ಮಲ್ಲಯ್ಯ ಪೋಲಂಪಲ್ಲಿಕನ್ನಡಪ್ರಭ ವಾರ್ತೆ ಶಹಾಪುರಶಹಾಪುರ-ಯಾದಗಿರಿ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ತಾಲೂಕಿನ ದೋರನಹಳ್ಳಿ ಗ್ರಾಮದ ಸಮೀಪದಲ್ಲಿ ಹರಿಯುವ ಹಳ್ಳದ ಅಕ್ಕ-ಪಕ್ಕದಲ್ಲಿ ಹಾಗೂ ಇತರ ಕಡೆಗಳಲ್ಲಿ ಬೆಳೆದಿರುವ ಶ್ರೀಗಂಧದ ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಿವೆ.
ಅರಣ್ಯ ಇಲಾಖೆ ವಿಫಲ:ರಸ್ತೆ ಅಕ್ಕ-ಪಕ್ಕ ಹಾಗೂ ಹಳ್ಳದ ದಂಡೆಯಲ್ಲಿ ಬೆಳೆದಿರುವ ಶ್ರೀಗಂಧದ ಮರಗಳನ್ನು ಗುರುತಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ವಿಚಿತ್ರವೆಂದರೆ ಶಹಾಪುರ-ಯಾದಗಿರಿ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದಿರುವ ಶ್ರೀಗಂಧದ ಮರಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಣ್ಣಿಗೆ ಬಿದ್ದರೂ ಅವುಗಳ ರಕ್ಷಣೆಗೆ ಯಾಕೆ ಮುಂದಾಗಿಲ್ಲ. ಮರಗಳ್ಳರ ಜೊತೆ ಈ ಅಧಿಕಾರಿಗಳು ಕೈಜೋಡಿಸಿದ್ದಾರೆಯೇ ಎನ್ನುವ ಅನುಮಾನಗಳು ಬರುತ್ತಿದೆ ಎನ್ನುತ್ತಾರೆ ಕಾರ್ಮಿಕ ಸಂಘದ ಮುಖಂಡ ನಿಂಗಣ್ಣ ನಾಟೇಕಾರ್.
ಜಿಪಿಎಸ್ ಅಳವಡಿಕೆಗೆ ಒತ್ತಾಯ:ಚಿನ್ನದಷ್ಟೇ ಬೆಲೆ ಬಾಳುವ ಶ್ರೀಗಂಧದ ಮರಗಳಿಗೆ ಜಿಪಿಎಸ್ ಅಳವಡಿಸಿ, ಸಿರಿ ಸಂಪತ್ತು ಶ್ರೀಗಂಧವನ್ನು ಉಳಿಸಿ, ಬೆಳೆಸುವ ಕೆಲಸವಾಗಬೇಕು ಎಂದು ಸಾಮಜಿಕ ಹೋರಾಟಗಾರ ಬಸವರಾಜ್ ಭಜಂತ್ರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.ಸಸ್ಯ ಸಂರಕ್ಷಣೆಗೆ ಮುಂದಾಗಿ:ಪ್ರಕೃತಿಯಲ್ಲಿ ಶ್ರೀಗಂಧ ಸೇರಿದಂತೆ ಇತರೆ ಅತ್ಯಮೂಲ್ಯವಾದ ಸಸ್ಯ ಸಂಪತ್ತಿದೆ. ಅದರ ರಕ್ಷಣೆ ಹೊಣೆ ಹೊತ್ತ ಅರಣ್ಯ ಅಧಿಕಾರಿಗಳು ಸಸ್ಯ ಸಂರಕ್ಷಣೆಗೆ ಮುಂದಾಗದೆ, ನಾಮ್ ಕೆ ವಾಸ್ತೆ ಕಾರ್ಯ ನಿರ್ವಹಿಸುತ್ತಾರೆ ಎನ್ನುವ ಆರೋಪವಿದೆ. ಮರಗಳ್ಳರು ಗಿಡಮರಗಳ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದ್ದರೂ, ಕಂಡು ಕಾಣದಂತೆ ಇರುವುದು ಯಾವ ನ್ಯಾಯ? ತೆಗೆದುಕೊಳ್ಳೋ ಸಂಬಳಕ್ಕಾದರೂ ನಿಯತ್ತಾಗಿ ಕೆಲಸ ಮಾಡಿ ಸಸ್ಯ ಸಂಪತ್ತನ್ನು ಸಂರಕ್ಷಿಸಬೇಕು ಎಂದು ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪ್ರದೀಪ್ ಅಣಬಿ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
-ಕಾಜೋಲ್ ಪಾಟೀಲ್, ಡಿಎಫ್ ಒ, ಪ್ರಾದೇಶಿಕ ಅರಣ್ಯ ಇಲಾಖೆ ಯಾದಗಿರಿ
ಅತ್ಯಮೂಲ್ಯವಾದ ಸಸ್ಯ ಸಂಪತ್ತು ಉಳಿಸಬೇಕಾಗಿದೆ. ಬೆಳೆಸಿದರೆ ಬೆಳೆಯದ ಶ್ರೀಗಂಧದ ಮರಗಳು ನೈಸರ್ಗಿಕವಾಗಿ ನಮ್ಮ ಭಾಗದಲ್ಲಿ ಬೆಳೆಯುತ್ತಿವೆ. ಈ ಮರಗಳನ್ನು ರಕ್ಷಿಸುವುದು ಅತಿ ಮುಖ್ಯ. ಇವುಗಳಿಗೆ ಜಿಪಿಎಸ್ ಅಳವಡಿಸಿ, ಅರಣ್ಯ ಸಿಬ್ಬಂದಿಗಳನ್ನು ಗಸ್ತು ತಿರುಗುವ ವ್ಯವಸ್ಥೆ ಅತಿ ಶೀಘ್ರದಲ್ಲಿ ಅರಣ್ಯ ಇಲಾಖೆ ಮಾಡಬೇಕು.- ಭಾಸ್ಕರರಾವ್ ಮುಡುಬೂಳ, ಹಿರಿಯ ನ್ಯಾಯವಾದಿ