ಕನ್ನಡಪ್ರಭ ವಾರ್ತೆ ಯರಗಟ್ಟಿ
ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆಝಾದ್ ವಿವಿಧೋದ್ದೇಶಗಳ ಸಹಕಾರಿ ಸಂಘದ 1ನೇ ಮಹಡಿ ಕಟ್ಟಡದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸತೀಶ ಜಾರಕಿಹೋಳಿಯವರ ಸರಳತೆ, ಸೌಜನ್ಯತೆ ಇದೆ. ಏನೇ ಸಮಸ್ಯೆ ಇದ್ದರೂ ಸ್ಪಂದಿಸುವ ಗುಣವಿದೆ. ಲೋಕೂಪಯೋಗಿ ಸಚಿವರಾಗಿ ಇಷ್ಟ ಕೆಲಸ ಮಾಡಿದ್ದಾರೆ. ಇನ್ನೂ ರಾಜ್ಯ ಚುಕ್ಕಾಣಿ ಕೊಟ್ಟರೇ ಇನ್ನೂ ಸಾಕಾಗುವಷ್ಟು ಕೆಲಸ ಮಾಡಬಹುದು. ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೀವು ಮುಂದಿನ ದಿನದಲ್ಲಿ ಕರ್ನಾಟಕ ಮುಖ್ಯಮಂತ್ರಿಯಾಗಬೇಕು. ಬೆಳಗಾವಿ ಜಿಲ್ಲೆಯ ಒಬ್ಬರು ಮುಖ್ಯ ಮಂತ್ರಿಯಾಗಬೇಕು ಎಂದು ಶುಭ ಹಾರೈಯಿಸಿದರು.ಜಿಲ್ಲಾ ಉಸ್ತುವಾರಿ ಹಾಗೂ ಲೋಕೂಪಯೋಗಿ ಸಚಿವ ಸತೀಶ ಜಾರಕಿಹೋಳಿ ಮಾತನಾಡಿ, ಸಹಕಾರ ಸಂಘವನ್ನು ಸ್ಥಾಪಿಸುವುದು ಸುಲಭ ಬೆಳವಣಿಗೆಯತ್ತ ಕೊಂಡೊಯ್ಯಲು ಬಹಳಷ್ಟು ಶ್ರಮಬೇಕು. ಆ ಸಾಲಿನಲ್ಲಿ ಆಝಾದ್ ವಿವಿಧೋದ್ದೇಶಗಳ ಸಹಕಾರಿ ಸಂಘ ಪ್ರಗತಿಯತ್ತ ಮುನ್ನೆಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.ಸವದತ್ತಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಸಂಘದ ನಿರ್ದೇಶಕರಿಂದ ಸಹಕಾರ, ಸಹಕಾರಿ ಸಂಘದಕ್ಕೆ ಬಹಳ ಮುಖ್ಯ. ಈ ಸಂಘದ ಅಧ್ಯಕ್ಷರು ಸತತ ಪ್ರಯತ್ನದಿಂದ 29ನೇ ವಾರ್ಷಿಕ ವರದಿ ಅಢಾವೆ ಪ್ರಕಾರ ₹25ಲಕ್ಷ ಲಾಭ ಗಳಸಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಲಾಭ ಗಳಿಸಲಿ ಎಂದು ಶುಭಕೋರಿದರು.ಸಂದರ್ಭದಲ್ಲಿ ಸಾನ್ನಿಧ್ಯ ಹಫೀಜ್ ಲಿಯಾಖತ, ಅಧ್ಯಕ್ಷತೆ ಮಲೀಕಸಾಬ್ ಬಾಗವಾನ, ಜಿಪಂ ಸದಸ್ಯ ಅಜೀತಕುಮಾರ ದೇಸಾಯಿ, ಉಮೇಶ ಬಾಳಿ, ಮಹಾಬಳೇಶ್ವರ ಹಾದಿಮನಿ, ಕುಮಾರ ಹಿರೇಮಠ, ಮಹಾಂತೇಶ ಜಕಾತಿ, ಎಸ್.ಆರ್.ರೆಬ್ಬನ್ನವರ, ಎಫ್.ಜಿ.ಗೌಡರ, ಮುರಾರಿ ತೇನಗಿ, ಭೀಮಶಿ ಮುಡೆನ್ನವರ, ಅಬ್ದುಲಸಾಬ್ ನಧಾಪ, ಎ.ಎಂ.ಶಂಕರಲಿಂಗಪ್ಪ, ಶಂಕರ ಇಟ್ನಾಳ, ಉಸ್ಮಾನಬೇಗ ಜಮಾದರ, ನೀಖಿಲ ದೇಸಾಯಿ, ಹಣಮಂತ ಹಾರುಗೊಪ್ಪ, ಸಲೀಮಬೇಗ ಜಮಾದಾರ, ಆಝಾದ್ ಬ್ಯಾಂಕ್ ಸಂಘದ ಸದಸ್ಯರು ಉಪಸ್ಥಿತರಿದ್ದರು.