ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಚಾಲುಕ್ಯ ನಗರ ಬಡಾವಣೆಯಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾನುವಾರ ಸಂಜೆ ಕಸಾಪ 109ನೇ ಸಂಸ್ಥಾಪನಾ ದಿನಾಚರಣೆ ಮತ್ತು ಮತ ಹಾಕೋಣ ಬನ್ನಿ ಜಾಗೃತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜಿಲ್ಲೆಯಲ್ಲಿ ಕನ್ನಡ ಪರ ಕಾರ್ಯಕ್ರಮಗಳು ನಿರಂತರವಾಗಿ ವೈವಿಧ್ಯಮಯವಾಗಿ ಗುಣಮಟ್ಟದ ಚಟುವಟಿಕೆಗಳ ನಡೆಸಲು ಅಧ್ಯಕ್ಷ ಡಿ.ಮಂಜುನಾಥ ಮತ್ತು ಅವರ ತಂಡ ಸಿದ್ಧಹಸ್ತವಾಗಿರುವುದು ಹೆಮ್ಮೆಯ ಸಂಗತಿ ಎಂದು ಅಭಿನಂದಿಸಿದರು.
ಸದಸ್ಯರಾದ ನಾವು ಕಾರ್ಯಚಟುವಟಿಕೆಗಳಲ್ಲಿ ಸಹಭಾಗಿತ್ವ ಪಡೆಯುವುದು ಮುಖ್ಯ. ಅಳಿವಿನಂಚಿನಲ್ಲಿರುವ ಜನಪದ ಕಲೆ ಉಳಿಸಬೇಕು, ಕಾಡಿಲ್ಲದೆ ಪರಿಸರ ನಾಶವಾಗುತ್ತಿದೆ. ಮನುಷ್ಯ ಬದುಕು ಸಂಕಷ್ಟಕ್ಕೆ ಒಳಗಾಗಿದೆ. ಕುಡಿಯುವ ನೀರು ಸಂರಕ್ಷಣೆ ಮಾಡಿಕೊಳ್ಳಬೇಕಿದೆ. ಈ ಎಲ್ಲಾ ವಿಚಾರವಾಗಿ ಕಾರ್ಯಚಟುವಟಿಕೆಗಳ ವಿಸ್ತರಿಸಲು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿ, ಪರಿಷತ್ತು ತನ್ನದೇ ಭವನ ಹೊಂದಿದೆ. ವಿಶಾಲ ನಿವೇಶನದಲ್ಲಿ ಕನಸಿನ ಸಾಹಿತ್ಯ ಗ್ರಾಮ ಯೋಜನೆ ನೀಲ ನಕ್ಷೆಯಂತೆ ಪೂರೈಸಬೇಕಿದೆ. ಸರ್ಕಾರದ, ಜನಪ್ರತಿನಿಧಿಗಳ ಸಹಕಾರ ಬೇಕು. ಸಮುದಾಯದತ್ತ ತೋರಿಸುವ ಒಲವು ಭಾಷೆ, ಸಾಹಿತ್ಯ, ಸಂಸ್ಕೃತಿಯ ಕಡೆ ನಿರಾಸಕ್ತಿ ತಾಳಿರುವುದು ದುರಂತ ಎಂದು ವಿವರಿಸಿದರು.
ಗಾಯಕಿಯರಾದ ಲಕ್ಷ್ಮೀ ಮಹೇಶ್, ನಳಿನಾಕ್ಷಿ, ದೀಪ್ತಿ ಶಿವಕುಮಾರ್, ಸುಶೀಲಾ ಷಣ್ಮುಗಂ ಕನ್ನಡ ಗೀತೆಗಳನ್ನು ಹಾಡಿದರು. ಮತದಾನ ಜಾಗೃತಿ ಕುರಿತು ಕವಿಗಳಾದ ಡಾ.ಕೆ.ಎನ್.ಗುರುದತ್ತ, ಬಿ.ಟಿ.ಅಂಬಿಕಾ, ಡಿ.ಗಣೇಶ್ ಕವನ ವಾಚಿಸಿದರು. ಕಸಾಪ ಹಿರಿಯ ಸದಸ್ಯರಾದ ಸೊಪ್ಪುಗುಡ್ಡೆ ಲೋಕಯ್ಯ, ನಿವೃತ್ತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಿ. ಎಂ. ಚಂದ್ರಶೇಖರ, ಆರ್. ಹನುಮಂತಪ್ಪ, ನಳಿನಾಕ್ಷಿ ಅವರನ್ನು ಸನ್ಮಾನಿಸಲಾಯಿತು.ಲಕ್ಷ್ಮೀ ಮಹೇಶ್ ಮತ್ತು ತಂಡ ನಾಡಗೀತೆಯನ್ನು ಹಾಡಿದರು. ಎಂ.ಎಂ. ಸ್ವಾಮಿ ಸ್ವಾಗತಿಸಿ, ಕೆ.ಎಸ್. ಮಂಜಪ್ಪ ನಿರೂಪಿಸಿ, ಮಹಾದೇವಿ ವಂದಿಸಿದರು.