ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರಸಬೆ ಸಭಾಂಗಣದಲ್ಲಿ 2024-25ನೇ ಸಾಲಿನ ಒಟ್ಟು 21.82 ಲಕ್ಷ ರು.ಗಳ ಉಳಿತಾಯ ಬಜೆಟ್ ಅನ್ನು ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಪಿ.ಎನ್. ರವೀಂದ್ರ ಮಂಡಿಸಿದರು.ಆರಂಬಿಕ ಶುಲ್ಕ ೨೧.೬೬ ಕೋಟಿ ರು. ಸೇರಿ ಆದಾಯ 48.67 ಕೋಟಿ ಆದಾಯ ನಿರೀಕ್ಷಿಸಲಾಗುದ್ದು ಅಂದಾಜು ವೆಚ್ಚವನ್ನು ೪೮.45 ಕೋಟಿಗೆ ನಿಗದಿಪಡಿಸಲಾಗಿದೆ. ಸಕಾಲಕ್ಕೆ ನೀರು ಹಾಗು ಇತರೆ ತೆರಿಗೆ ವಸೂಲಿಗೆ ನಾನಾ ಕಾರ್ಯಕ್ರಮ ಅನುಷ್ಠಾನ ಮೂಲಕ ಆದಾಯ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ವಿಶೇಷ ಅನುದಾನಕ್ಕೆ ಪ್ರಸ್ತಾವನೆಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಮಾತನಾಡಿ, ನಗರದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಸಂಸದರ ವಿಶೇಷ ಅನುದಾನದಲ್ಲಿ 1.50 ಕೋಟಿ ಮಂಜೂರಾಗಿದ್ದು ಜತೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಬಳಿ ೧೦ ಕೋಟಿ ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಗಾಗಿ ನಾವೆಲ್ಲರೂ ಪಕ್ಷಾತೀತವಾಗಿ ಬದ್ಧತೆಯಿಂದ ಸದಸ್ಯರು ಅಧಿಕಾರಿಗಳು ಕರ್ತವ್ಯನಿರ್ವಹಿಸಬೇಕು ಎಂದು ತಿಳಿಸಿದರುಶವ ಸಾಗಿಸಲು ವಾಹನ
ಕಡುಬಡವರು, ನಿರ್ಗತಿಕರು ನಿಧನ ಹೊಂದಿದಲ್ಲಿ ಅಂತ್ಯಸಂಸ್ಕಾರಕ್ಕೆ ವಿಶೇಷ ವಾಹನದ ಸೌಲಭ್ಯವನ್ನು ನಗರಸಭೆಯಿಂದ ಒದಗಿಸುವಂತೆ ಸಾರ್ವಜನಿಕರ ಮೂಲ ಸೌಕರ್ಯಗಳ ಜತೆಗೆ ಅಂತ್ಯ ಸಂಸ್ಕಾರಕ್ಕೆ ವಾಹನವನ್ನು ಎಲ್ಲ ಧರ್ಮದ ಜನಾಂಗದವರಿಗೂ ಅನುಕೂಲ ವಾಗುವಂತೆ ಒದಗಿಸಲಾಗುವು ಎಂದು ಹೇಳಿದರು. ವಿಶೇಷ ಅನುದಾನದಲ್ಲಿ ವಾಹನ ಖರೀದಿಗೆ ೨೦ಲಕ್ಷ ರು. ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ವಿಶೇಷ ಅನುದಾನ: ವಿಶೇಷ ಅನುದಾನದಲ್ಲಿ ಬೀದಿ ದೀಪಗಳ ಖರೀದಿಗೆ ೪೦ ಲಕ್ಷ ರು, ಮಹಿಳೆಯರ ಕಲ್ಯಾಣಕ್ಕೆ ೧೦ ಲಕ್ಷ ರು. ಶವ ಸಾಸಗಿಸಲು ವಾಹನ ಖರೀದಿಗೆ ೨೦ ಲಕ್ಷ ರು.ಗಳನ್ನು ವೆಚ್ಚ ಮಾಡಲಾಗುವುದು.ನಿರೀಕ್ಷಿತ ಆದಾಯ:ಆಸ್ತಿ ತೆರಿಗೆಯಿಂದ 3.50 ಕೋಟಿ, ನೀರು ಸರಬರಾಜು ತೆರಿಗೆ 1 ಕೋಟಿ, ಬಾಡಿಗೆಗಳಿಂದ ೧೦ ಲಕ್ಷ ರು., ಅಭಿವೃದ್ದಿ ಶುಲ್ಕ ೧.೫೦ ಕೋಟಿ, ಕಟ್ಟಡಗಳ ಬಾಡಿಗೆ ೩೦ ಲಕ್ಷ, ಕಟ್ಟಡಗಳ ಪರವಾನಗಿ ೫೦ ಲಕ್ಷ, ಉದ್ದಿಮೆ ಪರವಾನಿಗೆ ೨೦ ಲಕ್ಷ, ಖಾತಾ ಬದಲಾವಣೆ 36 ಲಕ್ಷ.ನಿಗದಿತ ವೆಚ್ಚ:
ನೀರಿನ ಸರಬರಾಜಿಗೆ ೪ ಕೋಟಿ, ರಸ್ತೆ ಮತ್ತು ಪಾದಚಾರಿ ಕಾಮಗಾರಿಗೆ ೧.೫೦ ಕೋಟಿ, ಬೀದಿ ದೀಪ ೨೦ ಲಕ್ಷ ರು. ಉದ್ಯಾನವನ ಅಭಿವೃದ್ದಿಗೆ ೪೦ ಲಕ್ಷ ರು., ಕಚೇರಿ ಅಭಿವೃದ್ಧಿಗೆ ೩೫ ಲಕ್ಷ ರು.ಗಳನ್ನು ವೆಚ್ಚ ಮಾಡಲಾಗುವುದು.ಬಜೆಟ್ ಸಭೆಯಲ್ಲಿ ತಹಸೀಲ್ದಾರ್ ಮಹೇಶ್ ಎಸ್. ಪತ್ರಿ, ಪೌರಾಯುಕ್ತೆ ಡಿ.ಎಂ. ಗೀತಾ, ನಗರಸಭೆ ಸದಸ್ಯರು ಸಿಬ್ಬಂದಿ ವರ್ಗ ಇದ್ದರು.