ಕನ್ನಡಪ್ರಭ ವಾರ್ತೆ ಮಂಗಳೂರು
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಸಂಘನಿಕೇತನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಎಂ. ಸತೀಶ ಪ್ರಭು, ಗಣೇಶೋತ್ಸವ ಯಶಸ್ಸಿಗೆ ಕೆ. ಪ್ರವೀಣ್ ಕುಮಾರ್ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸೆ.7ರಂದು ಬೆಳಗ್ಗೆ 10ಕ್ಕೆ ಮಣಿಪಾಲ ಗ್ಲೋಬಲ್ ಎಜ್ಯುಕೇಶನ್ ಅಧ್ಯಕ್ಷ ಟಿ.ವಿ. ಮೋಹನದಾಸ ಪೈ ಗಣೇಶೋತ್ಸವ ಉದ್ಘಾಟಿಸುವರು ಎಂದರು.
ಧ್ವಜಾರೋಹಣ, ವಂದೇ ಮಾತರಂ, ಗಣಹೋಮ, ಮಹಾಪೂಜೆ ಬಳಿಕ ರಥಬೀದಿಯ ಶ್ರೀ ವೀರವೆಂಕಟೇಶ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಗಣೇಶೋತ್ಸವ ಸಮಿತಿ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಸಂಜೆ 7 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಲೋಟಸ್ ಪ್ರಾಪರ್ಟಿಸ್‌ನ ಜಿತೇಂದ್ರ ಕೊಟ್ಟಾರಿ ಬಹುಮಾನ ವಿತರಿಸುವರು. 7.45ಕ್ಕೆ ಮೂಡಗಣಪತಿ ಪೂಜೆ ಹಾಗೂ ರಂಗಪೂಜೆ ನಡೆಯಲಿದೆ ಎಂದು ಹೇಳಿದರು.ಸೆ.8ರಂದು ಸಂಜೆ 6ಕ್ಕೆ ವಿದುಷಿ ಮೇಧಾ ವಿದ್ಯಾಭೂಷಣ್ ಅವರಿಂದ ಭಜನ್ ಸಂಧ್ಯಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊಫೆಶನಲ್ ಕೊರಿಯರ್ಸ್‌ನ ನರೇಂದ್ರ ನಾಯಕ್ ಮಿತ್ತಬೈಲ್ ವಹಿಸಲಿದ್ದಾರೆ. ಸೆ.9ರಂದು ಸಂಜೆ 6ಕ್ಕೆ ಕರ್ನಾಟಕ ಯಕ್ಷಧಾಮದ ಜನಾರ್ದನ ಹಂದೆ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ‘ಭಕ್ತಿವಿಜಯ’ ನಡೆಯಲಿದೆ. ಅಧ್ಯಕ್ಷತೆಯನ್ನು ಸಿಟಾಡೆಲ್ ಡೆವಲಪರ್ಸ್‌ನ ನಿರ್ದೇಶಕ ರಾಮಕುಮಾರ್ ಬೇಕಲ್ ವಹಿಸಲಿದ್ದಾರೆ ಎಂದು ಸತೀಶ್ ಪ್ರಭು ವಿವರಿಸಿದರು.
11ರಂದು ಶೋಭಾಯಾತ್ರೆ:
ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಕಾರ್ಯದರ್ಶಿ ಗಜಾನನ ಪೈ, ಸಂಘನಿಕೇತನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಜಿ.ಸುರೇಶ್ ವಿ.ಕಾಮತ್, ಕಾರ್ಯದರ್ಶಿ ಯು.ನಂದನ ಮಲ್ಯ, ಕಾರ್ಯಕಾರಿಣಿ ಸದಸ್ಯ ಪ್ರಕಾಶ್ ಗರೋಡಿ ಇದ್ದರು.