಲ ನೀಡುತ್ತದೆ ಎಂದು ಹೇಳಿದರು. ಸಾಧನೆ ಗುರಿ ಮಟ್ಟುವರಿಗೆ ಸಾಧಕ ಎಲ್ಲ ಸವಾಲಗಳನ್ನು ಎದುರಿಸುತ್ತ ಆತ್ಮ ವಿಸ್ವಾಸ ಕಳೆದುಕೊಳ್ಳಬಾರದು ಎಂದು ಹೇಳಿದರು.ಸಮಾರಂಭ ಜ್ಯೋತಿ ಬೆಳಗಿಸುವದರ ಮೂಲಕ ಕಾಜಿಬಿಳಗಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪರಗೌಡ ಶಿವಗೌಡ ಪಾಟೀಲ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಗಂಗಾಧರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿವಯೋಗಿ ಎಸ್. ಮಂಗಸೂಳಿ ಆಗಮಿಸಿದ್ದರು.ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ಬಾಬ್ರಿ ಮಸಿದಿ ಧ್ವಂಸ್ ಹೋರಾಟದಲ್ಲಿ ಭಾಗವಹಿಸಿದ ಕರಸೇವಕ ರೇವಣಸಿದ್ದಪ್ಪ ಶ್ರೀಶೈಲ್ ದೂಪ, ಕೃಷಿ ಕ್ಷೇತ್ರದಲ್ಲಿ ವಿಜಯಪುರದ ಮುರುಘೇಂದ್ರ ದಾನಪ್ಪ ಅರ್ಜುನಗಿ, ಸಹಕಾರ ಕ್ಷೇತ್ರ ಪ್ರಕಾಶ ರುದ್ರಗೌಡ ಪಾಟೀಲ, ಬಸಲಿಂಗಪ್ಪ ಸಿದ್ದಪ್ಪ, ಗಂಗಾಧರ, ನಿವೃತ್ತ ಸೈನಿಕ ಬೆಳಗಾವಿ ಜಿಲ್ಲೆ, ನಾಗಪ್ಪ ಗಂಗಾರಾಮ ಬಿಳಗಿ, ಆಡಳಿತ ಕ್ಷೇತ್ರ ಇವರಿಗೆ ಸನ್ಮಾನ ಪತ್ರ ಶಾಲು ಹೊದಿಸಿ ಫಲ ಪುಷ್ಪ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸ್ವಾಗತ ಮಲ್ಲಿಕಾರ್ಜುನ ಗಂಗಾಧರ, ನಿರೂಪನೆ ಪವಿತ್ರ ಘಂಟಿಮಠ, ವಂದನಾರ್ಪನೆ ಏ.ಕೆ, ಅವರಳಿ ಮಾಡಿದರು.