ಟಾಪರ್ಸ್‌ ಪಿಯು ಕಾಲೇಜಿನ ಸಮರ್ಥ್‌ಗೆ ಐಐಟಿ ಸೀಟು

KannadaprabhaNewsNetwork |  
Published : Sep 09, 2026, 01:45 AM IST
8ಎಚ್ಎಸ್ಎನ್19 | Kannada Prabha

ಸಾರಾಂಶ

೨೦೨೬ರ ಸಾಲಿನಲ್ಲಿ ಜೆಇಇ ಅಡ್ವಾನ್ಸ್‌ ಅನ್ನು ಒಟ್ಟು ೧,೭೯,೬೯೪ ಅಭ್ಯರ್ಥಿಗಳು ಬರೆದಿದ್ದರು. ಫಲಿತಾಂಶದಲ್ಲಿ ೧೦,೧೦೭ ಹೆಣ್ಣು ಮಕ್ಕಳು ಸೇರಿ ಒಟ್ಟು ೫೬,೮೮೦ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಸಮರ್ಥ್ ಎಂ.ಗಿರಿ ಅವರ ತಂದೆ ಗಿರೀಶ್ ಅವರು ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿದ್ದು, ಗಿರೀಶ್ ಅವರು ಟಾಪರ್‍ಸ್ ಪಿಯು ಕಾಲೇಜಿನ ಶಿಕ್ಷಕರ ಬೋಧನೆ, ವಿದ್ಯಾರ್ಥಿಗಳ ಪ್ರಗತಿಗೆ ತೋರಿದ ಕಾಳಜಿ ಹಾಗೂ ಉತ್ತೇಜನವನ್ನು ಅಭಿನಂದಿಸಿದ್ದಾರೆ ಜತೆಗೆ ಮಗನ ಸಾಧನೆಯನ್ನು ಪ್ರಶಂಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪಟ್ಟಣದ ಟಾಪರ್ಸ್‌ ಪಿಯು ಕಾಲೇಜಿನ ವಿದ್ಯಾರ್ಥಿ ಸಮರ್ಥ್ ಎಂ. ಗಿರಿ ಅವರು ೨೦೨೬ರ ಜಂಟಿ ಪ್ರವೇಶ ಪರೀಕ್ಷೆ(ಜೆಇಇ) ಅಡ್ವಾನ್ಸ್‌ಡ್‌ನಲ್ಲಿ ಪ್ರಥಮ ಪ್ರಯತ್ನದಲ್ಲೇ ೫೫೫೨ನೇ ರ್‍ಯಾಂಕ್ ಪಡೆಯುವ ಮೂಲಕ ಗುಜರಾತಿನ ಐಐಟಿ ಕಾಲೇಜಿನಲ್ಲಿ ಪ್ರವೇಶ ಪಡೆದಿರುವುದು ವಿದ್ಯಾಸಂಸ್ಥೆಯು ಕಲಿಕೆಗೆ ನೀಡುವ ಪ್ರಾಮುಖ್ಯತೆ ಜತೆಗೆ ವಿದ್ಯಾರ್ಥಿಗಳ ಏಳಿಗೆಗೆ ನೀಡುವ ಉತ್ತೇಜನಕ್ಕೆ ಸಾಕ್ಷಿಯಾಗಿದೆ.ಮೇ ೧೭ರಂದು ಐಐಟಿಗಳು ಸೇರಿ ದೇಶದ ಪ್ರತಿಷ್ಠಿತ ಸರ್ಕಾರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ನಡೆಸಲಾಗಿದ್ದ ೨೦೨೬ರ ಜಂಟಿ ಪ್ರವೇಶ ಪರೀಕ್ಷೆ(ಜೆಇಇ) ಅಡ್ವಾನ್ಸ್‌ಡ್‌ನಲ್ಲಿ ಪಟ್ಟಣದ ಟಾಪರ್‍ಸ್ ಪಿಯು ಕಾಲೇಜಿನ ವಿದ್ಯಾರ್ಥಿ ಸಮರ್ಥ್ ಎಂ.ಗಿರಿ ಅಖಿಲ ಭಾರತ ಮಟ್ಟದ (ಸಾಮಾನ್ಯ ರ್‍ಯಾಂಕ್) ಪಟ್ಟಿಯಲ್ಲಿ ೫೫೫೨ನೇ ರ್‍ಯಾಂಕ್ ಪಡೆದು, ಗುಜರಾತಿನ ಐಐಟಿ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ೨೦೨೬ರ ಸಾಲಿನಲ್ಲಿ ಜೆಇಇ ಅಡ್ವಾನ್ಸ್‌ ಅನ್ನು ಒಟ್ಟು ೧,೭೯,೬೯೪ ಅಭ್ಯರ್ಥಿಗಳು ಬರೆದಿದ್ದರು. ಫಲಿತಾಂಶದಲ್ಲಿ ೧೦,೧೦೭ ಹೆಣ್ಣು ಮಕ್ಕಳು ಸೇರಿ ಒಟ್ಟು ೫೬,೮೮೦ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಸಮರ್ಥ್ ಎಂ.ಗಿರಿ ಅವರ ತಂದೆ ಗಿರೀಶ್ ಅವರು ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿದ್ದು, ಗಿರೀಶ್ ಅವರು ಟಾಪರ್‍ಸ್ ಪಿಯು ಕಾಲೇಜಿನ ಶಿಕ್ಷಕರ ಬೋಧನೆ, ವಿದ್ಯಾರ್ಥಿಗಳ ಪ್ರಗತಿಗೆ ತೋರಿದ ಕಾಳಜಿ ಹಾಗೂ ಉತ್ತೇಜನವನ್ನು ಅಭಿನಂದಿಸಿದ್ದಾರೆ ಜತೆಗೆ ಮಗನ ಸಾಧನೆಯನ್ನು ಪ್ರಶಂಸಿದರು. ಹೊಳೆನರಸೀಪುರದ ಟಾಪರ್‍ಸ್ ಪಿಯು ಕಾಲೇಜಿನ ವಿದ್ಯಾರ್ಥಿ ಸಮರ್ಥ್ ಎಂ.ಗಿರಿ ಅವರು ೨೦೨೬ರ ಜಂಟಿ ಪ್ರವೇಶ ಪರೀಕ್ಷೆ(ಜೆಇಇ) ಅಡ್ವಾನ್ಸ್‌ಡ್‌ನಲ್ಲಿ ೫೫೫೨ನೇ ರ್‍ಯಾಂಕ್ ಪಡೆದು, ಗುಜರಾತಿನ ಐಐಟಿ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೋಷಿತ ಸಮುದಾಯದ ನೌಕರರು ಸಂಘಟಿತರಾಗಬೇಕು: ಕೆ.ಶೇಷಾದ್ರಿ
ಹನೂರು: ಹಳ್ಳದ ದಂಡೆಯಲ್ಲೇ ಅಂತ್ಯಸಂಸ್ಕಾರ