ಕನ್ನಡಪ್ರಭ ವಾರ್ತೆ ರಾಮದುರ್ಗರಾಯಣ್ಣನ ಹುಟ್ಟೂರಾದ ಸಂಗೊಳ್ಳಿಯಲ್ಲಿ ರಾಜ್ಯ ಸರ್ಕಾರ ವಿಶೇಷ ಮುತುವರ್ಜಿ ವಹಿಸಿ ಸಾವಿರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ, ಪ್ರೇಕ್ಷಣಿಯ ಸ್ಥಳವನ್ನಾಗಿ ಮಾಡಿದ ಕೀರ್ತಿ ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಶಾಸಕ ಹಾಗೂ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಬಿಜೆಪಿ ಮುಖಂಡ ಹಾಗೂ ಶಿಕ್ಷಣ ಪ್ರೇಮಿ ಚಿಕ್ಕರೇವಣ್ಣ ಮಾತನಾಡಿ, ಸಂಗೊಳ್ಳಿ ರಾಯಣ್ಣನ ಜೀವನ ಸಾಧನೆ ಹಾಗೂ ಅವರ ಬದುಕಿನ ರೀತಿ ಬಣ್ಣಿಸಿದ ಅವರು, ಮನೆಗೊಬ್ಬ ರಾಯಣ್ಣ ಅವರಂತ ದೇಶ ಪ್ರೇಮಿ ಹುಟ್ಟಲಿ ಎಂದು ಹೇಳಿದರು.
ಬಿಜೆಪಿ ಮುಖಂಡ, ನ್ಯಾಯವಾದಿ ಪಿ.ಎಫ್. ಪಾಟೀಲ ಮಾತನಾಡಿದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶಿಲ್ಪಾ ಕುಂದರಗೊಂಡ ಮತ್ತು ಡಾ. ವೈ.ಎಂ. ಯಾಕೊಳ್ಳಿ ಉಪನ್ಯಾಸ ನೀಡಿದರು. ಪ್ರೊ.ವೈ.ವೈ. ಕೊಕ್ಕನವರ ಹಾಗೂ ನಿಂಗಣ್ಣಗುಡ್ಡದ ಅವರ ರಾಗರಂಜಿನಿ ಕಲಾ ಬಳಗದವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.ಸಮಾರಂಭದ ಸಾನಿಧ್ಯ ಕವಲಗುಡ್ಡದ ಶ್ರೀಸಿದ್ದಯೋಗಿ ಅಮರೇಶ್ವರ ಸ್ವಾಮೀಜಿ, ಕಟಕೋಳ ಸಿದ್ದರಾಯಾಜ್ಜನವರ ಮಠದ ಅಭಿನವ ಸಿದ್ದರಾಯ ಅಜ್ಜನವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾರಂಭದ ಅಧ್ಯಕ್ಷತೆ ಸಾಲಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಗಡದಾರ ವಹಿಸಿದ್ದರು. ವಿಠ್ಠಲ ಜಟಗನ್ನವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ವೇಳೆ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಪಡಿಯಪ್ಪ ಕ್ವಾರಿ, ಕುರುಬರ ಸಂಘದ ರಾಜ್ಯ ಸಮಿತಿಯ ಮುಖಂಡ ಅಶೋಕ ಮೆಟಗುಡ್ಡ, ಬಿಜೆಪಿ ಮುಖಂಡ ಡಾ. ಕೆ.ವಿ. ಪಾಟೀಲ, ಸಮಾಜದ ಮುಖಂಡರಾದ ಮಲ್ಲಪ್ಪ ಸೋಮಗೊಂಡ, ಎಂ.ಎಫ್. ಕೊಪ್ಪದ, ಜೆ.ಬಿ. ದೇಸಾಯಿ, ಹನಮಂತ ವಡ್ಡರ, ರೂಪಾ ಅರಮನೆ, ಸೋಮಶೇಖರ ಸಿದ್ಲಿಂಗಪ್ಪನವರ, ಲಕ್ಕಪ್ಪ ಜಟ್ಟೆನ್ನವರ, ರವಿ ಮೊರಬದ, ಬಸವರಾಜ ಕರಿಗಾರ, ಫಕೀರಪ್ಪ ಕೊಂಗವಾಡ, ರಾಜೇಶ್ವರಿ ಮೆಟಗುಡ್ಡ, ಬಸವರಾಜ ಪ್ರಧಾನಿ, ಮಲ್ಲಿಕಾರ್ಜುನ ದುರ್ಗನ್ನವರ ಸೇರಿದಂತೆ ಇತರರಿದ್ದರು. ಶಿಕ್ಷಕ ಎಫ್.ಎಲ್. ಮದಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಮಕ್ಕನ್ನವರ ಸ್ವಾಗತಿಸಿ ವಂದಿಸಿದರು.