ಸಿರಿಧಾನ್ಯ ಬಳಸಿ ಜೀವ ಉಳಿಸಿ: ಜಿಪಂ ಸಿಇಒ

KannadaprabhaNewsNetwork |  
Published : Jan 21, 2026, 02:00 AM IST
ಕ್ಯಾಪ್ಷನ20ಕೆಡಿವಿಜಿ43 ದಾವಣಗೆರೆಯಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ ಸಹಯೋಗದಲ್ಲಿ ನಡೆದ ಸಿರಿಧಾನ್ಯ ನಡಿಗೆ ಕಾರ್ಯಕ್ರಮವನ್ನು ಜಿಪಂ ಸಿಇಓ ಗಿತ್ತೆ ಮಾಧವ ವಿಠಲ ರಾವ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಿರಿಧಾನ್ಯದ ಮಹತ್ವ ನಮ್ಮ ಜೀವನದಲ್ಲಿ ಬಹಳ ಅವಶ್ಯಕವಿದೆ. ಪ್ರಸ್ತುತ ದಿನಗಳಲ್ಲಿ ಸಕ್ಕರೆ ಕಾಯಿಲೆ, ಬಿ.ಪಿ. ಸೇರಿದಂತೆ ಅನೇಕ ಕಾಯಿಲೆಗಳು ಜನರಿಗೆ ಬಹಳ ಬೇಗ ಆವರಿಸುತ್ತಿವೆ. ಇದರಿಂದ ದೂರ ಇರಬೇಕಾದರೆ ಹೈಬ್ರೀಡ್ ಧಾನ್ಯಗಳ ಬಳಕೆ ಬಿಟ್ಟು ಸಿರಿಧಾನ್ಯಗಳನ್ನು ಬಳಕೆ ಮಾಡಬೇಕು. ಇದರಿಂದ ಕಾಯಿಲೆಗಳಿಂದ ದೂರ ಇರಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ ರಾವ್ ಹೇಳಿದ್ದಾರೆ.

- ಸಿರಿಧಾನ್ಯ ನಡಿಗೆ ಆರೋಗ್ಯದ ಕಡೆಗೆ ಅಭಿಯಾನ । ಸಿರಿಧಾನ್ಯ ಕೃಷಿಗೆ ಸಲಹೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಿರಿಧಾನ್ಯದ ಮಹತ್ವ ನಮ್ಮ ಜೀವನದಲ್ಲಿ ಬಹಳ ಅವಶ್ಯಕವಿದೆ. ಪ್ರಸ್ತುತ ದಿನಗಳಲ್ಲಿ ಸಕ್ಕರೆ ಕಾಯಿಲೆ, ಬಿ.ಪಿ. ಸೇರಿದಂತೆ ಅನೇಕ ಕಾಯಿಲೆಗಳು ಜನರಿಗೆ ಬಹಳ ಬೇಗ ಆವರಿಸುತ್ತಿವೆ. ಇದರಿಂದ ದೂರ ಇರಬೇಕಾದರೆ ಹೈಬ್ರೀಡ್ ಧಾನ್ಯಗಳ ಬಳಕೆ ಬಿಟ್ಟು ಸಿರಿಧಾನ್ಯಗಳನ್ನು ಬಳಕೆ ಮಾಡಬೇಕು. ಇದರಿಂದ ಕಾಯಿಲೆಗಳಿಂದ ದೂರ ಇರಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ ರಾವ್ ಹೇಳಿದರು.

ನಗರದ ಗುಂಡಿ ಮಹಾದೇವಪ್ಪ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಸಿರಿಧಾನ್ಯ ನಡಿಗೆ ಆರೋಗ್ಯದ ಕಡೆಗೆ ಅಭಿಯಾನ ಅಂಗವಾಗಿ ನಡೆದ ಸಿರಿಧಾನ್ಯ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಿರಿಧಾನ್ಯವನ್ನು ಬಳಿಸಿ, ಜೀವವನ್ನು ಉಳಿಸಿಕೊಳ್ಳುವಂತೆ ಸಲಹೆ ನೀಡಿದರು.

ಸಿರಿಧಾನ್ಯದ ಮಹತ್ವ ದೊಡ್ಡದು. ಇಂದಿನ ಆಧುನಿಕ ಬೆಳೆಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ. ಸಿರಿಧಾನ್ಯದಿಂದ ಯಾವುದೇ ಪರಿಣಾಮ ಬೀರದೇ ನಮಗೆ ಆರೋಗ್ಯ ವೃದ್ಧಿಸುತ್ತದೆ. ಅನಾರೋಗ್ಯವಿದ್ದರೂ ಸಿರಿಧಾನ್ಯವನ್ನು ಸೇವಿಸಿದರೆ ಆರೋಗ್ಯವಂತರಾಗುತ್ತಾರೆ. ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಎಲ್ಲರ ಜವಾಬ್ದಾರಿ ಎಂದರು.

ಸಿರಿಧಾನ್ಯದ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು, ಸಿರಿಧಾನ್ಯ ಎಂದರೆ ಮೊದಲು ಬಡವರ ಧಾನ್ಯವೆಂದು ಆಗಿತ್ತು. ಆದರೆ ಈಗ ಸಿರಿಧಾನ್ಯವೇ ಜೀವನವಾಗುತ್ತಿದೆ. ಇತರೆ ಬೆಳೆಗಳಾದ ಅಡಕೆ, ಕಬ್ಬು, ಭತ್ತ, ಮೆಕ್ಕೆಜೋಳ ಬೆಳೆಗಳಿಗೆ ಹೆಚ್ಚಿನ ನೀರಿನ ಅಗತ್ಯವಿದೆ. ಆದರೆ ಸಿರಿಧಾನ್ಯಗಳ ಕೃಷಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಕಡಿಮೆ ನೀರಿನಲ್ಲಿ ಬೆಳೆಯಬಹುದು. ಸಿರಿಧಾನ್ಯ ಬಳಕೆಯನ್ನು ಪ್ರೋತ್ಸಾಹಿಸಲು ಎಲ್ಲರೂ ಮುಂದೆ ಬರಬೇಕು ಎಂದರು.

ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ, ಕೃಷಿ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ, ಕೃಷಿ ಇಲಾಖೆಯ ಅಧಿಕಾರಿ ಸಿಬ್ಬಂದಿ, ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು, ದಾವಣಗೆರೆ ತಾ. ಬಿತ್ತನೆ ಬೀಜ ಕೀಟನಾಶಕ, ರಸಗೊಬ್ಬರ ಮಾರಾಟಗಾರರ ಸಂಘದ ಆರನೇಕಲ್ ಮಂಜುನಾಥ, ಕಿರಣ್ ಬಾಳೆಹೊಲದ, ಅತ್ತಿಗೆರೆ ರವಿ, ಕಾವಲಹಳ್ಳಿ ಜಗದೀಶ, ಹೊಳಲ್ಕೆರೆ ರಘು, ಅತ್ತಿಗೆರೆ ದೇವರಾಜ, ಲೋಕಿಕೆರೆ ಕಿರಣ್, ಕೊಡಗನೂರು ಹರೀಶ, ಪದಾಧಿಕಾರಿಗಳು, ಕೃಷಿಕರು, ಇತರರು ಇದ್ದರು.

ಸಿರಿಧಾನ್ಯ ನಡಿಗೆಯು ಗುಂಡಿ ಸರ್ಕಲ್‌ನಿಂದ ಹೊರಟು ಲಕ್ಷ್ಮೀ ಫ್ಲೋರ್ ಮಿಲ್ ಮಾರ್ಗವಾಗಿ ಹೊರಟು, ಎಸ್‌.ನಿಜಲಿಂಗಪ್ಪ ಬಡಾವಣೆಯ ಗಂಗೂಬಾಯಿ ಹಾನಗಲ್ ಉದ್ಯಾನವನದಲ್ಲಿ ಮುಕ್ತಾಯವಾಯಿತು.

- - -

-20ಕೆಡಿವಿಜಿ43.ಜೆಪಿಜಿ:

ದಾವಣಗೆರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಸಹಯೋಗದಲ್ಲಿ ನಡೆದ ಸಿರಿಧಾನ್ಯ ನಡಿಗೆ ಕಾರ್ಯಕ್ರಮವನ್ನು ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ