ಜನಮನ ರಂಜಿಸಿದ ರೌಡಿ ರಣರಂಗದಲ್ಲಿ ಸತ್ಯವಂತನ ಗೆಲುವು ನಾಟಕ

KannadaprabhaNewsNetwork |  
Published : Feb 12, 2026, 03:00 AM IST
H08.2-DND2:ಜನಮನ ರಂಜಿಸಿದ ರೌಡಿ ರಣರಂಗದಲ್ಲಿ ಸತ್ಯವಂತನ ಗೆಲುವು ನಾಟಕ.ನಟರಾಜ ನಾಟ್ಯ ಸಂಘ ಬಂಗೂರು ನಗರ ಇವರು ಪ್ರದರ್ಶಿಸಿ ಸಾಮಾಜಿಕ ನಾಟಕ. | Kannada Prabha

ಸಾರಾಂಶ

ಸಮಾಜದ ಅಂಕುಡೊಂಕು ತಿದ್ದಿ ಬದಲಾವಣೆ ತರಲು ನಾಟಕಗಳ ಪ್ರದರ್ಶನ ಅವಶ್ಯವಾಗಿದೆ.

ಕನ್ನಡಪ್ರಭ ವಾರ್ತೆ ದಾಂಡೇಲಿ

ಸಮಾಜದ ಅಂಕುಡೊಂಕು ತಿದ್ದಿ ಬದಲಾವಣೆ ತರಲು ನಾಟಕಗಳ ಪ್ರದರ್ಶನ ಅವಶ್ಯವಾಗಿದೆ ಎಂದು ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಹೇಳಿದರು.

ದಾಂಡೇಲಿಯ ಹಳೆ ನಗರಸಭೆ ಮೈದಾನದಲ್ಲಿ ನಟರಾಜ ನಾಟ್ಯ ಸಂಘದ ವತಿಯಿಂದ ರೌಡಿ ರಣರಂಗದಲ್ಲಿ ಸತ್ಯವಂತನ ಗೆಲವು ನಾಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ನಗರಸಭೆ ಪೌರಾಯುಕ್ತ ವಿವೇಕ ಬನ್ನೆ, ಜನರಿಗೆ ಮನರಂಜನೆ ಮತ್ತು ಜೀವನ ಅನುಭವದ ಉತ್ತಮ ಸಂದೇಶವನ್ನು ನಾಟಕದ ಮೂಲಕ ನೀಡುವ ಜರೂರಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಬಿಎನ್.ವಾಸರೆ ಮಾತನಾಡಿ, ರಂಗಭೂಮಿ ಉಳಿಸುವ ನಿಟ್ಟಿನಲ್ಲಿ ಕಳೆದ 40 ವರ್ಷಗಳಿಂದ ನಟರಾಜ ನಾಟ್ಯ ಸಂಘ ದಾಂಡೇಲಿಯಲ್ಲಿ ಧರ್ಮ ಸಮನ್ವಯತೆ ಹಾಗೂ ಭಾಷಾ ಸೌಹಾರ್ದತೆ ಕಾಪಾಡಿಕೊಂಡು ಬರುತ್ತಿದೆ ಎಂದರು.

ವೆಸ್ಟ್ ಕೋಸ್ಟ್‌ ಪೇಪರ್ ಮಿಲ್‌ನ ಸೀನಿಯರ್ ಡಿಜಿಎಂಆರ್‌ನ ಅಧಿಕಾರಿ ವಿಜಯ ಮಹಾಂತೇಶ ಮಾತನಾಡಿದರು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಸಿಪಿಐ ಶಿವಾನಂದ ಅಂಬೀಗೇರ, ಪಿಎಸ್ಐ ಅಮೀನ ಅತ್ತಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ, ಬಿಜೆಪಿ ಮಂಡಲ ಅಧ್ಯಕ್ಷ ಬುದುವಂತ ಗೌಡ ಪಾಟೀಲ, ಕಸಾಪ ತಾಲೂಕು ಅಧ್ಯಕ್ಷ ನಾರಾಯಣ ನಾಯ್ಕ, ನಟರಾಜ ನಾಟ್ಯ ಸಂಘದ ಅಧ್ಯಕ್ಷ. ಹನುಮಂತ ಕಾರ್ಗಿ, ಕಾರ್ಯದರ್ಶಿ ರಾಜೇಸಾಬ ಕೇಸನೂರು, ಹಿರಿಯ ಕಲಾವಿದ ಮುರ್ತುಜಾ ಆನೆಹೂಸೂರು, ಸಾಯಿನಾಥ ನವಲೆ ಮುಂತಾದವರಿದ್ದರು.

ಪ್ರಾಚಾರ್ಯ ಹನುಮಂತ ಕುಂಬಾರ ಕಾರ್ಯಕ್ರಮ ನಿರೂಪಿಸಿದರು. ನಟರಾಜ ನಾಟ್ಯ ಸಂಘದ ಕಾರ್ಯದರ್ಶಿ ರಾಜೇಶ್ ಸಾಬ್ ಕೇಸನೂರ ವಂದಿಸಿದರು.

ದಾಂಡೇಲಿ ಹಿರಿಯ ಕವಿ ದುಂಡಪ್ಪ ಗೂಳೂರು ವಿರುಚಿತ ಈ ನಾಟಕವನ್ನು ಕಲಾವಿದರಾದ ಶ್ರೀಮಂತ ಮದರಿ, ನಾಗರಾಜ್ ನಾಯ್ಕ, ಎಸ್.ಎಸ್. ಕುರುಡೇಕರ್, ಶಂಕರ್ ಮುರುಗೋಡನ್ನವರ, ಲಿಂಗರಾಜ್ ಕುದುರಿ, ಎಸ್.ಎಸ್. ಮಠಪತಿ, ಗಿರೀಶ್ ಶಿರೋಡಕ್ಕ ಮುಂತಾದ ಕಲಾವಿದರು ಅಭಿನಯಿಸಿದರು.

ಕಥ ಸಂಚಾಲಕರಾಗಿ ಭೀಮಾಶಂಕರ್ ಅಜನಾಳ, ಶಂಕ್ರಯ್ಯ ಹಿರೇಮಠ, ವ್ಯವಸ್ಥಾಪಕರಾಗಿ ಪ್ರವೀಣ್ ಕುಮಾರ್ ಸುಲಾಖೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂ ಧರ್ಮ ಮನಸ್ಸು ಜೋಡಿಸುವ ಸೇತುವೆ
ಸರ್ಕಾರಿ ಕನ್ನಡ ಶಾಲೆಗಳ ಬಾಗಿಲು ಮುಚ್ಚುತ್ತಿರುವುದು ವಿಷಾದನೀಯ: ಬಣ್ಣದಮಠದ ಶ್ರೀ ಶಿವಲಿಂಗ ಸ್ವಾಮೀಜಿ