ಸಂಕ್ರಾಂತಿ: ಮುರ್ಡೇಶ್ವರ, ಗೋಕರ್ಣಕ್ಕೆ ಭಕ್ತರು, ಪ್ರವಾಸಿಗರ ದಂಡು

KannadaprabhaNewsNetwork |  
Published : Jan 16, 2024, 01:48 AM IST
ಮುರುಡೇಶ್ವರದ ಕಡಲ ತೀರದಲ್ಲಿ ವಾಹನ, ಜನರು ಇರುವುದು. | Kannada Prabha

ಸಾರಾಂಶ

ಗೋಕರ್ಣದ ಮೂರು ಕಡಲ ತೀರ, ದೇವಸ್ಥಾನ ಸೇರಿ ೮ ಸಾವಿರಕ್ಕೂ ಅಧಿಕ ಹಾಗೂ ಮುರ್ಡೇಶ್ವರ ದೇವಸ್ಥಾನ, ಕಡಲ ತೀರಕ್ಕೆ ೧೦ ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು.

ಕಾರವಾರ:

ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಕ್ಕೆ ಸೋಮವಾರ ಭಕ್ತರ ದಂಡೆ ಹರಿದುಬಂದಿದೆ. ಗೋಕರ್ಣ, ಮುರ್ಡೇಶ್ವರಕ್ಕೆ ಅತಿಹೆಚ್ಚು ಜನರು ಆಗಮಿಸಿದ್ದಾರೆ.

ಗೋಕರ್ಣದ ಮೂರು ಕಡಲ ತೀರ, ದೇವಸ್ಥಾನ ಸೇರಿ ೮ ಸಾವಿರಕ್ಕೂ ಅಧಿಕ ಹಾಗೂ ಮುರ್ಡೇಶ್ವರ ದೇವಸ್ಥಾನ, ಕಡಲ ತೀರಕ್ಕೆ ೧೦ ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದು, ಸಂಕ್ರಮಣದ ಶುಭ ಸಂದರ್ಭದಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಮುರ್ಡೇಶ್ವರನ ದರ್ಶನಕ್ಕೆ ಬೆಳಗ್ಗೆಯಿಂದಲೇ ಸಾವಿರಾರು ಜನರು ಸಾಲುಗಟ್ಟಿ ನಿಂತಿದ್ದರು. ಮುರ್ಡೇಶ್ವರದಲ್ಲಿ ಹೊಸದಾಗಿ ಪ್ರಾರಂವಾಗಿರುವ ಸೀ ವಾಕ್, ಗೋಕರ್ಣ, ಮುರ್ಡೇಶ್ವರದಲ್ಲಿ ಇರುವ ಜಲಸಾಹಸಿ ಕ್ರೀಡೆಯ ಹೊಸ ಅನುಭವ ಪಡೆದರು. ಮುರ್ಡೇಶ್ವರ ತೀರ ಜನರಿಂದ ಭರ್ತಿಯಾಗಿತ್ತು. ಕಡಲ ತೀರ ಹಾಗೂ ದೇವಸ್ಥಾನದ ಸಮೀಪ ವಾಹನ ನಿಲ್ಲಿಸಲು ಸ್ಥಳಾವಕಾಶವೇ ಇಲ್ಲದಂತಾಗಿತ್ತು. ಗೋಕರ್ಣದ ಓಂ, ಕುಡ್ಲೆ, ಮುಖ್ಯ ಕಡಲ ತೀರಗಳಲ್ಲಿ ಕೂಡಾ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಕಡಲ ತೀರಗಳಲ್ಲಿ ಜನರನ್ನು ನಿಯಂತ್ರಿಸಲು ಲೈಫ್‌ಗಾರ್ಡ್ ಸಿಬ್ಬಂದಿ ಹರಸಾಹಸಪಟ್ಟರು. ಕಾರವಾರದ ರವೀಂದ್ರನಾಥ ಟಾಗೋರ ಕಡಲ ತೀರ, ಶಿರಸಿ ತಾಲೂಕಿನ ಸಹಸ್ರಲಿಂಗ, ಕುಮಟಾ ತಾಲೂಕಿನ ಯಾಣ ಮೊದಲಾದ ಧಾರ್ಮಿಕ ಸ್ಥಳಕ್ಕೆ ಕೂಡಾ ಜನರು ಆಗಮಿಸಿದ್ದರು. ಗೋಕರ್ಣ, ಮುರುಡೇಶ್ವರದಲ್ಲಿ ಹೊಟೆಲ್‌ಗಳು ಜನರಿಂದ ತುಂಬಿತ್ತು. ೨ನೇ ಶನಿವಾರ, ಭಾನುವಾರ, ಸೋಮವಾರ ಸತತ ರಜೆ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿತ್ತು. ಆದರೆ ಶನಿವಾರ, ಭಾನುವಾರ ಪ್ರವಾಸಿಗರ ಸಂಖ್ಯೆ ಅಧಿಕವಾಗಿರಲಿಲ್ಲ. ಹೀಗಾಗಿ ರೆಸಾರ್ಟ್, ಹೋಟೆಲ್, ಲಾಡ್ಜ್, ಆಟೋರಿಕ್ಷಾ ಒಳಗೊಂಡು ವಿವಿಧ ಉದ್ಯಮಿಗಳಿಗೆ ಆರ್ಥಿಕವಾಗಿ ಲಾಭವಾಗಿರಲಿಲ್ಲ. ಜತೆಗೆ ಮೂರು ದಿನ ರಜೆಯಿದ್ದರೂ ಪ್ರವಾಸಿಗರ ಆಗಮನ ಆಗದೇ ಇರುವುದಕ್ಕೆ ಆತಂಕಕ್ಕೂ ಒಳಗಾಗಿದ್ದರು. ಸೋಮವಾರ ಸಂಕ್ರಾಂತಿಯಂದು ಸಾಕಷ್ಟು ಪ್ರವಾಸಿಗರು ಆಗಮಿಸಿದ್ದು, ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿವೆ. ಹೋಟೆಲ್, ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಉತ್ತಮವಾಗಿ ನಡೆದಿದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ