ಜನರು ತಮ್ಮ ಕುಟುಂಬ ಹಾಗೂ ಬಂಧುಗಳ ಜೊತೆಗೆ ಆಗಮಿಸಿ ತುಂಗಭದ್ರೆಗೆ ಶ್ರದ್ಧೆಯಿಂದ ಪೂಜೆ ನೆರವೇರಿಸಿ ಕುಟುಂಬದೊಂದಿಗೆ ಭೋಜನ ಸವಿದು ನದಿದಡದಲ್ಲೇ ಬೀಡು ಬಿಟ್ಟು ಎಳ್ಳುಬೆಲ್ಲ ಪರಸ್ಪರ ವಿನಿಮಯ ಮಾಡಿ ಹಬ್ಬ ಆಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತುಂಗಭದ್ರಾ, ಹರಿದ್ರಾವತಿ ಹೀಗೆ ತ್ರಿವೇಣಿ ಸಂಗಮದ ಛಾಪುಯಿದೆ. ಈ ಹಿನ್ನೆಲೆಯಲ್ಲಿ ಸಂಕ್ರಾಂತಿ ಆಚರಣೆಗೆ ಬಂದವರು ನದಿಯಲ್ಲಿ ಸ್ನಾನ ಮಾಡುತ್ತಾರೆ.
ನದಿ ದಡದಲ್ಲೇ ಎಳ್ಳುಬೆಲ್ಲ ಪರಸ್ಪರ ವಿನಿಮಯ, ಹಬ್ಬದ ಊಟ ಸವಿಯುವ ಜನರು
ಕನ್ನಡಪ್ರಭ ವಾರ್ತೆ ಹರಿಹರ
ಸುಗ್ಗಿಯ ಹಬ್ಬವೆಂದೇ ಪ್ರಸಿದ್ಧವಾದ ಸಂಕ್ರಾಂತಿ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ದಡದಲ್ಲಿ ಸಂಭ್ರಮ ಮನೆ ಮಾಡಿತ್ತು. ಪ್ರತಿ ಸಂಕ್ರಾಂತಿ ಹಬ್ಬದಂದು ತಾಲೂಕಿನ ಜೀವನದಿ ಉತ್ತರ ಹಾಗೂ ದಕ್ಷಿಣ ಕರ್ನಾಟಕದ ವಿವಿಧ ಭಾಗಗಳಿಂದ ಉತ್ತರಾಯಣ ಪುಣ್ಯಕಾಲದಲ್ಲಿ ನದಿಯ ಸ್ನಾನ ಮಾಡುವುದರಿಂದ ಒಳಿತಾಗುತ್ತದೆ ಎಂಬ ಪ್ರತೀತಿ ಯಿದೆ.
ಜನರು ತಮ್ಮ ಕುಟುಂಬ ಹಾಗೂ ಬಂಧುಗಳ ಜೊತೆಗೆ ಆಗಮಿಸಿ ತುಂಗಭದ್ರೆಗೆ ಶ್ರದ್ಧೆಯಿಂದ ಪೂಜೆ ನೆರವೇರಿಸಿ ಕುಟುಂಬದೊಂದಿಗೆ ಭೋಜನ ಸವಿದು ನದಿದಡದಲ್ಲೇ ಬೀಡು ಬಿಟ್ಟು ಎಳ್ಳುಬೆಲ್ಲ ಪರಸ್ಪರ ವಿನಿಮಯ ಮಾಡಿ ಹಬ್ಬ ಆಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತುಂಗಭದ್ರಾ, ಹರಿದ್ರಾವತಿ ಹೀಗೆ ತ್ರಿವೇಣಿ ಸಂಗಮದ ಛಾಪುಯಿದೆ.
ಈ ಹಿನ್ನೆಲೆಯಲ್ಲಿ ಸಂಕ್ರಾಂತಿ ಆಚರಣೆಗೆ ಬಂದವರು ನದಿಯಲ್ಲಿ ಸ್ನಾನ ಮಾಡುತ್ತಾರೆ.
ತಾಲೂಕಿನ ನದಿ ಸಾಲಿನ ಗ್ರಾಮಗಳಾದ ರಾಜನಹಳ್ಳಿ, ಬಿಳಸನೂರು, ನಂದಿಗಾವಿ,ಎಳೆಹೊಳೆ, ಧೂಳೆಹೊಳೆ, ಚಿಕ್ಕಬಿದರಿ,ಸಾರಥಿ, ನಂದಿಗುಡಿ, ಗುತ್ತೂರು, ಹರ್ಲಾಪುರ, ಹಲಸಬಾಳು, ಉಕ್ಕಡಗಾತ್ರಿ ಗ್ರಾಮದ ನದಿ ದಡದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಸಂಕ್ರಾಂತಿ ವಿಶೇಷ ಊಟ:
ಭೋಜನದಲ್ಲಿ ಜೋಳ ಹಾಗೂ ಸಜ್ಜೆಯ ಖಡಕ್ ರೊಟ್ಟಿ, ಮುಳುಗಾಯಿ, ಬೆಂಡೆಕಾಯಿ, ಆಲೂಗಡ್ಡೆ, ಕಡ್ಲೆ, ಹೆಸರುಕಾಳು, ಮಡಿಕೆ ಮೊದಲಾದ ಕಾಳುಗಳ ಪಲ್ಯಗಳು, ವಿವಿಧ ಬಗೆಯ ಚಟ್ನಿಪುಡಿಗಳು ಕರಿಹಿಂಡಿ ಹಾಗೂ ಕೆಂಪಿಂಡಿ, ಮೊಸರುಬುತ್ತಿ, ಚಿತ್ರಾನ್ನ, ಈರುಳ್ಳಿ, ಕ್ಯಾರೆಟ್, ಸೌತೆಕಾಯಿ, ಜೊತೆಗೆ ಕಲ್ಲಂಗಡಿ, ಕರಬೂಜಿ, ಪಪಾಯಿ ಇತರೆ ಹಣ್ಣುಗಳನ್ನೂ ಸೇವಿಸಿ ಸಂಕ್ರಾಂತಿ ಹಬ್ಬಕ್ಕೆ ಮೆರುಗು ಬಂದಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.