ಸ್ಮಾಲ್ ಕಿಕ್ಕರ್
--
-ಅಬ್ಬೆತುಮಕೂರು ಶ್ರೀಗಳ ಆಶೀರ್ವಾದ ಪಡೆದ ಸಚಿವ ರಾಜೂಗೌಡ--
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿರುವ ಘಟನೆ ಕುರಿತು ಮಾಜಿ ಸಚಿವ, ಬಿಜೆಪಿ ರಾಜ್ಯ ಮುಖಂಡ ನರಸಿಂಹ ನಾಯಕ (ರಾಜೂಗೌಡ) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ಎಲ್ಲರಿಗೂ ಒಂದೇ ಮತದ ಹಕ್ಕಿದೆ. ಹಿಂದುತ್ವ ನಿಜವಾಗಿ ಬಲಿಷ್ಠವಾಗಬೇಕಾದರೆ ಎಸ್‌ಸಿ, ಎಸ್‌ಟಿ ಸೇರಿದಂತೆ ಎಲ್ಲ ದಲಿತ ಸಮುದಾಯದವರನ್ನು ಸಮಾನವಾಗಿ ಒಳಗೊಳ್ಳಬೇಕು. ಅವರನ್ನು ದೂರವಿಟ್ಟು ಹಿಂದುತ್ವದ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
* ಜಮೀರ್ ಸಚಿವ ಸ್ಥಾನದಿಂದ ವಜಾ ಮಾಡಲಿ:
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದ ರಾಜುಗೌಡ, ಅವರ ರಾಜೀನಾಮೆ ಪಡೆಯುವವರೆಗೆ ಬಿಜೆಪಿ ಹೋರಾಟ ಮುಂದುವರಿಸಲಿದೆ. ಆ.17ರಿಂದ ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಆ.23ರಿಂದ ದೇವದುರ್ಗದಿಂದ ಪಾದಯಾತ್ರೆ ಆರಂಭಿಸಿ ಮಾನವಿ ಮೂಲಕ ಬಳ್ಳಾರಿವರೆಗೆ ಸಾಗುವ ಕುರಿತು ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್.ಎಸ್.ಎಸ್ ಬೆನ್ನು ಬೀಳುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಬಿಜೆಪಿ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಸಲಹೆ ನೀಡಿದರು. ಅವರು ನನ್ನ ಆತ್ಮೀಯ ಸೋದರರಿದ್ದಂತೆ. ಅವರು ಗೃಹ ಸಚಿವರಾಗಿ ಉತ್ತಮ ಕೆಲಸ ಮಾಡಬೇಕು ಎಂಬುದು ನಮ್ಮ ಆಸೆ. ಆರ್‌ಎಸ್ಎಸ್ ರಾಷ್ಟ್ರ ನಿರ್ಮಾಣಕ್ಕಾಗಿ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ. ಪ್ರವಾಹ, ಭೂಕಂಪ, ಕೊರೊನಾ ಸೇರಿದಂತೆ ವಿಪತ್ತಿನ ಸಂದರ್ಭಗಳಲ್ಲಿ ಸ್ವಯಂಪ್ರೇರಿತವಾಗಿ ಸೇವೆ ಸಲ್ಲಿಸಿದೆ ಎಂದರು. ನಾನು ದಲಿತ ಸಂಘರ್ಷ ಸಮಿತಿಯಿಂದ ಬಂದವನು. ಆರ್.ಎಸ್.ಎಸ್ ದಲಿತ ವಿರೋಧಿ ಎಂದು ಆರೋಪಿಸುವುದಾದರೆ ಉದಾಹರಣೆಗಳನ್ನು ನೀಡಿ ತಪ್ಪಿದ್ದರೆ ನಾವೇ ಪ್ರಶ್ನಿಸುತ್ತೇವೆ. ಆದರೆ ಸುಮ್ಮನೆ ಸಂಘದ ಹೆಸರನ್ನು ಜಪಿಸುವುದು ಬೇಡ ಎಂದರು. ಯುವ ನಾಯಕರು ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಬೇಕು. ಅನಗತ್ಯ ಪ್ರಚಾರದ ಬದಲು ಉತ್ತಮ ಕೆಲಸ ಮಾಡಿ, ಆ ಕೆಲಸವೇ ಪ್ರಚಾರ ತಂದುಕೊಡುವಂತೆ ಕಾರ್ಯನಿರ್ವಹಿಸಿ ಎಂದು ರಾಜುಗೌಡ ಸಲಹೆ ನೀಡಿದರು.
14ವೈಡಿಆರ್8 : ಸಚಿವ ರಾಜೂಗೌಡ ಅವರು ಶುಕ್ರವಾರ ಅಬ್ಬೆತುಮಕೂರು ಶ್ರೀಗಳ ಆಶೀರ್ವಾದ ಪಡೆದರು.