ಮಹಿಳೆಯರ ಸ್ವಾವಲಂಬನೆಗೆ ಸೀರೆಗಳ ಮಾರಾಟ ಮೇಳ ಪೂರಕ: ಭಾನುಮತಿ ಶೆಟ್ಟಿ ಕಕ್ವಗುತ್ತು

KannadaprabhaNewsNetwork |  
Published : Oct 05, 2026, 02:45 AM IST
ಸುರತ್ಕಲ್‌ ಬಂಟರ ಭವನದಲ್ಲಿ ಸೀರೆ, ಆಭರಣ ಮತ್ತು ವಿವಿಧ ಉತ್ಪನ್ನಗಳ ಮಾರಾಟ ಮೇಳ | Kannada Prabha

ಸಾರಾಂಶ

ಮಹಿಳೆಯರು ಇಂದಿನ ದಿನಗಳಲ್ಲಿ ಪುರುಷರಿಗೆ ಸಮಾನರಾಗಿದ್ದು ಮಹಿಳೆಯರ ಸ್ವಾವಲಂಬನೆಗೆ ಸೀರೆಗಳ ಮಾರಾಟ ಮೇಳದಂತಹ ಕಾರ್ಯಕ್ರಮಗಳು ಪೂರಕ ಎಂದು ತುಳು ವರ್ಲ್ಡ್ ಫೌಂಡೇಶನ್‌ ಕಟೀಲಿನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಹೇಳಿದರು.

ಮೂಲ್ಕಿ : ಮಹಿಳೆಯರು ಇಂದಿನ ದಿನಗಳಲ್ಲಿ ಪುರುಷರಿಗೆ ಸಮಾನರಾಗಿದ್ದು ಮಹಿಳೆಯರ ಸ್ವಾವಲಂಬನೆಗೆ ಸೀರೆಗಳ ಮಾರಾಟ ಮೇಳದಂತಹ ಕಾರ್ಯಕ್ರಮಗಳು ಪೂರಕ ಎಂದು ತುಳು ವರ್ಲ್ಡ್ ಫೌಂಡೇಶನ್‌ ಕಟೀಲಿನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಹೇಳಿದರು.

ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆ ವತಿಯಿಂದ ದಸರಾ ಮತ್ತು ದೀಪಾವಳಿ ಪ್ರಯುಕ್ತ ಸುರತ್ಕಲ್ ಬಂಟರ ಭವನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸೀರೆ ಮತ್ತು ಆಭರಣಗಳ ಹಾಗೂ ವೈವಿಧ್ಯಮಯ ಉತ್ಪನ್ನಗಳ ಮಾರಾಟ ಮೇಳ- ಸಿಂಧೂರ 2026ವನ್ನು ಉದ್ಘಾಟಿಸಿ ಮಾತನಾಡಿದರು.

ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ತಾರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಮಹಿಳಾ ವೇದಿಕೆಯ ಸ್ಥಾಪಕ ಅಧ್ಯಕ್ಷೆ ಅಂಜನಾ ಮಂಜಯ್ಯ ಶೆಟ್ಟಿ, ಉಪಾಧ್ಯಕ್ಷೆ ಜಯಂತಿ ಪಿ.ಟಿ. ರೈ, ಕೋಶಾಧಿಕಾರಿ ಮಾಲತಿ ಜೆ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ವೇದಿಕೆಯ ಕಾರ್ಯದರ್ಶಿ ರಾಜೇಶ್ವರಿ ಡಿ. ಶೆಟ್ಟಿ ಸ್ವಾಗತಿಸಿದರು.

ಮೂರು ದಿನಗಳ ಮೇಳದಲ್ಲಿ ಸೀರೆ ಮತ್ತು ಇತರ ವಿವಿಧ ಉಡುಪುಗಳು, ಗೃಹೋಪಯೋಗಿ ಮತ್ತು ಕರ ಕುಶಲ ವಸ್ತುಗಳು, ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು ವ್ಯವಸ್ಥೆ ಮಾಡಲಾಗಿದ್ದು, ಆಹಾರೋತ್ಸವವು ಮೇಳದ ಇನ್ನೊಂದು ಆಕರ್ಷಣೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ ಆಕ್ಷೇಪಣೆಯಲ್ಲಿ ನಕಲಿ ಮರಣ ಪ್ರಮಾಣಪತ್ರ ಸಲ್ಲಿಕೆ
ಯುವಕರಲ್ಲಿ ನಾಯಕತ್ವ ಬೆಳೆಸಲು ಯುವ ಸಂಘ ಯೋಜನೆ