ಕನ್ನಡಪ್ರಭ ವಾರ್ತೆ ಹೊಸದುರ್ಗ
ಬುಧವಾರ ಕೆರೆಗೆ ಭೇಟಿ ನೀಡಿ, ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿದ ಶ್ರೀಗಳು ಪ್ರಗತಿಯ ಕುರಿತು ತೀವ್ರ ಸಂತಸ ವ್ಯಕ್ತಪಡಿಸಿದರು.
ಕೆರೆಯ ಒಡಲು ಸ್ವಚ್ಛವಾಗುತ್ತಿರುವುದನ್ನು ಕಂಡು ಹರ್ಷಿಸಿದ ಶ್ರೀಗಳು, ಮಳೆರಾಯನು ಕೃಪೆ ತೋರಿ ಆದಷ್ಟು ಬೇಗ ಕೆರೆ ತುಂಬುವಂತಾಗಲಿ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಸಿ, ಈ ಭಾಗದ ರೈತರ ಬಾಳು ಹಸನಾಗಲಿ ಎಂದು ಹರಸಿದರು.ಕೆರೆಯ ಮಧ್ಯ ಭಾಗದಲ್ಲಿರುವ ಐತಿಹಾಸಿಕ ದೇವ ಕನ್ನೆಕಿಯರ ಭಾವಿಯು ಸದ್ಯ ಶಿಥಿಲಾವಸ್ಥೆಯಲ್ಲಿದೆ. ಇದನ್ನು ಸೂಕ್ಷ್ಮವಾಗಿ ವೀಕ್ಷಿಸಿದ ಪಂಡಿತಾರಾಧ್ಯ ಸ್ವಾಮೀಜಿಯವರು, ಈ ಪುರಾತನ ಭಾವಿಗೆ ಸೂಕ್ತ ಸಂಪರ್ಕ ಕಲ್ಪಿಸಲು ಹಾಗೂ ಅದನ್ನು ನವೀಕರಿಸಲು ತಕ್ಷಣವೇ ಮಾರ್ಗ ಮಾಡಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು. ಅಲ್ಲದೆ ದೇವ ಕನ್ನೆಕಿಯರ ಭಾವಿಯ ಮಾರ್ಗ ಕಲ್ಪಿಸಲು ಆರ್ಥಿಕ ನೆರವನ್ನು ಸಾಣೇಹಳ್ಳಿ ಮಠದಿಂದಲೇ ಭರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹೂಳೆತ್ತುವ ಕಾರ್ಯದ ಉಸ್ತುವಾರಿ ವಹಿಸಿಕೊಂಡಿರುವ ಎಂಜಿನಿಯರ್ ಉಮೇಶ್, ಸಾಣೇಹಳ್ಳಿ ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.