ಸಂಸ್ಕಾರ ಬಾಲಧರ್ಮ ಪುಸ್ತಕ ಬಿಡುಗಡೆ

KannadaprabhaNewsNetwork | Published : Oct 6, 2024 1:32 AM

ಸಾರಾಂಶ

ಶ್ರೀ ಕ್ಷೇತ್ರ ಕಾಳಿಕಾಂಬ ಕರ್ಮಟೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಪ್ರತಿದಿನದಂತೆ ಬೆಳಗ್ಗೆಯಿಂದ ದೇವಿಗೆ ಪಂಚಾಮೃತ ಅಭಿಷೇಕ ಹಾಗೂ ಈ ದಿನದ ಬ್ರಹ್ಮಚಾರಿಣಿ ಅಲಂಕಾರ, ಶ್ರೀ ಗಾಯತ್ರಿ ವೈಶ್ವಕರ್ಮಣ ಹೋಮ ನೆರವೇರಿತು. ಈ ಸಮಯದಲ್ಲಿ ಅರೇಮಾದನಹಳ್ಳಿಯ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪೂರ್ಣಾಹುತಿ ನೆರವೇರಿಸಿದರು. ನಂತರ ಶ್ರೀಗಳು ಸಂಸ್ಕಾರ ಬಾಲಧರ್ಮ ಪುಸ್ತಕದ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಶರನ್ನವರಾತ್ರಿಯ ಪ್ರಯುಕ್ತ ಪುಸ್ತಕ ಸಮರ್ಪಣೆ ಹಾಗೂ ೯ನೇ ತಾರೀಖಿನ ಸರಸ್ವತಿ ಪೂಜೆಯಂದು ಸಾಮೂಹಿಕವಾಗಿ ಮಕ್ಕಳಿಂದ ಸರಸ್ವತಿ ಪೂಜೆ ಹಾಗೂ ಉಚಿತವಾಗಿ ಸಂಸ್ಕಾರ ಬಾಲಧರ್ಮ ಪುಸ್ತಕ ಬಿಡುಗಡೆ ನಂತರ ಅರೇಮಾದನಹಳ್ಳಿಯ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿದರು. ನಗರದ ಶ್ರೀ ಕ್ಷೇತ್ರ ಕಾಳಿಕಾಂಬ ಕರ್ಮಟೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಪ್ರತಿದಿನದಂತೆ ಬೆಳಗ್ಗೆಯಿಂದ ದೇವಿಗೆ ಪಂಚಾಮೃತ ಅಭಿಷೇಕ ಹಾಗೂ ಈ ದಿನದ ಬ್ರಹ್ಮಚಾರಿಣಿ ಅಲಂಕಾರ, ಶ್ರೀ ಗಾಯತ್ರಿ ವೈಶ್ವಕರ್ಮಣ ಹೋಮ ನೆರವೇರಿತು. ಈ ಸಮಯದಲ್ಲಿ ಅರೇಮಾದನಹಳ್ಳಿಯ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪೂರ್ಣಾಹುತಿ ನೆರವೇರಿಸಿದರು. ನಂತರ ಸಂಸ್ಕಾರ ಬಾಲಧರ್ಮ ಪುಸ್ತಕದ ಬಿಡುಗಡೆ ಮಾಡಿದರು. ನಂತರ ಆಶೀರ್ವಚನ ನೀಡಿದ ಶ್ರೀಗಳು, ನವರಾತ್ರಿಯ ಪುಣ್ಯಕಾಲದಲ್ಲಿ ದೇವಿಯ ಆರಾಧನೆ ಬಹಳ ಶ್ರೇಷ್ಠ. ಪೂರ್ವ ಜನ್ಮದ ಸುಕೃತ ಪುಣ್ಯವಿದ್ದವರು ಮಾತ್ರ ನವರಾತ್ರಿಯಲ್ಲಿ ದೇವಿಯ ಆರಾಧನೆ ಮಾಡಲು ಸಾಧ್ಯ. ಈ ಕಾಲದಲ್ಲಿ ಮಾಡುವ ಯಜ್ಞಗಳು ಪರಮ ಶ್ರೇಷ್ಠ ಫಲಗಳನ್ನು ನೀಡುತ್ತದೆ. ಅದಕ್ಕೆಲ್ಲ ನಾವು ಧರ್ಮವನ್ನು ಆಚರಿಸಬೇಕು. ಧರ್ಮವನ್ನು ಆಚರಿಸಲು ಮೊದಲು ನಮಗೆ ಸಂಸ್ಕಾರ ಬೇಕು. ಈ ನಿಟ್ಟಿನಲ್ಲಿ ಪುರೋಹಿತರಾದ ಪ್ರದೀಪ್ ಶರ್ಮರವರು ಸಂಸ್ಕಾರದ ಕುರಿತು ಈಗಾಗಲೇ ಕೆಲವು ಪುಸ್ತಕಗಳನ್ನು ಬರೆದು ಮಕ್ಕಳಿಗೆ ಪಾಠವನ್ನು ಮಾಡಿದ್ದಾರೆ. ಆ ನಿಟ್ಟಿನಲ್ಲಿ ಮತ್ತೊಂದು ಪುಸ್ತಕ ಸೇರ್ಪಡೆಯಾಗಿದೆ ಎಂದರು. ಈ ಪುಸ್ತಕ ಧರ್ಮದ ತಿಳಿವಳಿಕೆಯನ್ನು ನೀಡುತ್ತದೆ. ಸನಾತನ ಪರಂಪರೆಯನ್ನು ಪರಿಚಯಿಸುತ್ತದೆ ಎಂದು ತಿಳಿಸಿದರು. ತಾಲೂಕು ವಿಶ್ವಕರ್ಮ ಸಮಾಜದ ಕಾರ್ಯದರ್ಶಿಗಳಾದ ಕೇಶವ ಪ್ರಸಾದ್ ಮಾತನಾಡಿ, ನೂರಾರು ವರ್ಷಗಳಿಗೂ ಪುರಾತನವಾದ ಈ ಕಾಳಿಕಾಂಬ ಕಮಟೇಶ್ವರ ದೇವಾಲಯವು ಮೈಸೂರು ಮಹಾರಾಜರಿಂದ ಪೋಷಿಸಲ್ಪಟ್ಟ ದೇವಾಲಯವಾಗಿತ್ತು. ಮೈಸೂರು ಮಹಾರಾಜರು ದೇವರಿಗೆ ಸೇವೆಯನ್ನು ಸಲ್ಲಿಸಿ ಇಲ್ಲಿಯ ಕರ್ಮಟೇಶ್ವರ ದೇವರಿಗೆ ನೀಡಿದ ಬೆಳ್ಳಿ ಕಿರೀಟವನ್ನು ಇಂದಿಗೂ ನವರಾತ್ರಿಯಲ್ಲಿ ಮಾತ್ರ ಇಟ್ಟು ಪೂಜಿಸಲಾಗುತ್ತದೆ. ಆ ಕಿರೀಟವನ್ನು ಈಗಲೂ ಕೂಡ ನಾವು ನೋಡಬಹುದು. ಅಂದಿನಿಂದಲೂ ಕೂಡ ಆಚರಿಸಿಕೊಂಡು ಬಂದಿರುವ ನವರಾತ್ರಿಯು ಈಗ ಬಹಳ ವಿಜೃಂಭಣೆಯಿಂದ ದೇವಾಲಯದಲ್ಲಿ ನೆರವೇರುತ್ತಿದೆ ಎಂದರು.ಪ್ರತಿದಿನವೂ ದೇವಿಗೆ ಒಂದೊಂದು ವಿಶೇಷ ಅಲಂಕಾರ ಹಾಗೂ ಪ್ರತಿದಿನವೂ ಹೋಮ ಹಾಗೂ ದೇವರ ಪೂಜಾ ಕಾರ್ಯಕ್ರಮಗಳು ನೆರವೇರುತ್ತದೆ. ಇಂದು ಸಮಾಜದ ಪರವಾಗಿ ಗುರುಗಳಿಗೆ ಪಾದಪೂಜೆ ಹಾಗೂ ಪುಸ್ತಕ ಸಮರ್ಪಣೆ ಕಾರ್ಯಕ್ರಮವು ನೆರವೇರಿದೆ. ಗುರುಗಳಿಗೆ ಸಮರ್ಪಣೆಯಾದ ಈ ಪುಸ್ತಕವು ಸರಸ್ವತಿ ಪೂಜೆಯ ದಿನದಂದು ಸರಸ್ವತಿ ದೇವಿಯ ಪೂಜೆಯ ನಂತರ ಪೂಜೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಕೂಡ ಉಚಿತವಾಗಿ ವಿತರಣೆಯಾಗಲಿದೆ. ಇದರ ಉಪಯೋಗವನ್ನು ಹಾಸನದ ಸಮಸ್ತ ಜನರು ಪಡೆದುಕೊಳ್ಳಬಹುದು ಎಂದರು.

ದಿನಾಂಕ ೯ನೇ ತಾರೀಕಿನಂದು ಸಂಜೆ ೭ ಗಂಟೆಗೆ ಶಾರದಾ ಪೂಜೆಯಲ್ಲಿ ಭಾಗವಹಿಸಿದ ಮಕ್ಕಳಿಂದ ಸಾಮೂಹಿಕವಾಗಿ ಸರಸ್ವತಿ ಪೂಜೆ ನಂತರದಲ್ಲಿ ಈ ಪುಸ್ತಕ ವಿತರಣೆ ಕಾರ್ಯಕ್ರಮವು ನೆರವೇರಲಿದೆ. ಹಾಗಾಗಿ ಅತಿ ಹೆಚ್ಚು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಪೂಜೆಯಲ್ಲಿ ಭಾಗವಹಿಸಿ ಎಂದು ತಿಳಿಸಿದರು. ಎಲ್ಲಾ ವೈದಿಕ ಕಾರ್ಯಕ್ರಮಗಳು ಜಿ. ವೇದಿಕ್ ಶ್ರೀ ಗಾಯತ್ರಿ ದೇವಿ ಪುರೋಹಿತ ಜ್ಯೋತಿಷ್ಯ ಮಂದಿರದ ಪ್ರದೀಪ್ ಶರ್ಮಾರವರ ನೇತೃತ್ವದಲ್ಲಿ ರವೀಂದ್ರಶರ್ಮ ಹಾಗೂ ಬ್ರಹ್ಮಾನಂದ, ಕಲ್ಲೇಶ ಚಾರ್‌, ಮೊದಲಾದವರ ನೇತೃತ್ವದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸಮಾಜದ ಪದಾಧಿಕಾರಿಗಳಾದಂತಹ ಉಪಾಧ್ಯಕ್ಷರಾದಂತಹ ಬ್ಯಾಟರಂಗಾಚಾರ್‌, ಪದಾಧಿಕಾರಿಗಳಾದ. ಎಚ್ ವಿ ಹರೀಶ್, ಸುರೇಶ್, ಶ್ರೀಕಂಠ ಮೂರ್ತಿ ಮುಂತಾದ ಅನೇಕರು ಉಪಸ್ಥಿತರಿದ್ದರು.

Share this article