ಕಳ್ಳರ ಪಾಲಾಗುತ್ತಿದೆ ಕಷ್ಟ ಪಟ್ಟು ಬೆಳೆದ ಶ್ರೀಗಂಧ: ಕೆ.ಅಮರನಾರಾಯಣ

KannadaprabhaNewsNetwork |  
Published : Nov 13, 2025, 12:45 AM IST
ಶ್ರೀಕ್ಷೇತ್ರ ಕಲ್ಲತ್ತಿಗಿರಿ ಸರ್ಕಲ್‌ನಲ್ಲಿ  ಶ್ರೀಗಂಧ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಮಳಿಗೆಗಳ ಉದ್ಗಾಟನೆ | Kannada Prabha

ಸಾರಾಂಶ

ತರೀಕೆರೆ, ರಾಜ್ಯ ಸರಕಾರದ ಪೊಲೀಸ್ ಮತ್ತು ಅರಣ್ಯ ಇಲಾಖೆ ಶ್ರೀಗಂಧ ಬೆಳೆಗಾರರು ಬೆಳೆದ ಬೆಳೆಯನ್ನು ರಕ್ಷಿಸುವ ಹೊಣೆಗಾರಿಕೆ ತೆಗೆದುಕೊಳ್ಳದೇ ಇರುವುದು ಅಕ್ಷ್ಮಮ್ಯ. ಬೆಳೆಗಾರರು ಕಷ್ಟ ಪಟ್ಟು ಬೆಳೆದ ಶ್ರೀಗಂಧ ಕಳ್ಳರ ಪಾಲಾಗುತ್ತಿದೆ ಎಂದ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಗೌರವಾದ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರ ನಾರಾಯಣ ಹೇಳಿದರು.

ಶ್ರೀಕ್ಷೇತ್ರ ಕಲ್ಲತ್ತಿಗಿರಿ ಸರ್ಕಲ್‌ನಲ್ಲಿ ಶ್ರೀಗಂಧ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಮಳಿಗೆಗಳ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ರಾಜ್ಯ ಸರಕಾರದ ಪೊಲೀಸ್ ಮತ್ತು ಅರಣ್ಯ ಇಲಾಖೆ ಶ್ರೀಗಂಧ ಬೆಳೆಗಾರರು ಬೆಳೆದ ಬೆಳೆಯನ್ನು ರಕ್ಷಿಸುವ ಹೊಣೆಗಾರಿಕೆ ತೆಗೆದುಕೊಳ್ಳದೇ ಇರುವುದು ಅಕ್ಷ್ಮಮ್ಯ. ಬೆಳೆಗಾರರು ಕಷ್ಟ ಪಟ್ಟು ಬೆಳೆದ ಶ್ರೀಗಂಧ ಕಳ್ಳರ ಪಾಲಾಗುತ್ತಿದೆ ಎಂದ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಗೌರವಾದ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರ ನಾರಾಯಣ ಹೇಳಿದರು. ಶ್ರೀಕ್ಷೇತ್ರ ಕಲ್ಲತ್ತಿಗಿರಿ ಸರ್ಕಲ್‌ನಲ್ಲಿರುವ ಗಂಧದಗುಡಿ ಭಾಗ 5 ರಲ್ಲಿ ನಿರ್ಮಾಣಗೊಂಡಿರುವ ಶ್ರೀಗಂಧ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿ, ಸರ್ಕಾರ ಗಮನಹರಿಸದ ಕಾರಣ ರೈತರು ತಾವು ಬೆಳೆದ ಶ್ರೀಗಂಧದ ಬೆಳೆ ರಕ್ಷಣೆಗೆ ಮುಂದಾಗಬೇಕು. ಕಳ್ಳತನದಂತಹ ಸಂದರ್ಭಗಳಲ್ಲಿ ಸಂಘದ ಗಮನಕ್ಕೆ ತಂದರೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗುವಂತೆ ಮಾಡಲಾಗುವುದು. ಕರ್ನಾಟಕದಲ್ಲಿ ಬೆಳೆಯುವ ಶ್ರೀಗಂಧ ಅತ್ಯಂತ ಶ್ರೇಷ್ಠ ಗುಣಮಟ್ಟದ್ದಾಗಿದೆ. ದೂರದ ಇಂಗ್ಲೆಂಡ್, ಜರ್ಮನಿ, ಆಸ್ಟ್ರೇಲಿಯಾ, ಅಮೇರಿಕಾ, ಚೀನಾ ದೇಶಗಳು ಕರ್ನಾಟಕದ ಶ್ರೀಗಂಧವನ್ನು ಹೆಚ್ಚು ಬಳಕೆ ಮಾಡಿಕೊಳ್ಳುತ್ತಿವೆ ಎಂದು ಹೇಳಿದರು.ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್ ಮಾತನಾಡಿ, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದಲ್ಲಿ ಇದುವರೆಗೂ 506 ಮಂದಿ ಬೆಳೆಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಶ್ರೀಗಂಧದ ಮರಗಳನ್ನು ಕಳ್ಳರು ಕದ್ಯೊಯ್ದಾಗ, ಬಾಕಿ ಉಳಿದ ಮರದ ಭಾಗಗಳಿಂದ ಜಪಮಾಲೆ, ಸ್ಮರಣ ಫಲಕಗಳು, ದೇವರ ವಿಗ್ರಹಗಳು, ಮಕ್ಕಳ ಅಟಿಕೆಗಳು ಸೇರಿದಂತೆ ಅನೇಕ ತರಹದ ಉತ್ಪನ್ನಗಳನ್ನು ಚನ್ನಪಟ್ಟಣದ ನುರಿತ ಕರ ಕುಶಲಗಾರರಿಂದ ತಯಾರಿಸಿ, ಮಳಿಗೆಗೆಳ ಮೂಲಕ ಮಾರಾಟ ಮಾಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಘದ ಕಾರ್ಯಧ್ಯಕ್ಷ ಎ.ಎಸ್.ಈಶ್ವರಪ್ಪ ಮಾತನಾಡಿದರು. ವನ ಕೃಷಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸುಂದರಗೌಡ, ಯಶಸ್ವಿ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಟಿ.ಆರ್.ನಾಗರಾಜ್, ಶ್ರೀಗಂಧ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಶಿವರಾಜ್, ಪುರಸಭೆ ಮಾಜಿ ಅಧ್ಯಕ್ಷೆ ಗಿರಿಜಮ್ಮನಾಗರಾಜ್ ಹಾಗೂ ಇತರರು ಹಾಜರಿದ್ದರು.--11ಕೆಟಿಆರ್.ಕೆ.3ಃ

ತರೀಕೆರೆ ಸಮೀಪದ ಶ್ರೀ ಕ್ಷೇತ್ರ ಕಲ್ಲತ್ತಿಗಿರಿ ಸರ್ಕಲ್ ನಲ್ಲಿ ಶ್ರೀಗಂಧ ಮೌಲ್ಯ ವರ್ಧಿತ ಉತ್ಪನ್ನಗಳ ಮಾರಾಟ ಮಳಿಗೆಗಳನ್ನುಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಗೌರವಾಧ್ಯಕ್ಷ ಕೆ.ಅಮರನಾರಾಯಣ ಉದ್ಘಾಟಿಸಿದರು. ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್ ಮತ್ತಿತರರು ಇದ್ದರು.

PREV

Recommended Stories

250 ಕೋಟಿ ಹಗರಣ ಕಡತ ನಾಶ ಮಾಡಿದ್ರೂ ಸಿಕ್ಕಿದವು!?
ಬಿಳಿಕೆರೆ ಬಳಿ ಒಂದು ಗಂಡು ಹುಲಿ ಮರಿ ಸೆರೆ