ಕನ್ನಡಪ್ರಭ ವಾರ್ತೆ ಮಧುಗಿರಿ
ಮನುಷ್ಯನಿಗೆ ಹಣ, ಆಸ್ತಿ ಎಲ್ಲ ಸಂಪತ್ತಿಗಿಂತ ಆರೋಗ್ಯವೇ ಅತಿ ದೊಡ್ಡ ಸಕಲ ಸಂಪತ್ತು , ಈ ಆಸ್ಪತ್ರೆಯಲ್ಲಿ ನಗದು ಕೌಂಟರ್ ಕಾಣಿಸುತ್ತಿಲ್ಲ, ಯಾವುದೇ ಆಸ್ಪತ್ರೆಗೆ ಭೇಟಿ ನೀಡಿದರೂ ಮೊದಲು ಕಾಣುವುದೇ ನಗದು ಕೌಂಟರ್, ಆದರೆ ಇಲ್ಲಿ ಉಚಿತವಾಗಿ ಜನರ ಆರೋಗ್ಯ ರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.
ರೋಗ ಮನುಷ್ಯನಿಗೆ ಬಾರದೇ ಮರಕ್ಕೆ ಬರುತ್ತದೆಯೇ ಎಂಬ ನಾಣ್ಣುಡಿಯಂತೆ ಒಂದಲ್ಲಾ ಒಂದು ರೀತಿಯಲ್ಲಿ ರೋಗ ಬಾಧೆಗಳು ಜನರನ್ನು ಕಾಡುತ್ತವೆ. ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರ ಬಳಿಗೆ ಸಹಜವಾಗಿ ಹೋಗುವುದುಂಟು. ಆದರೆ ಹಣ ನೋಡಿ ಚಿಕಿತ್ಸೆ ನೀಡುವ ದಿನಮಾನಗಳಲ್ಲಿ ಈ ಆಸ್ಪತ್ರೆಯಲ್ಲಿ ಉಚಿತವಾಗಿ ಎಲ್ಲ ರೋಗಗಳಿಗೂ ತಪಾಸಣೆ ಮಾಡಿ ಅದಕ್ಕೆ ತಕ್ಕಂತೆ ಔಷಧೋಪಚಾರ ನಿಗದಿಪಡಿಸಿ ತಾಲೂಕಿನ ಎಲ್ಲ ಜನರು ಉಚಿತವಾಗಿ ಚಿಕಿತ್ಸೆ ನೀಡುವ ಜನೋಪಯೋಗಿ ಕಾರ್ಯವನ್ನು ನಿರ್ವಹಿಸುತ್ತಿರುವ ವೈದ್ಯರ ಸೇವಾ ಮನೋಭಾವ ಶ್ಲಾಘನೀಯ. ಇದನ್ನು ತಾಲೂಕಿನ ಎಲ್ಲರೂ ಸದುಪಯೋಗ ಪಡಿಸಿಕೊಂಡು ಸ್ವಸ್ಥ ಸಮಾಜವನ್ನು ರೂಪಿಸಲು ಸಹಕರಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಗೌರವಿಸಿದರು. ಸದ್ಗುರು ಶ್ರೀ ಮಧುಸೂದನ್ ಸಾಯಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಶಾ ಫೌಂಡೇಶನ ರಿಕಾ ಶಾ, ಮನು ಶಾ ಕುಟುಂಬದವರು, ಡಾ.ಸತೀಶ್, ಅನ್ನಪೂರ್ಣ, ಎಸಿ ಗೋಟೂರು ಶಿವಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು, ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಮೂರ್ತಿ, ಮೈದನಹಳ್ಳಿ ಕಾಂತರಾಜು, ಸಂದೀಪ್, ಹರ್ಷ, ಗಂಗರಾಜು, ಗುತ್ತಿಗೆದಾರ ದ್ವಾರಕನಾಥ್ ಸೇರಿದಂತೆ ಅನೇಕರಿದ್ದರು.