ಶಿರಹಟ್ಟಿ: 12ನೇ ಶತಮಾನದಲ್ಲಿ ಅಸ್ಪೃಶ್ಯತೆ, ಅಸಮಾನತೆ, ಕೆಡಕು ಪದ್ಧತಿ ಹೋಗಲಾಡಿಸುವಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ಪಾತ್ರ ಮಹತ್ತರವಾದುದು. ಇಂಥ ಮಹಾನ್ ವ್ಯಕ್ತಿಯ ತತ್ವ- ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಎಂ.ಕೆ. ಲಮಾಣಿ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸತ್ಪುರುಷರ, ಮಹಾತ್ಮರ ಜಯಂತಿ ಕೇವಲ ಆಚರಣೆಗೆ ಸೀಮಿತವಾಗುತ್ತಿರುವುದು ನೋವಿನ ಸಂಗತಿ. ಸತ್ಪುರುಷರ, ಮಹಾತ್ಮರ ಜೀವನ ಸಂದೇಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಆಚರಣೆಗೆ ಅರ್ಥ ಬರಲಿದೆ. ಸಿದ್ದರಾಮೇಶ್ವರರು ಸಮಾನತೆ, ಮಾನವೀಯತೆ ಹಾಗೂ ಕಾಯಕ- ದಾಸೋಹದ ಸಂದೇಶವನ್ನು ಸಮಾಜಕ್ಕೆ ಸಾರಿದ ಮಹಾನ್ ಶರಣರು ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಿದ್ದರಾಮೇಶ್ವರರು ದಿನನಿತ್ಯ ಶಿವನ ಮೂರ್ತಿಗೆ ಪೂಜೆಗೈಯುವ ಮೂಲಕ ಶಿವನನ್ನೇ ಪ್ರತ್ಯಕ್ಷಗೊಳಿಸಿದ ಮಹಾನ್ ಮೇಧಾವಿಗಳಾಗಿದ್ದರು ಎಂದರು.ರಾಜು ಶಿರಹಟ್ಟಿ, ನಾಗಪ್ಪ ಒಡ್ಡರ, ಎಂ.ಎ. ಮಕಾನದಾರ, ಪ್ರಶಾಂತ ಛಬ್ಬಿ, ನಂದಾ ಕಪ್ಪತ್ತನವರ, ಶಾಂತಾ ಪಾಟೀಲ, ವೀರಮ್ಮ ಕಳಸಾಪೂರ, ಚಂದ್ರಶೇಖರ್, ಮೋಹನ್ ಮಾಂಡ್ರೆ, ಶರಣಪ್ಪ ಹರ್ತಿ, ಅರ್ಜುನಪ್ಪ ಇತರರು ಇದ್ದರು. ನಾಳೆ ೩೭ನೇ ವಾರ್ಷಿಕ ಪೂಜೆ
ಲಕ್ಷ್ಮೇಶ್ವರ: ತಾಲೂಕಿನ ಒಡೆಯರ ಮಲ್ಲಾಪುರದ ಕ್ಷೇತ್ರಪಾಲ ಬ್ರಹ್ಮದೇವರ ದೇವಸ್ಥಾನದ ೩೭ನೇ ವಾರ್ಷಿಕ ಪೂಜಾ ಮಹೋತ್ಸವ ಹಾಗೂ ದೇವಸ್ಥಾನದ ಕಾಂಪೌಂಡ್ ಮತ್ತು ಫೇವರ್ಸ್ ಉದ್ಘಾಟನೆ ಸಮಾರಂಭ ಜ. ೧೮ರಂದು ಬೆಳಗ್ಗೆ ೧೧ಕ್ಕೆ ಜರುಗಲಿದೆ.ಶಾಸಕ ಡಾ. ಚಂದ್ರು ಲಮಾಣಿ ಕಾರ್ಯಕ್ರಮ ಉದ್ಘಾಟಿಸುವರು. ಗ್ರಾಮ ಪಂಚಾಯಿತಿ ಸದಸ್ಯ ಪದ್ಮರಾಜ ಪಾಟೀಲ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಹಾಸ್ಯ ಕಲಾವಿದ ರವಿರಾಜ ಸುಕುಮಾರ ಪಾಟೀಲ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.