ಸರ್ದಾರ್‌ ವಲ್ಲಭ ಭಾಯಿ ಪಟೇಲ್ ಆದರ್ಶ ಪಾಲಿಸಿ

KannadaprabhaNewsNetwork |  
Published : Nov 01, 2025, 01:45 AM IST
ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ, ಪುಣ್ಯಸ್ಮರಣೆ, ವಲ್ಲಭಬಾಯಿ ಪಟೇಲ್ ಜನ್ಮದಿನಾಚರಣೆ | Kannada Prabha

ಸಾರಾಂಶ

ಅಖಂಡ ಭಾರತ ನಿರ್ಮಿಸಲು ಶ್ರಮಿಸಿದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ದಾರ್‌ ವಲ್ಲಭ ಭಾಯಿ ಪಟೇಲ್ ಹಾಗೂ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ದೇಶಕ್ಕೆ ನೀಡಿದ ಜನಪರ ಕಾರ್ಯಕ್ರಮಗಳನ್ನು ಸ್ಮರಿಸುವ ಅಗತ್ಯವಿದೆ ಎಂದು ಮಾಜಿ ಉಪಸಭಾಪತಿ ವಿ.ಆರ್. ಸುದರ್ಶನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಅಖಂಡ ಭಾರತ ನಿರ್ಮಿಸಲು ಶ್ರಮಿಸಿದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ದಾರ್‌ ವಲ್ಲಭ ಭಾಯಿ ಪಟೇಲ್ ಹಾಗೂ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ದೇಶಕ್ಕೆ ನೀಡಿದ ಜನಪರ ಕಾರ್ಯಕ್ರಮಗಳನ್ನು ಸ್ಮರಿಸುವ ಅಗತ್ಯವಿದೆ ಎಂದು ಮಾಜಿ ಉಪಸಭಾಪತಿ ವಿ.ಆರ್. ಸುದರ್ಶನ್ ತಿಳಿಸಿದರು.

ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಏರ್ಪಡಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನಾಚರಣೆ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಇಬ್ಬರು ಮಹಾನಿಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಈ ಹಿಂದೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಕಾಂಗ್ರೆಸ್‌ನ್ನು ಸಮರ್ಥವಾಗಿ ಕಟ್ಟುವ ಕೆಲಸ ಮಾಡಿದರು. ದೇಶದ ಜನರ ಕಲ್ಯಾಣಕ್ಕಾಗಿ ಜಾರಿಗೆ ತಂದ ಗರೀ ಬಿ ಹಠಾವೋ, ಭೂ ಸುಧಾರಣೆ, ಆಹಾರ ಭದ್ರತೆಯಂತಹ ೨೦ ಅಂಶದ ಕಾರ್ಯಕ್ರಮಗಳು ಇಂದಿಗೂ ಜನಪ್ರಿಯವಾಗಿವೆ ಎಂದರು.

ಕಾಡಾ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಇಂದಿರಾ ಗಾಂಧಿ ಅವರಂತೆ ವಲ್ಲಭಬಾಯಿ ಪಟೇಲರು ಉಕ್ಕಿನ ಮನುಷ್ಯ ಎಂದೇ ಪ್ರಸಿದ್ದಿಯಾಗಿದ್ದರು. ಸ್ವಾತಂತ್ರ್ಯ ನಂತರ ಹಲವಾರು ಕಡೆ ಹರಿದು ಹಂಚಿ ಹೋಗಿದ್ದ ನಾನಾಭಾಗಗಳನ್ನು ಒಟ್ಟುಗೂಡಿಸಿದರು ಎಂದರು.

ಚುಡಾ ಅಧ್ಯಕ್ಷ ಮಹಮದ್ ಅಸ್ಗರ್‌ಮುನ್ನಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನಾ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಎಸ್‌ಗುರುಸ್ವಾಮಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್,ಮಹದೇವ್, ನಗರಸಭಾ ಸದಸ್ಯ ಸ್ವಾಮಿ, ಎ,ಪಿ,ಎಂ,ಸಿ ಅಧ್ಯಕ್ಷ ಗುರುಸ್ವಾಮಿ, ಸದಸ್ಯ ಬಸುಮರಿ, ಜಿ,ಪಂ ಮಾಜಿ ಸದಸ್ಯ ಕೆರಹಳ್ಳಿ ನವೀನ್, ಗ್ರಾ,ಪಂ ಅಧ್ಯಕ್ಷರಾದ ಶೇಖರಪ್ಪ, ರೋಪೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೇಂದ್ರ, ಮುಖಂಡರಾದ ನಸ್ರುಲ್‌ಖಾನ್, ಮೋಹನ್‌ನಗು, ಕೆ,ಕೆ ಹುಂಡಿ ನಾಗರಾಜು, ಮುಕುಂದವರ್ಮ, ತೋಟೇಶ್,ರವಿಗೌಡ, ಮಹಾಂತಾಲಪುರಮಹದೇಸ್ವಾಮಿ, ಮಾಧ್ಯಮ ಪತ್ರಿಕಾ ಕಾರ್ಯದರ್ಶಿರಾಜೇಶ್‌ಗೌಡಳ್ಳಿ, ಸೇವಾದಳದ ಅಧ್ಯಕ್ಷ ಜಯರಾಜು, ಮಧು, ಪುಟ್ಟಸ್ವಾಮಿಮುತ್ತಿಗೆ,ರವಿ. ಪ್ರಕಾಶ್, ರಾಮಕೃಷ್ಣ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಹಾಜರಿದ್ದರು.

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!