ಹಿರಿಯೂರು ಉಪವಿಭಾಗದಲ್ಲಿ ಸೇವೆ ಸಲ್ಲಿಸಿದ ತೃಪ್ತಿ ಇದೆ

KannadaprabhaNewsNetwork |  
Published : Sep 09, 2024, 01:31 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯ, ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಸಹಕಾರದಿಂದ ನಿರ್ವಹಿಸಿದ ಕಾರ್ಯ ತೃಪ್ತಿ ತಂದಿದೆ ಎಂದು ಡಿವೈಎಸ್ ಪಿ ಚೈತ್ರಾ ಹೇಳಿದರು. ನಗರದ ಪಾರಿಜಾತ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಹಾಗೂ ನೂತನ ಡಿವೈಎಸ್ ಪಿ ಶಿವಕುಮಾರ್ ರವರ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಹಿರಿಯ, ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಸಹಕಾರದಿಂದ ನಿರ್ವಹಿಸಿದ ಕಾರ್ಯ ತೃಪ್ತಿ ತಂದಿದೆ ಎಂದು ಡಿವೈಎಸ್ ಪಿ ಚೈತ್ರಾ ಹೇಳಿದರು. ನಗರದ ಪಾರಿಜಾತ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಹಾಗೂ ನೂತನ ಡಿವೈಎಸ್ ಪಿ ಶಿವಕುಮಾರ್ ರವರ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಒತ್ತಡಕ್ಕೆ ಸಿಲುಕದೆ ಕೆಲಸ ನಿರ್ವಹಿಸಬೇಕು. ಹಿರಿಯೂರು ನನಗೆ ಮೊದಲ ಕಾರ್ಯಕ್ಷೇತ್ರವಾಗಿದ್ದು ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಕಿರಿಯ ಅಧಿಕಾರಿಗಳ ಟೀಮ್ ವರ್ಕ್ ಹಾಗೂ ಸಿಬ್ಬಂದಿ ವರ್ಗದವರ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ನನಗೆ ಅತ್ಯಂತ ತೃಪ್ತಿ ತಂದಿದೆ ಎಂದರು.

ಅಧಿಕಾರಿಗಳು ಜನರ ಜೀವ ಮತ್ತು ಜೀವನ ಸುರಕ್ಷತೆ ಬಗ್ಗೆ ನಿಗಾ ವಹಿಸಬೇಕು. ತಾಲೂಕಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದ್ದು ಸಂಚಾರ ಹಾಗೂ ಅಪರಾಧ ಚಟುವಟಿಕೆಗಳ ಸುಧಾರಣೆಗೆ ಇನ್ನೂ ಹೆಚ್ಚಿನ ನಿಗಾ ವಹಿಸಬೇಕಿದೆ. ಜಿಲ್ಲೆಯ ಜನರ ಜತೆ ಉತ್ತಮ ಒಡನಾಟ ಇದೆ ಎಂದರು.

ನೂತನ ಡಿವೈಎಸ್ ಪಿ ಶಿವಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ಹಿರಿಯೂರು ಉಪವಿಭಾಗ ಉತ್ತಮವಾಗಿ ಕಾರ್ಯನಿರ್ವಹಿಸಿದ್ದ ಬಗ್ಗೆ ಮಾಹಿತಿ ಇದೆ. ಜಿಲ್ಲೆಯಲ್ಲಿ ಮತೀಯ ಗಲಭೆ ಹಾಗೂ ಇತರೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ, ಸಾರ್ವಜನಿಕರ ಆಸ್ತಿ ಪಾಸ್ತಿಗೆ ಹಾನಿ ಮಾಡುವಂತಹ ಯಾವುದೇ ಘಟನೆಗಳು ಜರುಗಿದ ಉದಾರಣೆಗಳು ಇಲ್ಲ. ಉಪವಿಭಾಗದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಒಂದು ತಂಡವಾಗಿ ಕಾರ್ಯನಿರ್ವಹಿಸಿರುವುದರಿಂದ ಯಶಸ್ಸು ಕಾಣಲಾಗಿದೆ. ಅದೇ ಯಶಸ್ಸನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸಿಪಿಐಗಳಾದ ತಿಮ್ಮಣ್ಣ, ರಾಘವೇಂದ್ರ ಕಾಂಡಿಕೆ, ಕಾಳಿಕೃಷ್ಣ, ಮಧು, ಪಿಎಸ್ ಐಗಳಾದ ಮಂಜುನಾಥ್, ಲಕ್ಷ್ಮಿನಾರಾಯಣ, ಶಶಿಕಲಾ, ಎಎಸ್ಐ ರೇಖಾ, ಮುಖಂಡರುಗಳಾದ ಕೇಶವಮೂರ್ತಿ, ಕೆಸಿ.ಹೊರಕೇರಪ್ಪ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ