ಸಂತೋಷ ಉತ್ತಮ ಆಡಳಿತಾಧಿಕಾರಿ: ಡಿವೈಎಸ್‌ಪಿ

KannadaprabhaNewsNetwork |  
Published : Jul 17, 2024, 12:56 AM IST
ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡಬೀಳ್ಕೊಡುಗೆ ಮತ್ತು ನೂತನ ಅಧಿಕಾರಿಶ್ವೇತಾ ಬೀಡಿಕರ ಸ್ವಾಗತ ಕಾರ್ಯಕ್ರದ ದೃಶ್ಯ | Kannada Prabha

ಸಾರಾಂಶ

ಬಡ್ತಿ ಪಡೆದ ಎಸಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಧಿಕಾರಿಗಳ ಮೆಚ್ಚುಗೆ, ಸ್ವಾಗತ ಕಾರ್ಯಕ್ರಮ ಆಯೋಜನೆ

ಕನ್ನಡಪ್ರಭ ವಾರ್ತೆ ಜಮಖಂಡಿ

ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಉತ್ತಮ ಆಡಳಿತಾಧಿಕಾರಿ ಎಂದು ನಗರ ಡಿವೈಎಸ್‌ಪಿ ಶಾಂತವೀರ ಅಭಿಪ್ರಾಯ ಪಟ್ಟರು.

ಪಟ್ಟಣದ ಮುರುಗೋಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಉಪವಿಭಾಗಾಧಿಕಾರಿಗಳ ಬೀಳ್ಕೊಡುಗೆ ಮತ್ತು ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಮಖಂಡಿ ಉಪವಿಭಾಗದ ಅಧಿಕಾರಿಯಾಗಿ ಒಂದೂವರೆ ವರ್ಷ ಕಾರ್ಯ ನಿರ್ವಹಿಸಿ, ಯುಕೆಪಿಯ ವಿಶೇಷ ಜಿಲ್ಲಾಧಿಕಾರಿಯಾಗಿ ಬಡ್ತಿ ಪಡೆದಿರುವ ಸಂತೋಷ ಅವರು ಉತ್ತಮ ಆಡಳಿತಾಧಿಕಾರಿಯಾಗಿ ಜನರ ಮೆಚ್ಚುಗೆ ಗಳಿಸಿದ್ದರು ಎಂದು ಶ್ಲಾಘಿಸಿದರು.ಅವರ ಅವಧಿಯಲ್ಲಿ ಎರಡು ಚುನಾವಣೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ, ಎಲ್ಲರ ಜತೆ ಸಹಕಾರ ಮತ್ತು ಸಮಸ್ಯೆಗಳು ಬಂದಾಗ ಎದುರಿಸುವ ಚಾಣಾಕ್ಷ. ಮುಧೋಳದ ಕೆರೆ ತುಂಬುವ ಯೋಜನೆಗೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆ ವೇಳೆ ರೈತರನ್ನು ಸಮಾಧಾನ ಪಡಿಸಿ ಪ್ರತಿಭಟನೆ ನಿಲ್ಲಿಸಿದ್ದರು ಎಂದು ಸ್ಮರಿಸಿದರು.

ತಹಸೀಲ್ದಾರ್‌ ಸದಾಶಿವ ಮುಕ್ಕೊಜಿ ಮಾತನಾಡಿ, ಎಸಿ ಸಂತೋಷ ಅವರು ಉತ್ತಮ ಮಾರ್ಗದರ್ಶಕರಾಗಿದ್ದರು. ಗ್ರಾಮ ಲೆಕ್ಕಾಧಿಕಾರಿಯಿಂದ ತಹಸೀಲ್ದಾರ್‌ ವರೆಗೆ ಎಲ್ಲಾ ಸಿಬ್ಬಂದಿಯನ್ನು ಗೌರವದಿಂದ ಮಾತನಾಡಿಸುತ್ತಿದ್ದರು. ಕಷ್ಟದ ಸಮಯಲ್ಲಿ ಜತೆಗಿದ್ದು ಸಮಸ್ಯೆಗಳ ಪರಿಹಾರ ಮಾಡಿ ಯಾರಿಗೂ ತೊಂದರೆಯಾಗದಂತೆ ಕ್ರಮ ಜರುಗಿಸುತ್ತಿದ್ದರು ಎಂದರು.

ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ ಮಾತನಾಡಿ ಎಸಿ ಅವರು ಉತ್ತಮ ಟೀಂ ಲೀಡರ್‌ ಆಗಿ ಜಮಖಂಡಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎಲ್ಲ ಕೆಲಸಗಳನ್ನು ಸಮಯ ಪ್ರಜ್ಞೆ, ಚಾಣಾಕ್ಷತೆಯಿಂದ ಮಾಡುವ ಉತ್ಸಹಿಯಾಗಿದ್ದಾರೆ ಎಂದರು.

ಬೀಳಗಿ ತಹಸೀಲ್ದಾರ್‌ ಸುಭಾಸ ಇಂಗಳೆ ಮಾತನಾಡಿ, ಯುಕೆಪಿಯ ವಿಶೇಷ ಜಿಲ್ಲಾಧಿಕಾರಿಯಾಗಿ ಬಡ್ತಿ ಪಡೆದಿರುವ ಅಧಿಕಾರಿ ಸಂತೋಷ ಅವರಿಂದ ರೈತರಿಗೆ ನ್ಯಾಯ ದೊರೆಯಲಿದೆ ಎಂದು ಭರವಸೆ ನೀಡಿದರು.

ನೂತನ ಎಸಿ ಶ್ವೇತಾ ಬೀಡಿಕರ ಮಾತನಾಡಿ, ಕೆಲಸದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳ ಸಹಕಾರ ಅವಶ್ಯ. ಸಂತೋಷ ಉತ್ತಮ ಆಡಳಿತಗಾರ, 15 ವರ್ಷದ ಪರಿಚವಿದೆ ಎಂದರು.

ಸಂತೋಷ ಕಾಮಗೌಡ ಮಾತನಾಡಿ, ವರ್ಷದ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರನ್ನು ಸ್ಮರಿಸಿದರು. ಕೆಲ ಸಮಯದಲ್ಲಿ ಕೆಲಸಕ್ಕಾಗಿ ಕೆಲವರ ಮೇಲೆ ಸಿಟ್ಟಾಗಿದ್ದರೂ ತಪ್ಪು ತಿಳಿಯದಂತೆ ಹೇಳಿದರು,

ತಾಪಂ ಸಿಇಒ ಸಂಜು ಜುಮನೂರ, ಯುಕೆಪಿಯ ವಿಶೇಷ ಜಿಲ್ಲಾಧಿಕಾರಿ ಸಾಜಿದ ಮುಲ್ಲಾ, ರಬಕವಿ-ಬನಹಟ್ಟಿಯ ತಹಸೀಲ್ದಾರ್‌ ವಿಜಯ ಕುಮಾರ ಕಡಕೋಳ ಸೇರಿ ಇತರರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ