ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಸಂಕನೂರೋ, ಲಿಂಬಿಕಾಯೋ..!

KannadaprabhaNewsNetwork |  
Published : Oct 27, 2026, 02:15 AM IST
ಮೋಹನ ಲಿಂಬಿಕಾಯಿ | Kannada Prabha

ಸಾರಾಂಶ

ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಎಸ್‌.ವಿ. ಸಂಕನೂರ ಅವರು ಗೆಲವು ಸಾಧಿಸುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡುತ್ತಾರೋ ಅಥವಾ ಅವರ ಗೆಲುವಿಗೆ ಓಟಕ್ಕೆ ಮೋಹನ ಲಿಂಬಿಕಾಯಿ ತಡೆ ಹಾಕಿ ಈ ಕ್ಷೇತ್ರವನ್ನು ಮರಳಿ ಕಾಂಗ್ರೆಸ್‌ ತೆಕ್ಕೆಗೆ ತರಲಿದ್ದಾರೆಯೇ?

ಧಾರವಾಡ:

ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಎಸ್‌.ವಿ. ಸಂಕನೂರ ಅವರು ಗೆಲವು ಸಾಧಿಸುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡುತ್ತಾರೋ ಅಥವಾ ಅವರ ಗೆಲುವಿಗೆ ಓಟಕ್ಕೆ ಮೋಹನ ಲಿಂಬಿಕಾಯಿ ತಡೆ ಹಾಕಿ ಈ ಕ್ಷೇತ್ರವನ್ನು ಮರಳಿ ಕಾಂಗ್ರೆಸ್‌ ತೆಕ್ಕೆಗೆ ತರಲಿದ್ದಾರೆಯೇ?.

ಇಲ್ಲಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆಯಲಿರುವ ಮತ ಎಣಿಕೆಯು ಈ ಪ್ರಶ್ನೆಗೆ ಉತ್ತರ ನೀಡಲಿದೆ. ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಫಲಿತಾಂಶ ಅ. 27ರಂದು ಪ್ರಕಟವಾಗಲಿದ್ದು, ಕೃಷಿ ವಿವಿ ಆವರಣವು ಮತ ಎಣಿಕೆಗೆ ಸಜ್ಜಾಗಿದೆ.

ಕಳೆದ ಅ. 23ರಂದು ನಡೆದ ಚುನಾವಣೆಯಲ್ಲಿ ಒಟ್ಟು 97,400 ಮತದಾರ ಪೈಕಿ 73,692 ಮತಗಳು ಅಂದರೆ ಶೇ.75.66ರಷ್ಟು ಮತದಾನವಾಗಿತ್ತು. ಇದೀಗ ಮಂಗಳವಾರ ಬೆಳಗ್ಗೆ 8ಕ್ಕೆ ಮತ ಎಣಿಕೆ ಪ್ರಕ್ರಿಯೆ ಶುರುವಾಗಲಿದ್ದು, ಎಣಿಕೆಗೆ 14 ಟೇಬಲ್‌ ಹಾಗೂ ಅದಕ್ಕೆ ಬೇಕಾದ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬ ಮತ ಎಣಿಕೆ ಮೇಲ್ವಿಚಾರಕರು ಹಾಗೂ ಇಬ್ಬರು ಮತ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ಮತ ಎಣಿಕೆಯು ಶಾಂತಿಯುತವಾಗಿ ನಡೆಯಲು 212 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡ ಕೃಷಿ ವಿವಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

2020ರ ಈ ಚುನಾವಣೆಯಲ್ಲಿ ಬಿಜೆಪಿಯ ಎಸ್‌.ವಿ. ಸಂಕನೂರ 11409 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು ಈಗ ಮೂರನೇ ಬಾರಿ ಸ್ಪರ್ಧಿಸಿದ್ದಾರೆ. ಅವರಿಗೆ ನೇರವಾಗಿ ಕಾಂಗ್ರೆಸ್ಸಿನ ಮೋಹನ ಲಿಂಬಿಕಾಯಿ ಪೈಪೋಟಿ ನೀಡಿದ್ದು, ಇಬ್ಬರ ಪೈಕಿ ಪದವೀಧರ ಮತದಾರರು ಯಾರಿಗೆ ಗೆಲುವಿನ ಮಾಲೆ ಹಾಕುತ್ತಾರೆ ಎಂಬುದು ಮಂಗಳವಾರ ಮಧ್ಯಾಹ್ನದೊಳಗೆ ತಿಳಿಯಲಿದೆ. ಈ ಮಧ್ಯೆ 12 ಜನ ಪಕ್ಷೇತರ ಅಭ್ಯರ್ಥಿಗಳ ಪೈಕಿ ಕಾಂತಕುಮಾರ ಸಹ ಮತಗಳನ್ನು ಪಡೆಯಲಿದ್ದು, ಇಬ್ಬರು ಗೆಲುವಿನ ಪ್ರಮಾಣ ಕಾಂತಕುಮಾರ ಅವರು ಪಡೆಯುವ ಮತಗಳ ಮೇಲೆ ಅವಲಂಬಿತ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುಕುಲಕ್ಕೆ ರಾಮಾಯಣ ಗ್ರಂಥ ಕೊಡುಗೆ ನೀಡಿದ ಆದಿಕವಿ: ಮಹಾಂತಗೌಡ
ಹುಣ್ಣಿಮೆ ದಿನ ಮಾತಂಗಿ ದೇವಿ ದರ್ಶನಕ್ಕೆ ನಿರ್ಬಂಧ!