ಉಳ್ಳಾಲ: ಬಿಜೆಪಿ ಮುಖಂಡ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರಿಸ್ ಲಿಮಿಟೆಡ್ ನ ಮಾಜಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಅನಾರೋಗ್ಯದಿಂದಾಗಿ ವಿಶ್ರಾಂತಿಯಲ್ಲಿದ್ದು, ಅವರ ಅಭಿಮಾನಿ ಬಳಗ ವತಿಯಿಂದ 60ನೇ ವರ್ಷದ ಹುಟ್ಟು ಹಬ್ಬವನ್ನು ಸೋಮವಾರ ಸರಳವಾಗಿ ಅವರ ಸ್ವಗೃಹದಲ್ಲಿ ಆಚರಿಸಲಾಯಿತು.
ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಮಾತನಾಡಿ, ಹುಟ್ಟು ಮತ್ತು ಸಾವಿನ ಮಧ್ಯೆ ಇರುವ ಜೀವನವನ್ನು ಅರ್ಥಪೂರ್ಣವಾಗಿಸುವುದು ನಮ್ಮ ಕೈಯಲ್ಲಿದೆ. ಜನರ ಮನಸ್ಸನ್ನು ಗೆಲ್ಲುವಂತಹ ಒಳ್ಳೆಯ ಕೆಲಸಗಳನ್ನು ಮಾಡಿದಾಗ ಮಾತ್ರ ನಮ್ಮ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎಂಬುದಕ್ಕೆ ಸಂತೋಷ್ ರೈ ಬೋಳಿಯಾರ್ ಅವರ ಜೀವನವೇ ಉತ್ತಮ ಉದಾಹರಣೆ ಎಂದರು.ಬಿಜೆಪಿ ಮುಖಂಡರಾದ ಚಂದ್ರಹಾಸ ಉಳ್ಳಾಲ ಮಾತನಾಡಿ, ದೇವರು ಅವರಿಗೆ ಉತ್ತಮ ಆರೋಗ್ಯದೊಂದಿಗೆ ದೀರ್ಘಾಯುಷ್ಯವನ್ನು ಕರುಣಿಸಲಿ. ಅವರ ಎಲ್ಲ ನೋವುಗಳು ದೂರವಾಗಿ ನೆಮ್ಮದಿಯ ಬದುಕು ಅವರಿಗೆ ಸಿಗುವಂತಾಗಲಿ ಎಂದರು.ಕಣಂತೂರು ಕ್ಷೇತ್ರದ ಆಡಳಿತ ಮೊಕ್ತೇಸರರಾದ ದೇವಿಪ್ರಸಾದ್ ಪೊಯ್ಯತ್ತಾಯ, ಶ್ರೀ ಕ್ಷೇತ್ರ ಕಣಂತೂರಿನ ಅನುವಂಶಿಕ ಮೊಕ್ತೇಸರ ಪದ್ಮನಾಭ ರೈ ಯಾನೆ ಮಂಜು ಭಂಡಾರಿ, ಬೋಳಿಯಾರ್ ಅರಸು ಕ್ಷೇತ್ರದ ರಾಮ ರೈ, ಇನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ್ ಪೂಂಜ, ಮುಖಂಡರಾದ ಚಂದ್ರಹಾಸ್ ಉಚ್ಚಿಲ, ನಾಗಾರಾಜ್ ಭಟ್, ರಾಮದಾಸ್ ಬಂಟ್ವಾಳ, ಕೇಶವ ಭಟ್, ಪುಂಡರೀಕಾಕ್ಷ ಮೂಲ್ಯ, ಮಜಿ ಮಹಮ್ಮಾಯಿ ದೇವಸ್ಥಾನದ ಅರ್ಚಕ ಮನೋಹರ ಭಟ್, ಜನಶಿಕ್ಷಣ ಟ್ರಸ್ಟ್ ನ ಶೀನ ಶೆಟ್ಟಿ, ಕೃಷ್ಣ ಮೂಲ್ಯ ಉಪಸ್ಥಿತರಿದ್ದರು.ಪತ್ನಿ ವೀಣಾ ಸಂತೋಷ್ ರೈ, ಪುತ್ರಿ ಸ್ಪರ್ಶ ಎಸ್. ರೈ, ಪುತ್ರ ಸಮ್ಯಕ್ತ್ ರೈ ಇದ್ದರು. ರವಿ ರೈ ಫಜೀರು ನಿರೂಪಿಸಿದರು.
ಅನಾರೋಗ್ಯ ಕಾಡಿದ್ದ ನನಗೆ ದೇವರ ಅನುಗ್ರಹ ಮತ್ತು ಪಂಜುರ್ಲಿ ದೈವದ ಆಶೀರ್ವಾದದಿಂದ ಮರು ಜನ್ಮ ಸಿಕ್ಕಂತಾಯಿತು. ಉಳಿದ ಜೀವನವನ್ನು ಇನ್ನಷ್ಟು ಸಮಾಜ ಸೇವೆಗೆ ಮೀಸಲಿಡಬೇಕು ಎಂಬ ಸಂಕಲ್ಪ ಮಾಡಿಕೊಂಡಿದ್ದೇನೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಡವರಿಗೆ ಟ್ರಸ್ಟ್ ಮೂಲಕ ಸಾಧ್ಯವಾದಷ್ಟು ನೆರವು ನೀಡುವ ಕೆಲಸವನ್ನುಮಾಡಲಿದ್ದೇವೆ. -ಸಂತೋಷ್ ಕುಮಾರ್ ಬೋಳಿಯಾರ್, ಬಿಜೆಪಿ ಮುಖಂಡ.