ನರಗುಂದ: ತಾಲೂಕಿನ ಸಂಕದಾಳ ಗ್ರಾಮದಲ್ಲಿ ಶಿವಾನಂದಸ್ವಾಮಿಗಳ ಮಠದ ಜಾತ್ರಾ ಮಹೋತ್ಸವ ಹಾಗೂ ಸದ್ಗುರು ಚನ್ನಬಸಯ್ಯ ಮಹಾಸ್ವಾಮಿಗಳ 73ನೇ ವಾರ್ಷಿಕ ಪುಣ್ಯಾರಾಧನೆ ಮತ್ತು ಗ್ರಂಥ ಬಿಡುಗಡೆ ಸಮಾರಂಭ ಮೇ 21ರಿಂದ 25ರ ವರೆಗೆ ಜರುಗಲಿದೆ. 21ರಿಂದ 24ರವರೆಗೆ ಪುಣ್ಯಾರಾಧನೆ ಅಂಗವಾಗಿ ಜಪಯಜ್ಞ ಜರುಗಲಿದೆ. 23ರಂದು ಚನ್ನಬಸಯ್ಯ ಮಹಾಸ್ವಾಮಿಗಳ ಜನ್ಮಭೂಮಿಯಾದ ಯಾ.ಸ. ಹಡಗಲಿ ಗ್ರಾಮದಿಂದ ಗ್ರಂಥ ಮತ್ತು ಜ್ಯೋತಿಯಾತ್ರೆ ಸದಾಶಿವಾನಂದಸ್ವಾಮಿಗಳ ನೇತೃತ್ವದಲ್ಲಿ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಿ ಯಾವಗಲ್ಲ, ಸುರಕೋಡ, ನರಗುಂದ, ಚಿಕ್ಕನರಗುಂದ, ಬೆನಕೊಪ್ಪ ಗ್ರಾಮಗಳ ಮುಖಾಂತರವಾಗಿ ಸಂಜೆ 6 ಗಂಟೆಗೆ ಸಂಕದಾಳ ಗ್ರಾಮಕ್ಕೆ ಆಗಮಿಸಲಿದೆ. 21ರಂದು ಸಂಜೆ 7.30ಕ್ಕೆ ಪ್ರವಚನ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ.
ಸಚ್ಚಿದಾನಂದಸ್ವಾಮಿಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಗ್ರಂಥ ಬಿಡುಗಡೆ, ಜ್ಯೋತಿಯಾತ್ರೆ ಮೇ-23ರಂದು ಸಂಜೆ 7.30ಕ್ಕೆ ಚನ್ನಬಸಯ್ಯಸ್ವಾಮಿಗಳ ಗ್ರಂಥ ಬರಮಾಡಿಕೊಳ್ಳುವುದು, ಪಾದಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ.ಕಾರ್ಯಕ್ರಮದಲ್ಲಿ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಶ್ರೀಗಳು, ಪತ್ರಿವನ ಮಠದ ಡಾ. ಗುರುಸಿದ್ಧವೀರ ಶಿವಾಚಾರ್ಯರ ಶಿವಯೋಗಿ ಶ್ರೀಗಳು, ಚಿದಾನಂದ ಶ್ರೀಗಳು, ವಿಜಯಕುಮಾರ ತೋಟರ, ಮೈಲಾರಜ್ಜನವರು, ಯೋಗಾನಂದಸ್ವಾಮಿಗಳು, ಬಸಯ್ಯಸ್ವಾಮಿಗಳು, ಶಿವಯ್ಯ ಹಿರೇಮಠ, ಶಿವನಗೌಡ ರಾಯನಗೌಡ್ರ, ರಾಯನಗೌಡ ಚನ್ನವೀರಗೌಡ್ರ, ರಮೇಶ ಕರಕನಗೌಡ್ರ, ಶ್ರೀನಿವಾಸ ರಾಯರಡ್ಡಿ, ಡಾ. ಸುರೇಶ ಭೂಮಣ್ಣವರ ಭಾಗಿಯಾಗಲಿದ್ದಾರೆ.
ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಭೈರನಹಟ್ಟಿ-ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು, ಶಿವಕುಮಾರ ಶ್ರೀಗಳು, ಮಡಿವಾಳೇಶ್ವರ ಶ್ರೀಗಳು, ಯೋಗಾನಂದ ಶ್ರೀಗಳು, ಎಸ್.ಜಿ. ಕಂಬಾಳಿಮಠ, ಹೊಳಬಸಯ್ಯ ಸುರೇಬಾನಮಠ ಇತರರು ಭಾಗಿಯಾಗುವರು.25ರಂದು ಲಿಂ. ಚನ್ನಬಸಯ್ಯ ಸ್ವಾಮಿಗಳ 73ನೇ ವಾರ್ಷಿಕ ಪುಣ್ಯಾರಾಧನೆ ನಡೆಯಲಿದೆ, ಬೆಳಗ್ಗೆ 10.30ಕ್ಕೆ ವೇದಾಂತ ಸಭೆ ಜರುಗಲಿದೆ. ಸಂಜೆ 4ಗಂಟೆಗೆ ಶಿವಾನಂದ ಮಹಾಸ್ವಾಮೀಜಿಗಳ ಭಾವಚಿತ್ರದ ಮೆರವಣಿಗೆ ಜರುಗಲಿದೆ ಎಂದು ಮಾಜಿ ಸೈನಿಕ ಮಹೇಶ್ವರಯ್ಯ ಸುರೇಬಾನವರು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.