- ಮಲೇಬೆನ್ನೂರಲ್ಲಿ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ - - - ಮಲೇಬೆನ್ನೂರು: ಸಂಕ್ರಾಂತಿ ಹಬ್ಬವು ಸಮೃದ್ಧಿಯ ಸಂಕೇತವಾಗಿದೆ ಎಂದು ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಇಲ್ಲಿಗೆ ಸಮೀಪದ ಧುಳೆಹೊಳೆ ಗ್ರಾಮದ ಜಿಎಂಜಿಸಿ ಪ್ರೌಢಶಾಲೆ ಆವರಣದ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ೨೨ನೇ ವರ್ಷದ ಸಾಮೂಹಿಕ ಸಂಕ್ರಾಂತಿ ಆಚರಣೆಯ ದಿವ್ಯ ಸಾನಿಧ್ಯ ವಹಿಸಿ, ಅವರು ಆಶೀರ್ವಚನ ನೀಡಿದರು. ಸುಗ್ಗಿ ಕಾಲದಲ್ಲಿನ ಸಂಕ್ರಾಂತಿ ಹಬ್ಬವು ಭಾರತದ ಸಂಸ್ಕೃತಿ, ಧರ್ಮ ಮತ್ತು ಕೃಷಿಯೊಂದಿಗೆ ಸಮ್ಮಿಳಿತವಾದ ಸಂಭ್ರಮದ ಹಬ್ಬವಾಗಿದೆ. ದಾನ ಮತ್ತು ಪುಣ್ಯ ಕೆಲಸಗಳು ವಿಶೇಷ ಫಲವನ್ನು ಕೊಡುತ್ತವೆ ಎಂದರು.
ಸಿರಿಗೆರೆಯ ಎನ್‌ಜಿ ನಾಗನಗೌಡ ಅಧ್ಯಕ್ಷತೆ ವಹಿಸಿದ್ದರು. ತೆಗ್ಗಿನಮಠ ವಿದ್ಯಾಸಂಸ್ಥೆ ಕಾರ್ಯದರ್ಶಿ ಚಂದ್ರಶೇಖರಯ್ಯ, ಮುಖ್ಯ ಶಿಕ್ಷಕ ರಾಜಪ್ಪ ಮಲ್ಲಾಪುರ್, ರೇವಣ ನಾಯ್ಕ್ ಮಾತನಾಡಿದರು.
ಶಾಲಾ ಸುಧಾರಣಾ ಸಮಿತಿ ಸದಸ್ಯರಾದ ವಿರೂಪಾಕ್ಷ ಗೌಡ, ಈಶ್ವರಪ್ಪ, ಬಿ.ಬಸಪ್ಪ, ನಾಗರಾಜಪ್ಪ, ಜಯಪ್ಪ, ತಿಪ್ಪೇಶಪ್ಪ, ಕೆ.ಜಿ. ರಾಜು ಚಂದ್ರಶೇಖರ್, ರವಿ, ಶಿಕ್ಷಕರಾದ ಬಸವರಾಜಪ್ಪ, ಡಿ.ಎಂ. ಮಂಜುನಾಥಯ್ಯ, ಮಲ್ಲಿಕಾರ್ಜುನ್, ಮಂಜುನಾಥ್, ರುದ್ರಗೌಡ ಹಾಗೂ ಗ್ರಾಮಸ್ಥರು ಇದ್ದರು.- - - -೧೫ಎಂಬಿಆರ್೧: ಸಾಮೂಹಿಕ ಸಂಕ್ರಾಂತಿ ಕಾರ್ಯಕ್ರಮ ಉದ್ಘಾಟಿಸಲಾಯಿತು.