ಕನ್ನಡಪ್ರಭ ವಾರ್ತೆ ಮಧುಗಿರಿ
ಮಕ್ಕಳು ಶಾಲಾ ಆವರಣದಲ್ಲಿ ಹಳ್ಳಿಯ ಗ್ರಾಮೀಣ ಸೊಗಡಿನ ಚಿತ್ರಣವನ್ನು ತದೃಪಿ ಸೃಷ್ಠಿಸುವ ಮೂಲಕ ಮಕ್ಕಳಲ್ಲಿ ನವ ಚೈತನ್ಯ ಮೂಡಿಸಿ ಹರ್ಷ ವ್ಯಕ್ತಪಡಿಸುವ ದೃಶ್ಯ ಕಂಡು ಬಂದಿತು. ಮಕ್ಕಳು ಈ ಹಬ್ಬ ಆಚರಿಸುವ ನಿಟ್ಟಿನಲ್ಲಿ ರೈತರು ಹೊಲ ಗದ್ದೆಗಳಲ್ಲಿ ವಿಶ್ರಾಂತಿ ಪಡೆಯುವ ಉದ್ದೇಶದಿಂದ ಗುಡಿಸಲು ನಿರ್ಮಾಣ, ತೆರೆದಬಾವಿ, ನೇಗಿಲು, ಕಣ, ಸೌದೆ ಒಲೆ, ಮೊಸರು ಕಡೆಯುವ ಸಾಧನ ಸಲಕರಣೆಗಳನ್ನು ಪ್ರದರ್ಶಿಸಲಾಯಿತು.
ಸಂಕ್ರಾಂತಿ ಸಂಭ್ರಮವನ್ನು ಹಾಲು ಉಕ್ಕಿಸುವ ಮೂಲಕ ಪ್ರಾರಂಭಿಸಿ ರಾಗಿ ಕಲ್ಲು ಬೀಸುತ್ತಾ ಜಾನಪದ ಹಾಡುಗಳನ್ನು ವಿದ್ಯಾರ್ಥಿಗಳು ಹಾಡಿದರು. ತೆರೆದ ಬಾವಿಯಲ್ಲಿ ಗಂಗಾಪೂಜೆ, ಕಣದ ಪೂಜೆ,ಗೆಣಸು, ಕಡಲೆಕಾಯಿ, ಅವರೆಕಾಯಿ ರಾಶಿ, ಕಬ್ಬಿನ ಜಲ್ಲೆಗಳು ಗಮನ ಸಳೆಯಿತು.ವಿದ್ಯಾ ಸಂಸ್ಥೆಯ ಅಧ್ಯಕ್ಷ ಟಿ.ನಾಗರಾಜು ,ಕಾರ್ಯದರ್ಶಿ ಗಾಯಿತ್ರಿ ನಾರಾಯಣ್, ನಿರ್ದೇಶಕರುಗಳಾದ ಎಚ್.ಗೋವಿಂದರಾಜು, ಸಹನಾ ನಾಗೇಶ್, ಎಸ್.ಎಂ.ಕೃಷ್ಣ , ಶಿಶರ್, ಮುಖ್ಯ ಶಿಕ್ಷಕರಾದ ಮೀರಬಾಯಿ, ಲಕ್ಷ್ಮೀದೇವಿ, ಸಹ ಶಿಕ್ಷಕರಾದ ಚಂದ್ರಕಾಂತಮ್ಮ, ಭವ್ಯಶ್ರೀ, ಹನುಮಂತರಾಯಪ್ಪ, ರಾಜೇಶ್ವರಿ, ಮಂಜುಳಾ, ರವಿಕಲಾ, ಪ್ರಮೀಳಾ , ರಾಧ ಆಶಾರಾಣಿ, ಕವಿತ, ಹೇಮಲತಾ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಸಂಪ್ರಾದಾಯಕ ಉಡುಗೆ ಪಂಚೆ ಉಟ್ಟು ವಿದ್ಯಾರ್ಥಿನಿಯರು ಸೀರೆ ಉಟ್ಟು ಕಂಗೊಳಿಸಿದರು.