ವಾಲ್ಮೀಕಿ ಕಾವ್ಯದ ಆದರ್ಶಗಳು ಮನುಕುಲದ ನೆಮ್ಮದಿಗೆ ದಾರಿದೀಪ: ಎರ್ರಿಸ್ವಾಮಿ

KannadaprabhaNewsNetwork |  
Published : Oct 27, 2026, 02:00 AM IST
ಮುಂಡರಗಿಯ ತಹಸೀಲ್ದಾರ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ಮಹರ್ಷಿ ವಾಲ್ಮೀಕಿಯವರ ರಾಮಾಯಣ ಮಹಾಕಾವ್ಯದಲ್ಲಿನ ಪಾತ್ರಗಳ ಒಂದೊಂದು ಸದ್ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಇಡೀ ಮನುಕುಲ ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸಲು ಸಾಧ್ಯ.

ಕನ್ನಡಪ್ರಭ ವಾರ್ತೆ ಮುಂಡರಗಿ

ಮಹರ್ಷಿ ವಾಲ್ಮೀಕಿಯವರ ರಾಮಾಯಣ ಮಹಾಕಾವ್ಯದಲ್ಲಿನ ಪಾತ್ರಗಳ ಒಂದೊಂದು ಸದ್ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಇಡೀ ಮನುಕುಲ ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ, ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ರಾಮಾಯಣದಲ್ಲಿನ ಪ್ರತಿಯೊಂದು ಘಟನಾವಳಿಗಳೂ ಮನುಕುಲದ ಸಾರ್ಥಕ ಜೀವನಕ್ಕೆ ಅತ್ಯುತ್ತಮ ಮಾದರಿಯಾಗಿವೆ. ವಾಲ್ಮೀಕಿ ಮಹರ್ಷಿಗಳು ರಾಮಾಯಣ ರಚಿಸುವ ಮೂಲಕ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಜಗತ್ತೇ ಮೆಚ್ಚುವಂತೆ ಮಾಡಿದ್ದಾರೆ. ಯುವ ಪೀಳಿಗೆಗೆ ಇಂತಹ ಮಹಾನ್ ಸಂತರ ಸಾಧನೆ, ಸಂದೇಶ ತಲುಪಿಸುವ ಉದ್ದೇಶದಿಂದ ಸರ್ಕಾರ ಜಯಂತಿಗಳನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಮಾತನಾಡಿ, ವಾಲ್ಮೀಕಿ ರಚಿತ ರಾಮಾಯಣವು ಸಂಸ್ಕಾರಗಳ ಸರಮಾಲೆ ಹಾಗೂ ಸಂಬಂಧಗಳ ಮಹತ್ವವನ್ನು ಸಾರುವ ಅಪರೂಪದ ಕೃತಿ. ಶ್ರೀರಾಮನ ಪಿತೃವಾಕ್ಯ ಪರಿಪಾಲನೆ, ಸೀತೆಯ ಸಹನೆ, ಲಕ್ಷ್ಮಣನ ಭ್ರಾತೃಪ್ರೇಮ, ಶತ್ರುಘ್ನನ ತ್ಯಾಗ ಹಾಗೂ ಹನುಮಂತನ ನಿಷ್ಕಲ್ಮಶ ಭಕ್ತಿ ಪ್ರತಿಯೊಬ್ಬರಿಗೂ ಪ್ರೇರಣಾದಾಯಕ. ಇಂದಿನ ಆಧುನಿಕತೆಯ ಭರಾಟೆಯಲ್ಲಿ ಮಾನವೀಯ ಸಂಬಂಧಗಳು ಕ್ಷೀಣಿಸುತ್ತಿದ್ದು, ಹಿರಿಯರ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಮನೆಗಳಲ್ಲಿ ಸಂಸ್ಕಾರದ ವಾತಾವರಣ ನಿರ್ಮಿಸಿ, ರಾಮಾಯಣದ ಆದರ್ಶಗಳನ್ನು ಮಕ್ಕಳಲ್ಲಿ ಬಿತ್ತುವ ಅಗತ್ಯವಿದೆ ಎಂದರು.

ವಿಶ್ರಾಂತ ಪ್ರಾಚಾರ್ಯ ಶಂಭುಲಿಂಗಪ್ಪ ಚಿಗರಿ ಮಾತನಾಡಿ, ಮೌಲ್ಯಯುತ ಕಾವ್ಯವನ್ನು ನೀಡಿದ ಮಹಾನ್ ಚೇತನವನ್ನು ಸ್ಮರಿಸುವ ಈ ದಿನ ಅತ್ಯಂತ ಪವಿತ್ರವಾದದ್ದು ಎಂದರು. ಯುವ ಮುಖಂಡ ಚಂದ್ರು ಪೂಜಾರ, ಮಂಜುಳಾ ಇಟಗಿ, ಬಿ.ಎಫ್. ಈಟಿ, ಬಸವರಾಜ ನವಲಗುಂದ ಹಾಗೂ ರತ್ನ ಕಾಗನೂರಮಠ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸಿಪಿಐ ಐಯನಗೌಡ ಪಾಟೀಲ್, ನಾಗೇಂದ್ರಪ್ಪ ಪಟ್ಟಣಶೆಟ್ಟಿ, ಸವಿತಾ ಸಾಸ್ವಿಹಳ್ಳಿ, ಸುಮಿತಾ ಪೂಜಾರ, ಶಿವಯೋಗಿ ಕಲ್ಮಠ, ರಾಮಣ್ಣ ಕೋಳಿ, ಮೈಲಾರಪ್ಪ ಕಲಕೇರಿ, ದ್ಯಾಮಣ್ಣ ತಳವಾರ, ಕವಿತಾ ತಳವಾರ, ಶ್ರೀನಿವಾಸ, ಚೆನ್ನಪ್ಪ ಹಳ್ಳಿ, ಲಕ್ಷ್ಮಣ ಬೂದಿಹಾಳ, ಪ್ರಕಾಶ ರಾವಣಕಿ, ಲಕ್ಷ್ಮಣ ತಗಡಿನಮನಿ, ಧ್ರುವಕುಮಾರ ಹೂಗಾರ, ಮಂಜುನಾಥ ಮುದೋಳ, ಬಸವರಾಜ ದೇಸಾಯಿ, ದೇವಪ್ಪ ಇಟಗಿ, ನಾಗರಾಜ, ಅಡಿವೆಪ್ಪ ಚಲವಾದಿ ಸೇರಿದಂತೆ ಅನೇಕರಿದ್ದರು. ಶ್ರೀಕಾಂತ್ ಅರಹುಣಸಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ರಾಮಾಯಣದಿಂದ ಸಮಾಜಕ್ಕೆ ಸಂದೇಶ
ರುದ್ರಭೂಮಿ ಸ್ವಚ್ಛಗೊಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು