ಕನ್ನಡಪ್ರಭ ವಾರ್ತೆ ಅಥಣಿ
ಜನಪದ ಹಾಡುಗಳು ಬಾಯಿಂದ ಬಾಯಿಗೆ ಬಂದ ಶ್ರೀಮಂತ ಸಾಹಿತ್ಯ. ಸತ್ಯ ಎಲ್ಲಿದೊ ಅಲ್ಲಿ ಶಿವನಿದ್ದಾನೆ ಅದಕ್ಕಾಗಿಯೆ ಸತ್ಯಂ ಶಿವಂ ಸುಂದರಂ ಎಂದು ಹೇಳುತ್ತಾ ನಮ್ಮ ತಾಯಂದಿರು ಶ್ರೀಮಂತ ಜನಪದ ಸಾಹಿತ್ಯ ಕೊಟ್ಟು ಹೋಗಿದ್ದಾರೆ. ಓದುಬರಹ ಬಾರದೆ ಇದ್ದರೂ ಕೂಡ ಗಣಿತವನ್ನು ಸುಲಲಿತವಾಗಿ ಬಳಸುತ್ತಿದ್ದರು. ನೈತಿಕ ಮೌಲ್ಯಗಳು ಹಾಸುಹೊಕ್ಕಾಗಿವೆ. ಬದುಕಿನ ಘಟನೆಗಳನ್ನು ಹಾಡಿನ ಮೂಲಕ ತಿಳಿಸುತ್ತಾ ಜನಪದರ ಬದುಕಿಗೂ ಆಧುನಿಕ ಬದುಕಿಗೂ ಇರುವ ವ್ಯತ್ಯಾಸಗಳನ್ನು, ಒಡಪುಗಳ ಮೂಲಕ ಹೇಳುತ್ತಾ ಬದುಕಿನುದ್ದಕ್ಕು ಹಾಸ್ಯ ತುಂಬಿದೆ ಎಂದರು. ಆಧುನಿಕತೆಗೆ ಮಾರುಹೋಗಿ ನಮ್ಮ ಸಂಸ್ಕೃತಿ, ಕಲೆ, ಸಾಹಿತ್ಯ, ಆಹಾರ ಪದ್ಧತಿ ಮರೆಯಬಾರದು. ದೈಹಿಕ ಮತ್ತು ಮಾನಸಿಕ ಸದೃಢತೆಗಾಗಿ ಉತ್ತಮ ಆಹಾರ ಪದ್ಧತಿ ರೂಡಿಸಿಕೊಳ್ಳಬೇಕೆಂದರು.
ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾ ವಿದ್ಯಾಲಯದಲ್ಲಿ ಆಯೋಜಿಸಿರುವ ಜಾನಪದ ಜಾತ್ರೆ ಸಂಭ್ರಮ ನೋಡಿದರೆ ೨೦೦ ವರ್ಷಗಳ ಹಿಂದಿನ ಬದುಕಿಗೆ ನಾವಿಂದು ಹೋಗಿದ್ದೇವೆ ಎಂದು ಭಾಸವಾಗುತ್ತಿದೆ. ಇತ್ತೀಚಿಗೆ ಚಿಕ್ಕಮಂಗಳೂರಿನಲ್ಲಿ ನಡೆದ ಜಾನಪದ ಸಮ್ಮೇಳನ ನೆನಪಿಸಿಕೊಳ್ಳುತ್ತ ಜನಪದರ ಬದುಕು ಹಾಡು, ಒಡಪು, ಒಗಟು, ಗಾದೆಗಳಿಂದ ಕೂಡಿದೆ. ಜನಪದ ಸಾಹಿತ್ಯಕ್ಕೆ ಕೊನೆಯೇ ಇಲ್ಲ. ಇಂತಹ ಜನಪದ ಶ್ರೀಮಂತ ಸಂಸ್ಕೃತಿಯನ್ನು ಇಂದಿನ ಯುವ ಜನಾಂಗ ಗೌರವಿಸುವುದರೊಂದಿಗೆ ಮುಂದಿನ ಜನಾಂಗಕ್ಕೂ ಅದನ್ನು ಪರಿಚಯಿಸಬೇಕಾದ ಅಗತ್ಯವಿದೆ. ಅದಕ್ಕೆ ಈ ಕಾರ್ಯಕ್ರಮ ಪೂರಕವಾಗಿದೆ ಎಂದರು.ಆಹಾರಮೇಳ:
ದೇಶಿ ಉಡುಗೆಯಲ್ಲಿ ವಿದ್ಯಾರ್ಥಿನಿಯರು ಇಳಕಲ್ಲ ಸೀರೆ, ಗುಳ್ಳೇದ ಗುಡ್ಡದ ಕುಬ್ಬಸ ತೊಟ್ಟು, ಮೂಗಿಗೆ ಮುಗುತಿ ಧರಸಿ ತುರುಬಿಗೆ ಹೂ ಮುಡಿದುಕೊಂಡಿದ್ದು ಕಾರ್ಯಕ್ರಮಕ್ಕೆ ಮೆರಗು ತಂದಿತ್ತು.
ಪ್ರಾಚಾರ್ಯ ಡಾ.ಬಿ.ಎಸ್.ಕಾಂಬಳೆ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಭಾರತಿ.ಎಸ್.ಗದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಭು ನೀರಲಗಿ ಅತಿಥಿ ಪರಿಚಯಿಸಿದರು. ಚೇತನ ಧರಿಗೌಡರ ಮತ್ತು ಮಹಾದೇವಿ ಜಕ್ಕಪನವರ ನಿರೂಪಿಸಿದರು. ಸಂಯೋಜಕ ಡಾ.ಪ್ರಶಾಂತ ಮಗದುಮ ವಂದಿಸಿದರು. ಈ ವೇಳೆ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಪ್ರಕಾಶ ಪಾಟೀಲ ಹಾಗೂ ಆಶೋಕ ಬುರ್ಲಿ ಮತ್ತು ಪ್ರೊ.ಪಿ.ಕೊಣ್ಣೂರ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.