ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಹಿಂದೂ ಸಮ್ಮೇಳನ ತಾಲೂಕು ಸಮಿತಿ ವತಿಯಿಂದ ಪಟ್ಟಣದ ಹೊರವಲಯದ ಕೆ.ಎಚ್.ಬಿ. ಲೇಔಟ್‌ನಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ಪ್ರಪಂಚವನ್ನೇ ರಕ್ಷಣೆ ಮಾಡುವ ಶಕ್ತಿ ಭಾರತದ ಸನಾತನ ಧರ್ಮಕ್ಕೆ ಇದೆ. ಭಾರತದಲ್ಲಿ ಸನಾತನ ಧರ್ಮ ಉಳಿದಾಗ ಮಾತ್ರ ಜಗತ್ತಿನಲ್ಲಿ ಶಾಂತಿ ವಾತಾವರಣ ನಿರ್ಮಾಣವಾಗಲು ಸಾಧ್ಯ. ಇಂತಹ ಮಹತ್ವವನ್ನು ಹೊಂದಿರುವ ನಮ್ಮ ದೇಶದ ಸಂಸ್ಕೃತಿ, ಸನಾತನ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಲು ದೇಶದ ಪ್ರತಿಯೊಬ್ಬ ಹಿಂದೂ ಭಾಂದವರು ಕೈಜೋಡಿಸಬೇಕಾದ ಅಗತ್ಯವಿದೆ ಎಂದು ಹಿಂದೂಗಳಿಗೆ ಕರೆ ನೀಡಿದರು.
ನಾವು ನಮ್ಮ ಸನಾತನ ಧರ್ಮವನ್ನು ರಕ್ಷಿಣೆ ಮಾಡಿ, ಉಳಿಸಿ ಬೆಳೆಸಿದಾಗ ಒಂದಲ್ಲ ಒಂದು ದಿನ ಇಡೀ ಜಗತ್ತನ್ನೇ ಸನಾತನ ಧರ್ಮ ಆಳ್ವಿಕೆ ಮಾಡುತ್ತೇ ಎಂಬುದಾಗಿ ಕಾಲಜ್ಞಾನಿ ಕೈವಾರ ತಾತಯ್ಯನವರು ತಮ್ಮ ಕಾಲ್ಞಾನದಲ್ಲಿ ತಿಳಿಸಿದ್ದಾರೆ. ಅವರ ನುಡಿಯನ್ನು ನಿಜಗೊಳಿಸುವ ಸಮಯ ಬಂದಿದೆ. ನಾವು ಸಂತರ, ಸಾಧುಗಳ, ಮುನಿಗಳ ಮಾರ್ಗದರ್ಶನದಲ್ಲಿ ನಡೆಯಬೇಕೆಂದರು.ಹಿಂದೂಗಳು ಎಂದಿಗೂ ಅಧರ್ಮ ಮಾರ್ಗದಲ್ಲಿ ನಡೆಯಲ್ಲ, ಭಾರತದ ಹಿಂದೂ ಧರ್ಮಹೊರತುಪಡಿಸಿ ವಿಶ್ವದ ಇತರೆ ಎಲ್ಲಾ ಧರ್ಮದವರು ಅಧರ್ಮ ಮಾರ್ಗದಲ್ಲಿ ತೊಡಗಿಸಿಕೊಂಡಿದ್ದಾರೆ, ನಾವು ಸದಾ ಶಾಂತಿ ಕೋರಿದರೆ ಅವರು ಹಿಂಸೆ ಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂದರು.
ಬಾಗೇಪಲ್ಲಿಯಲ್ಲಿ ನಡೆದ ಹಿಂದೂ ಸಮ್ಮೇಳನ ಅದ್ದೂರಿಯಾಗಿ ನಡೆಯಿತು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಜನ ಹಿಂದೂಗಳು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.
01ಬಿಜಿಪಿ-1: ಬಾಗೇಪಲ್ಲಿಯಲ್ಲಿ ನಡೆದ ಹಿಂದೂ ಸಮ್ಮೇಳನ ಕಾರ್ಯಕ್ರಮದಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ರವರು ಮಾತನಾಡಿದರು.