ಮೀಸಲು ಹಣ ದುರ್ಬಳಕೆ ವಿರೋಧಿಸಿ ಸತ್ಯಾಗ್ರಹ

KannadaprabhaNewsNetwork |  
Published : Mar 03, 2025, 01:46 AM IST
ಸಿಕೆಬಿ-3 ಸುದ್ದಿಗೋಷ್ಟಿಯಲ್ಲಿ ಸಮತಾ ಸೈನಿಕ ದಳದ ರಾಜ್ಯ ಪ್ರಧಾನಕಾರ್ಯದರ್ಶಿ ಜಿ.ಸಿ.ವೆಂಕಟರೋಣಪ್ಪ ಮಾತನಾಡಿದರು | Kannada Prabha

ಸಾರಾಂಶ

ಕಳೆದೆರಡು ವರ್ಷಗಳಿಂದ ದಲಿತರಿಗೆ ಮೀಸಲಿಟ್ಟ ಹಣದಲ್ಲಿ ಬರೊಬ್ಬರಿ 25 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದು, ಆ ಹಣವನ್ನು ಕೂಡಲೇ ಆಯಾ ಇಲಾಖೆಗಳಿಗೆ ವಾಪಸ್ ನೀಡಬೇಕು. ಮೀಸಲಾತಿ ಹಣ ಗ್ಯಾರಂಟಿಗಳಿಗೆ ಉಪಯೋಗ ಮಾಡಬಾರದು ಹಾಗೂ 1978ರ ಪಿಟಿಸಿಎಲ್ ಕಾಯ್ದೆಯನ್ನು ಯತಾವತ್ತಾಗಿ ಜಾರಿಗೆ ತರಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪಂಚಮರ ಏಳಿಗೆಗಾಗಿ ಮೀಸಲಿಟ್ಟಿರುವ ಅನುದಾನವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸರ್ಕಾರ ಬಳಸುತ್ತಿದೆ ಎಂದು ಖಂಡಿಸಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಮಾರ್ಚ್ 3 ರಿಂದ 7 ರವರೆಗೆ 25 ಕ್ಕೂ ಹೆಚ್ಚು ದಲಿತ ಹಾಗೂ ಜನಪರ ಸಂಘಟನೆಗಳಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಮತಾ ಸೈನಿಕ ದಳದ ರಾಜ್ಯ ಪ್ರಧಾನಕಾರ್ಯದರ್ಶಿ ಜಿ.ಸಿ.ವೆಂಕಟರವಣಪ್ಪ ತಿಳಿಸಿದರು.

ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನದ 13ನೇ ವಿಧಿಯನ್ವಯ ಸಂವಿಧಾನ ವಿರೋಧಿ ಕಾನೂನು ಮಾಡುವಂತಿಲ್ಲ. ಆದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿಯಾಗಿ ದಲಿತರಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಉಪಯೋಗಿಸಿಕೊಂಡು ದಲಿತ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.ಮೀಸಲು ಹಣ ದುರುಪಯೋಗ

ರಾಜ್ಯ ಸರ್ಕಾರ ದಲಿತರಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ 2023-24 ರಲ್ಲಿ 11,144 ಕೋಟಿ, 2024-25ರಲ್ಲಿ 14,282 ಕೋಟಿ ಗ್ಯಾರಂಟಿಗಳಿಗೆ ಉಪಯೋಗಿಸಿಕೊಂಡಿದೆ. ಇದೀಗ 14,488 ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಉಪಯೋಗಿಸಲು ಮುಂದಾಗಿದೆ. ಇದು ದಲಿತರ ಮೀಸಲಾತಿಗೆ ಬಹುದೊಡ್ಡ ಕೊಡಲಿಪೆಟ್ಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಕಳೆದೆರಡು ವರ್ಷಗಳಿಂದ ದಲಿತರಿಗೆ ಮೀಸಲಿಟ್ಟ ಹಣದಲ್ಲಿ ಬರೊಬ್ಬರಿ 25 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದು, ಆ ಹಣವನ್ನು ಕೂಡಲೇ ಆಯಾ ಇಲಾಖೆಗಳಿಗೆ ವಾಪಸ್ ನೀಡಬೇಕು. ಮೀಸಲಾತಿ ಹಣ ಗ್ಯಾರಂಟಿಗಳಿಗೆ ಉಪಯೋಗ ಮಾಡಬಾರದು ಹಾಗೂ 1978ರ ಪಿಟಿಸಿಎಲ್ ಕಾಯ್ದೆಯನ್ನು ಯತಾವತ್ತಾಗಿ ಜಾರಿಗೆ ತರಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸಲು ವಿವಿಧ ಸಂಘಟನೆಗಳಿಂದ ದುಂಡುಮೇಜಿನ ನಡೆಸಿ, ಮಾರ್ಚ್ 3 ರಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.ಬಜೆಟ್‌ನಲ್ಲಿ ಪ್ರಕಟಿಸಲಿ

ಮಾರ್ಚ್ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲಿದ್ದು, ಅಂದು ನಮ್ಮ ಬೇಡಿಕೆ ಈಡೇರಿಸಲು ಕ್ರಮಕೈಗೊಳ್ಳದಿದ್ದಲ್ಲಿ ಮುಂದಿನ ಹೋರಾಟದ ಸ್ವರೂಪ ಎಲ್ಲಾ ಮುಖಂಡರು ಸೇರಿ ಚರ್ಚಿಸಿದ ನಂತರವೇ ನಿರ್ಧಾರವನ್ನು ಪ್ರಕಟಿಸಲಾಗುವುದು. ಆದ್ದರಿಂದ ಸರ್ಕಾರವು ದಲಿತರ ಸಹನೆಯನ್ನು ಕೆಣಕದೆ ಗ್ಯಾರಂಟಿಗಳಿಗೆ ಎಸ್‌ಸಿಪಿ ಎಸ್ಟಿಪಿ ಯೋಜನೆಯ ಹಣವನ್ನು ಬಳಸದಿರುವ ನಿರ್ಧಾರವನ್ನು ಪ್ರಕಟಿಸಬೇಕು,ಈಗಾಗಲೇ 2 ವರ್ಷದಿಂದ ಬಳಸಿರುವ 25 ಸಾವಿರ ಕೋಟಿ ಹಣವನ್ನು ವಾಪಸ್‌ ನೀಡಿ ಪಂಚಮರ ಅಭಿವೃದ್ದಿಗೆ ಬಳಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸಮತಾಸೈನಿಕ ದಳದ ಜಿಲ್ಲಾಧ್ಯಕ್ಷ ಜಿ.ಈಶ್ವರಪ್ಪ, ಉಪಾಧ್ಯಕ್ಷ ಜಿ.ಅಶ್ವತ್ಥಪ್ಪ,ವೆಂಕಟರೋಣಪ್ಪ ಮತ್ತಿತರರು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ