ರಾಜ್ಯ ಬಜೆಟ್ ನಲ್ಲಿ ಶೇ.1 ರಷ್ಟೇ ಮುಸ್ಲಿಮರಿಗೆ ಕೊಟ್ಟಿದ್ದಾರೆ

KannadaprabhaNewsNetwork |  
Published : Mar 16, 2025, 01:49 AM IST
ಫೋಟೋ | Kannada Prabha

ಸಾರಾಂಶ

ಪ್ರತಾಪ್ ಸಿಂಹ ನನ್ನ ಸ್ನೇಹಿತ, ನನ್ನ ಅವನ ನಡುವೆ ಒಳ್ಳೆಯ ಸ್ನೇಹವಿದೆ

ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯ ಬಜೆಟ್ ನಲ್ಲಿ ಶೇ.1 ರಷ್ಟೇ ಮುಸ್ಲಿಮರಿಗೆ ಕೊಟ್ಟಿದ್ದಾರೆ. ಇದನ್ನು ಹಲಾಲ್ ಬಜೆಟ್ ಅಂದರೆ ಏನು ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ಕಿಡಿಕಾರಿದರು.ಹಲಾಲ್ ಬಜೆಟ್ ಎಂಬ ಬಿಜೆಪಿ ನಾಯಕರ ಟೀಕೆಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಇದೇ ರೀತಿ ಹೇಳ್ತಿದ್ರೇ ಇನ್ಮುಂದೆ ಹಲಾಲ್ ಬಜೆಟ್ ಇರ್ಲೀ ಅಂತಾ ನಾನು ಹೇಳ್ತೀನಿ ಎಂದರು.ಪ್ರತಾಪ್ ಸಿಂಹ ನನ್ನ ಸ್ನೇಹಿತ, ನನ್ನ ಅವನ ನಡುವೆ ಒಳ್ಳೆಯ ಸ್ನೇಹವಿದೆ. ಆದರೆ, ಆತನ ಮಾತು, ನಾಲಿಗೆ ಸ್ವಲ್ಪ ಸರಿಯಿಲ್ಲ. ಅವನ ಮಾತಿನಿಂದ ಹಲವರಿಗೆ ನೋವಾಗಿದೆ. ಸಭ್ಯತೆ ಮೀರಿ ಆತ ನಡೆದುಕೊಳ್ಳಬಾರದು. ಅದನ್ನು ಕಂಟ್ರೋಲ್ ಮಾಡಿಕೊಳ್ಳಬೇಕು. ಹಜ್ ಯಾತ್ರೆಗೆ ನಾವು ದೇವಸ್ಥಾನದ ದುಡ್ಡು ಬಳಸಿಲ್ಲ. ಬೇಕಾದ್ರೆ ಆರ್ ಟಿ ಐ ಮೂಲಕ‌ ಅರ್ಜಿ ಹಾಕಿ ಮಾಹಿತಿ ತೆಗೆದುಕೊಳ್ಳಬಹುದು ಎಂದು ಪ್ರತಾಪ್ ಸಿಂಹಗೆ ಟಾಂಗ್ ನೀಡಿದರು.ಶಾಸಕನಾಗಿ ನನ್ನ ಕೆಲಸ ಮಾಡ್ತಿದೀನಿ. ಹೆಚ್ಚುವರಿ ಸ್ಥಾನ ಸಿಕ್ಕಾಗ ಜವಾಬ್ದಾರಿ ನಿರ್ವಹಣೆ ಮಾಡ್ತೀನಿ. ಸದ್ಯಕ್ಕೆ ಯಾವುದೇ ಸ್ಥಾನದ ಮೇಲು ಆಸೆ ಇಟ್ಟುಕೊಂಡು ನಾನು ಕೂತಿಲ್ಲ ಎಂದರು.ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು‌. ತನಿಖಾ ತಂಡ ಸತ್ಯವನ್ನು ಜನರ ಮುಂದೆ ಇಡುವ ಕೆಲಸವನ್ನು ಮಾಡಬೇಕು. ನಾನು ಇಂತಹ ವಿಚಾರಕ್ಕೆ ತಲೆ ಹಾಕೋದಿಲ್ಲ. ಮೈಸೂರಿನಲ್ಲಿ 2014ರಲ್ಲಿ ನಡೆದಿರುವ ಪ್ರಕರಣ ಕೂಡ ನನ್ನ ತಲೆಯಲ್ಲಿ ಇಲ್ಲ ಎಂದು ಅವರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ