ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಶ್ರೀ ಕ್ಷೇತ್ರ ಯಡೂರಿನಲ್ಲಿ ನಡೆದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ರಾಜಗೋಪುರ ಉದ್ಘಾಟನೆ, ಕಲಶಾರೋಹಣ ಮತ್ತು ಮಹಾಕುಂಭಾಭಿಷೇಕ ಸಮಾರಂಭದಲ್ಲಿ ಅವರು ಮಾತನಾಡಿದರು. ಇದೊಂದು ಆತ್ಮೀಯ ಪುನರುಜ್ಜೀವನ ಮತ್ತು ನಾಗರಿಕತೆಯ ಪುನರ್ ದೃಢೀಕರಣದ ಕ್ಷಣ ಎಂದ ಉಪ ರಾಷ್ಟ್ರಪತಿ, ಸಿಂಧೂ ಕಣಿವೆಯಿಂದ ಕನ್ಯಾಕುಮಾರಿ ತನಕ ನಿರಂತರವಾಗಿ ಹರಿಯುವ ಚೇತನದ ಪ್ರವಾಹವೇ ಭಾರತ ಎಂದು ಹೇಳಿದರು.
ಈ ಪವಿತ್ರ ಭೂಮಿಯಲ್ಲಿ ವೇದಗಳ ನಿತ್ಯ ಜ್ಞಾನ ಮೊದಲು ಕೇಳಿ ಬಂತು. ಭಗವದ್ಗೀತೆಯ ಮಹತ್ವದ ಸಂದೇಶವು ಧೈರ್ಯದಿಂದ ಕಾರ್ಯ ನಿರ್ವಹಿಸಲು, ಧರ್ಮ ಪರವಾಗಿ ಬದುಕಲು ಮತ್ತು ಭಕ್ತಿಯಿಂದ ಶರಣಾಗಲು ಮಾನವ ಕುಲಕ್ಕೆ ಇಂದಿಗೂ ಮಾರ್ಗದರ್ಶನ ನೀಡುತ್ತಿದೆ. ಹಿಂದೂ ಚೇತನವು ಕೇವಲ ಆಚರಣೆಗಳಿಗೆ ಸೀಮಿತವಾಗಿಲ್ಲ. ಅದು ಜೀವನಶೈಲಿಯಾಗಿದೆ ಎಂದು ಹೇಳಿದರು.ವಿಶ್ವವೇ ಒಂದು ಕುಟುಂಬ ಎನ್ನುವ ವಸುದೈವ ಕುಟುಂಬಕಂ ಎಂಬ ಶಾಶ್ವತ ತತ್ವವನ್ನು ಭಾರತ ಜಗತ್ತಿಗೆ ನೀಡಿದೆ. ಪ್ರಕೃತಿಯಲ್ಲಿ, ಪ್ರತಿಯೊಬ್ಬ ಮಾನವನಲ್ಲಿ ದೈವತ್ವವನ್ನು ಕಾಣುವ ಆಧ್ಯಾತ್ಮಿಕ ದೃಷ್ಟಿ ಭಾರತದ್ದು. ವೀರಶೈವ-ಲಿಂಗಾಯತ ಪರಂಪರೆ, ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಆಧ್ಯಾತ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ವೀರಶೈವ ಮಠಗಳು ಮತ್ತು ದೇವಾಲಯಗಳು ಭಕ್ತಿ, ಸೇವೆ ಮತ್ತು ಸಾಮಾಜಿಕ ಸೌಹಾರ್ದತೆಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದರು.
ಕಾಡಸಿದ್ಧೇಶ್ವರ ಮಠದ ಅನುವಂಶಿಕ ಪೀಠಾಧಿಪತಿಗಳು ನಿತ್ಯ ಪೂಜೆಯ ಆಚರಣೆಗಳು, ಪುನರ್ ನಿರ್ಮಾಣ ಕಾರ್ಯಗಳು ಮತ್ತು ಆಧ್ಯಾತ್ಮಿಕ ಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತಿರುವುದಕ್ಕೆ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಅಭಿವೃದ್ಧಿಯ ಜೊತೆಗೆ ಪರಂಪರೆಯೂ ಇರಬೇಕು ಎಂಬ ಧೋರಣೆಯನ್ನು ಉಲ್ಲೇಖಿಸಿ ಭಾರತ ಇಂದು ತಂತ್ರಜ್ಞಾನದಲ್ಲಿ ಮುನ್ನಡೆಯುತ್ತಿರುವ, ಆರ್ಥಿಕವಾಗಿ ಬಲಿಷ್ಠವಾಗುತ್ತಿರುವ ಹಾಗೂ ಜಾಗತಿಕವಾಗಿ ಪ್ರಭಾವಿ ರಾಷ್ಟ್ರವಾಗುತ್ತಿರುವುದರ ಜೊತೆಗೆ ತನ್ನ ನಾಗರಿಕತೆಯ ಮೌಲ್ಯಗಳನ್ನು ದೃಢವಾಗಿ ಉಳಿಸಿಕೊಂಡಿದೆ ಎಂದು ಅವರು ಹೇಳಿದರು.ರಾಜಗೋಪುರ ಉದ್ಘಾಟನೆ ಕೇವಲ ಕಟ್ಟಡ ನಿರ್ಮಾಣದ ಕಾರ್ಯಕ್ರಮವಲ್ಲ. ಅದು ಭಕ್ತಿ ಪರಂಪರೆ ಮತ್ತು ಸಂಸ್ಕೃತಿಯ ನಿರಂತರತೆಯ ಪುನರ್ ದೃಢೀಕರಣವಾಗಿದೆ. ಪವಿತ್ರ ಕ್ಷೇತ್ರಗಳ ಪುನರುಜ್ಜೀವನವು ಸಾಂಸ್ಕೃತಿಕ ಆತ್ಮವಿಶ್ವಾಸ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದರು.