ಸಂಡೂರು ಪುರಸಭೆ: ೮೪.೪೨ ಲಕ್ಷ ಉಳಿತಾಯ ಬಜೆಟ್ ಮಂಡನೆ

KannadaprabhaNewsNetwork | Published : Mar 23, 2025 1:30 AM

ಸಾರಾಂಶ

ಪಟ್ಟಣದ ಪುರಸಭೆಯ ಅಧ್ಯಕ್ಷ ಎಸ್. ಸಿರಾಜ್ ಹುಸೇನ್ ಪುರಸಭೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ೨೦೨೫-೨೬ನೇ ಸಾಲಿನ ಬಜೆಟ್ ಮಂಡಿಸಿದರು.

ಕನ್ನಡಪ್ರಭ ವಾರ್ತೆ ಸಂಡೂರು

ಪಟ್ಟಣದ ಪುರಸಭೆಯ ಅಧ್ಯಕ್ಷ ಎಸ್. ಸಿರಾಜ್ ಹುಸೇನ್ ಪುರಸಭೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ೨೦೨೫-೨೬ನೇ ಸಾಲಿನ ಬಜೆಟ್ ಮಂಡಿಸಿದರು.

೮೪.೪೨ ಲಕ್ಷ ಉಳಿತಾಯ ಬಜೆಟ್:೨೦೨೫-೨೬ನೇ ಸಾಲಿನಲ್ಲಿ ೩೩,೫೧,೮೪,೦೦೦ ಆದಾಯ ಹಾಗೂ ೩೨,೬೭,೪೨,೦೦೦ ವೆಚ್ಚ ನಿರೀಕ್ಷಿಸಲಾಗಿದ್ದು, ಒಟ್ಟು ೮೪,೪೨,೦೦೦ ಉಳಿತಾಯ ಬಜೆಟ್ ಅನ್ನು ಅಧ್ಯಕ್ಷರು ಘೋಷಿಸಿದರು.

ಪ್ರಮುಖ ನಿರೀಕ್ಷಿತ ಆದಾಯ ಹಾಗೂ ಮೂಲಗಳು:

ಆಸ್ತಿ ತೆರಿಗೆ ರೂ.೧೭೮.೭೦ ಲಕ್ಷ, ನೀರಿನ ತೆರಿಗೆ ೬೯.೫೦ ಲಕ್ಷ, ಮಳಿಗೆ ಬಾಡಿಗೆ ೩೬.೫೦ ಲಕ್ಷ, ೧೫ನೇ ಹಣಕಾಸು ಆಯೋಗದ ಅನುದಾನ ೨೬೮ ಲಕ್ಷ, ಎಸ್‌ಎಫ್‌ಸಿ ವೇತನ ಅನುದಾನ ೪೧೬ ಲಕ್ಷ, ಎಸ್‌ಎಫ್‌ಸಿ ವಿದ್ಯುತ್ ಅನುದಾನ ೫೪೦ ಲಕ್ಷ, ಪುರಸಭೆಯ ಇತರೆ ಸೇವೆಗಳಿಂದ ಬರಬಹುದಾದ ಆದಾಯ ೧೩೧.೫೯ ಲಕ್ಷ.

ಕಾಯ್ದಿರಿಸಿದ ಪ್ರಮುಖ ವೆಚ್ಚಗಳು:ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ೨೦೫ ಲಕ್ಷ, ಸಾರ್ವಜನಿಕ ಬೀದಿ ದೀಪಗಳ ಅಭಿವೃದ್ಧಿ ಮತ್ತು ನಿರ್ವಹಣೆ ೩೧೨.೮೦ ಲಕ್ಷ, ರುದ್ರಭೂಮಿ ಹಾಗೂ ಪಾರ್ಕ್ಗಳ ಅಭಿವೃದ್ಧಿ ೩೦ ಲಕ್ಷ, ವಾಹನ ಮತ್ತು ಆಧುನಿಕ ಸಲಕರಣೆ, ಯಂತ್ರೋಪಕರಣಗಳ ಖರೀದಿ ೧೧೭ ಲಕ್ಷ, ಘನತ್ಯಾಜ್ಯವಸ್ತು ನಿರ್ವಹಣೆಗಾಗಿ ೧೭೩ ಲಕ್ಷ, ಕುಡಿಯುವ ನೀರು ನಿರ್ವಹಣೆಗಾಗಿ ೬೭೯.೫೦ ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಂಗವಿಕಲರ ಅಭಿವೃದ್ಧಿಗಾಗಿ ೫೦.೬೭ ಲಕ್ಷ.

ವೇತನ ಪಾವತಿಗಾಗಿ ೪೧೬ ಲಕ್ಷ, ಪುರಸಭೆ ಬಸ್ ನಿಲ್ದಾಣ ಅಭಿವೃದ್ಧಿಗಾಗಿ ೬ ಲಕ್ಷ, ಫುಡ್ ಕೋರ್ಟ್ ನಿರ್ಮಾಣಕ್ಕಾಗಿ ೧೨ ಲಕ್ಷ, ಪ್ರಮುಖ ಸರ್ಕಲ್‌ಗಳ ಅಭಿವೃದ್ಧಿಗಾಗಿ ೫ ಲಕ್ಷ, ಪಟ್ಟಣದಲ್ಲಿನ ವಾರ್ಡ್, ರಸ್ತೆ ಹಾಗೂ ತಿರುವುಗಳ ನಾಮಫಲಕ ಅಳವಡಿಕೆಗಾಗಿ ೧೦ ಲಕ್ಷ, ಸಿಸಿ ಕ್ಯಾಮೆರಾ ಅಳವಡಿಕೆಗಾಗಿ ೧೦ ಲಕ್ಷ ಮತ್ತು ಬಡಜನರಿಗೆ ಉಚಿತವಾಗಿ ನಳ ಸಂಪರ್ಕ ಕಲ್ಪಿಸುವುದಕ್ಕಾಗಿ ೬ ಲಕ್ಷ.

ಸರ್ವ ಸದಸ್ಯರು ೨೦೨೫-೨೬ನೇ ಸಾಲಿನ ಬಜೆಟ್‌ಗೆ ಅನುಮೋದನೆ ನೀಡಿದರಲ್ಲದೆ, ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು, ಪಾರ್ಕ್ಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಪುರಸಭೆ ಯೋಜನಾಧಿಕಾರಿ ಪ್ರಭುರಾಜ್ ಹಗರಿ ಬಜೆಟ್‌ನ ಆಯ-ವ್ಯಯದ ವಿವರಗಳನ್ನು ತಿಳಿಸಿದರು. ಪುರಸಭೆ ಉಪಾಧ್ಯಕ್ಷೆ ಎಂ.ಸಿ ಲತಾ, ಮುಖ್ಯಾಧಿಕಾರಿ ಕೆ. ಜಯಣ್ಣ, ಸದಸ್ಯರಾದ ವೀರೇಶ್ ಶಿಂಧೆ, ಎಲ್.ಹೆಚ್. ಶಿವಕುಮಾರ್, ಕೆ.ವಿ. ಸುರೇಶ್, ಸಂತೋಷ್, ವತ್ಸಲಾ, ಎ. ಪಂಪಣ್ಣ, ಹನುಮೇಶ್, ಸಿ.ಕೆ. ಅಶೋಕ್, ಬ್ರಹ್ಮಯ್ಯ, ಅಬ್ದುಲ್ ಮುನಾಫ್, ಮಾಳ್ಗಿ ರಾಮಪ್ಪ, ಆಶಾ ನರಸಿಂಹ, ಯರೆಮ್ಮ, ತಿಪ್ಪಮ್ಮ, ಕೆ. ಹರೀಶ್, ದುರುಗಮ್ಮ, ಹೆಚ್. ರತ್ನಮ್ಮ, ದೀಪಾ, ಲಕ್ಷಿö್ಮದೇವಿ, ದೀಪಾ, ಸಿಬ್ಬಂದಿ ಉಪಸ್ಥಿತರಿದ್ದರು.

Share this article