ಜಯಲಕ್ಷ್ಮೀಪುರಂನ ಹಿರಿಯ ನಾಗರಿಕರ ಮಂಡಳಿಯು ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ವಿನಾಯಿತಿ ಹಾಗೂ ಇತರ ಅನುಕೂಲಗಳ ಕುರಿತು ಪ್ರಮುಖ ಲೆಕ್ಕಾಧಿಕಾರಿ ಕೇಶವ್ ರವರಿಗೆ ಅವರಿಂದ ಸರಸ್ವತಿ ಸಮುದಾಯ ಭವನದಲ್ಲಿ ಉಪನ್ಯಾಸ ಆಯೋಜಿಸಿತ್ತು.
ಕನ್ನಡಪ್ರಭ ವಾರ್ತೆ ಮೈಸೂರು
ಜಯಲಕ್ಷ್ಮೀಪುರಂನ ಹಿರಿಯ ನಾಗರಿಕರ ಮಂಡಳಿಯು ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ವಿನಾಯಿತಿ ಹಾಗೂ ಇತರ ಅನುಕೂಲಗಳ ಕುರಿತು ಪ್ರಮುಖ ಲೆಕ್ಕಾಧಿಕಾರಿ ಕೇಶವ್ ರವರಿಗೆ ಅವರಿಂದ ಸರಸ್ವತಿ ಸಮುದಾಯ ಭವನದಲ್ಲಿ ಉಪನ್ಯಾಸ ಆಯೋಜಿಸಿತ್ತು.
ಈ ಕುರಿತು ಕೇಶವ ಡೊಂಗ್ರೆ ಮಾತನಾಡಿ, ಹಿರಿಯರು ತಮ್ಮ ವೃತ್ತಿ ಜೀವನದಲ್ಲಿ ದುಡಿದು ಉಳಿದ ಹಣವನ್ನು ಯಾವುದಾದರೂ ಹೆಚ್ಚಿನ ಬಡ್ಡಿ ನೀಡುವ ಒಳ್ಳೆಯ ಬ್ಯಾಂಕ್ ನಲ್ಲಿ ಠೇವಣಿ ಹಣದ ಭದ್ರತೆ ಬಗ್ಗೆಯೂ ಆಲೋಚಿಸಬೇಕು ಎಂದು ಕಿವಿಮಾತು ಹೇಳಿದರು.
ಸಹಕಾರ ಬ್ಯಾಂಕ್‌ಗಳಲ್ಲಿ ಠೇವಣಿ ಮೇಲೆ 5 ಲಕ್ಷ ರು.ಗಳವರೆಗೆ ಆರ್‌ಬಿಐನಿಂದ ಡಿಐಸಿಜಿಸಿಎಲ್ ಇನ್ಸ್ಸುರೆನ್ಸ್ ಮೂಲಕ ಭದ್ರತೆ ಒದಗಿಸಲಾಗಿದೆ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿಯೂ ಇನ್ನೂ ಹೆಚ್ಚಿನ ಭದ್ರತೆ ಇದೆ ಎಂದು ಅವರು ಹೇಳಿದರು.
ಆದಾಯ ತೆರಿಗೆ ಬಗ್ಗೆ ಕುರಿತು ಮಾತನಾಡಿದ ಅವರು, ವಾರ್ಷಿಕ ಆದಾಯ 7 ಲಕ್ಷ ರು. ಮೀರಿದ್ದರೆ ಸಂಪೂರ್ಣ ಆದಾಯ ತೆರಿಗೆ ವಿನಾಯಿತಿ ಇರುವುದು ಹಾಗೂ 7 ಲಕ್ಷ ಮಿತಿ ಮೀರಿದವರಿಗೆ 3 ಲಕ್ಷದಿಂದಲೇ ತೆರಿಗೆ ಕಟ್ಟಬೇಕಾಗುತ್ತದೆ.
ಕೆಲವರು ಹಳೆಯ ಐಟಿ ಸ್ಕೀಮ್ ನ ಪ್ರಕಾರ ಪಿಪಿಎಫ್, ಎಸ್.ಬಿಐ, ಆರೋಗ್ಯ ವಿಮೆ, ಮನೆ ಸಾಲದ ಕಂತು ಮತ್ತು ಸಾಲದ ಬಡ್ಡಿ ಹಾಗೂ ಇತರ ಹಣ ಪಾವತಿ ಮಾಡುವುದನ್ನು ಸೆಕ್ಷನ್80 ಸಿ, 80 ಡಿಡಿ ಪ್ರಕಾರ ತೆರಿಗೆ ವಿನಾಯ್ತಿ ಪಡೆಯಬಹುದಾಗಿ ಅವರು ತಿಳಿಸಿದರು.
ಹಿರಿಯ ನಾಗರಿಕರ ಮಂಡಳಿ ಅಧ್ಯಕ್ಷ ಡಾ.ಎಚ್.ಎಂ. ನಾಗರಾಜು, ಟ್ರಸ್ಟಿ ಗೌಡಪ್ಪ, ಜವರೇಗೌಡ, ಮಾದೇಗೌಡ, ಎನ್. ಆಚಾರ್, ಶ್ರೀನಿವಾಸ್, ವೆಂಕಟೇಶಯ್ಯ, ಲತಾ ರಾಮಣ್ಣ, ಮನೋನ್ಮಣಿ ಇದ್ದರು.