ಶೇಷಮೂರ್ತಿ ಅವಧಾನಿ
ಇದು ಇಲ್ಲಿನ ರಾಮ ಮಂದಿರದಿಂದ ಹೈಕೋರ್ಟ್‌ಗೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆಯಲ್ಲಿರುವ ಸರ್ವಜ್ಞ ಕಾಲೇಜು ತನ್ನಲ್ಲಿ ಓದಲು ಬಂದ ವಿಕೇಲ ಚೇತನ ಮಕ್ಕಳಿಗಾಗಿ ಲಿಫ್ಟ್ ನಿರ್ಮಿಸಿ ಮಾನವೀಯತೆ ಮಿಡಿದಿದೆ.
ಅತ್ಯಂತ ಶ್ರಮಪಟ್ಟು ಸರ್ವಜ್ಞ ಕಾಲೇಜನ್ನು ಕಟ್ಟಿ ಬೆಳೆಸಿದವರು ಪ್ರೊ. ಚೆನ್ನಾರೆಡ್ಡಿ ಎಂಬುದರಲ್ಲಿ ದೂಸ್ರಾ ಮಾತಿಲ್ಲ. ಸ್ವಂತ ಕಟ್ಟಡದಲ್ಲಿ ಕಾಲೇಜು ತಲೆ ಎತ್ತಿದರೂ ಕೂಡಾ ಅಲ್ಲಿ ಲಿಫ್ಟ್ ಸವಲತ್ತು ಇರಲಿಲ್ಲ. ಹಾಗಂತ ಅದು ಅಲ್ಲಿಗೆ ಬರುವ ಮಕ್ಕಳ ಓದಿಗೆ ಕೊರತೆಯಾಗಿಯೂ ಕಾಡಿರಲಿಲ್ಲ. ಆದರೆ ಈ ಕಾಲೇಜಿಗೆ ನಿಧಾನವಾಗಿ ವಿಕಲ ಚೇತನರು ಪ್ರವೇಶ ಕೇಳಿಕೊಂಡು ಬಂದಾಗಲೇ ಲಿಫ್ಟ್ ಬೇಕೆಂಬ ವಿಚಾರ ಕಾಡಿತ್ತು.ವಿಕಲ ಚೇತನರ ಓದಿಗೆ ಲಿಫ್ಟ್ ಕೊರತೆಯಾಗಬಾರದು ಎಂದು ಅದೇನೇ ಕಷ್ಟಗಳಿದ್ದರೂ ಬದಿಗೊತ್ತಿ ಕಾಲೇಜಿನ ಮುಖ್ಯಸ್ಥ ಪ್ರೊ. ಚೆನ್ನಾರೆಡ್ಡಿಯವರು ಲಿಫ್ಟ್ ಒದಗಿಸಿಬಿಟ್ಟರು. ಲಿಫ್ಟ್ ಬಳಸಿ ತರಗತಿ, ಪ್ರಯೋಗಾಲಯಗಳಿಗೆ ನಿಯಮಿತವಾಗಿ ತೊಂದರೆ ಇಲ್ಲದೆ ಹಾಜರಾಗಿರುವ ವಿಕಲ ಚೇತನ ಮಕ್ಕಳು ಇಲ್ಲೀಗ ಟಾಪ್ಪರ್ ಆಗಿ ಹೊರಹೊಮ್ಮಿ ಗಮನ ಸೆಳೆದಿದ್ದಾರೆ.
ಐಶ್ವರ್ಯಳ ಕಷ್ಟ ಕಂಡು ಮರುಗಿದ್ದರು ಚೆನ್ನಾರೆಡ್ಡಿ:
ಆಕೆಯ ಕಷ್ಟ ಹತ್ತಿರದಿಂದ ಕಂಡಿದ್ದ ಪ್ರೊ. ಚೆನ್ನಾರೆಡ್ಡಿಯವರು ಆಗಲೇ ಕಾಲೇಜಿಗೆ ಬರುವ ಇಂತಹ ಮಕ್ಕಳಿಗಾಗಿಯೇ ಲಿಫ್ಟ್ ಸವಲತ್ತು ಬೇಕೇಬೇಕು ಎಂದು ಅನಿಸಿಕೆ ಒದಗಿಸಿದ್ದರು. ಐಶ್ವರ್ಯಳ ನಂತರ ಇಲ್ಲಿ ಪ್ರವೇಶ ಪಡೆದ ಸೇಡಂನ ವಿಕಲ ಚೇತನ ಕಾರ್ತಿಕ್ ಲಿಫ್ಟ್ ಸವಲತ್ತು ಸಮರ್ಥವಾಗಿ ಬಳಸಿಕೊಂಡು ಈ ಬಾರಿ ಪಿಯುಸಿ 2ನೇ ವರ್ಷದಲ್ಲಿ ಶೇ.94 ಅಂಕ ಪಡೆದು ಸಾಧನೆ ಮೆರೆದಿದ್ದಾನೆ.
ಸೇಡಂ ಶಾಹಿ ಸ್ಕೂಲ್‌ನ ವಿದ್ಯಾರ್ಥಿ ಕಾರ್ತಿಕ್ ನಡೆಯಲು ಆಗದ ವಿಕಲ ಚೇತನ, ಈತನ ಅಜ್ಜ ಮೊಮ್ಮಗನನ್ನು ಕರೆದುಕೊಂಡು ಸರ್ವಜ್ಞಕ್ಕೆ ಬಂದಾಗ ತಕ್ಷಣ ಕಾರ್ತಿಕ್‌ಗೆ ಪ್ರವೇಶ ನೀಡಿದವರು ಚೆನ್ನಾರೆಡ್ಡಿ. ಇದೀಗ ಕಾರ್ತಿಕ್ ಕುಟುಂಬ ಸರ್ವಜ್ಞ ಕಾಲೇಜಿನ ಸಹಾಯ ಹಸ್ತ ಎಂದೂ ಮರೆಯೋದಿಲ್ಲವೆಂದು ಹೇಳುತ್ತಿದ್ದಾರೆ.ನನ್ನ ಮೊಮ್ಮಗ ಕಾರ್ತಿಕ್ ವಿಕಲ ಚೇತನ. ಪ್ರವೇಶ ಕೊಡ್ರಿ ಅಂತ ಬಂದಾಗ ತಕ್ಷಣ ನಮ್ಮ ಮಾತಿಗೆ ಸ್ಪಂದಿಸಿ ಇಂತಹವರಿಗೆ ಪ್ರವೇಶ ಕೊಡದೆ ಇದ್ರೆ ಹೇಗಂದು ಬಹಳ ನೆರವು ನೀಡಿದವರು ಪ್ರೊ. ಚೆನ್ನಾರೆಡ್ಡಿ. ಅವರ ನೆರವಿಗೆ ತಕ್ಕಂತೆ ಕಾರ್ತಿಕ್ ಹೆಚ್ಚಿನ ಅಂಕ ಪಡೆದಿದ್ದಾನೆ. ಇದು ಕಾಲೇಜಿಗೆ, ನಮಗೆ ಹೆಮ್ಮೆಯ ಸಂಗತಿಯಾಗಿದೆ.
- ಪ್ರೊ. ಚೆನ್ನಾರೆಡ್ಡಿ, ಸಂಸ್ಥಾಪಕರು, ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಮೂಹ, ಕಲಬುರಗಿ