ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ನಾಗಾಸಾಧು ಹೇಳಿಕೆ । ಟಿವಿ ಮಾದ್ಯಮ ಸೇರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಎನ್.ವಿಶ್ವನಾಥ್ ಶ್ರೀರಾಂಪುರ
ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ದೇವಾಲಯಕ್ಕೆ ಬರುವ ಜನರ ಸಂಖ್ಯೆ ಹೆಚ್ಚಾಗುತ್ತದೆ ಎನ್ನುವ ಭಾವನೆ ಎಲ್ಲರಲ್ಲಿತ್ತೂ ಆದರೆ ಅಂತಹ ಯಾವುದೇ ಲಕ್ಷಣಗಳು ಇಲ್ಲಿ ಕಂಡು ಬರುತ್ತಿಲ್ಲ. ಎಂದಿನಂತೆ ತಮಗಿಷ್ಠ ಬಂದವರು ಬೆಳ್ಳಂ ಬೆಳಗ್ಗೆ ದೇವಾಲಯಕ್ಕೆ ತೆರಳಿ ದೀಪ ಹಚ್ಚಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.
ನಾಗಾಸಾಧು ಹೇಳಿಕೆಯ ಹಿನ್ನೆಲೆ ಪತ್ರಕರ್ತರ ತಂಡ ಹೆಗ್ಗೆರೆ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ಪರಿಸ್ಥಿತಿಗೂ ಆತನ ಹೇಳಿಕೆಗೂ ಸಾಮ್ಯತೆ ಕಂಡು ಬಂದರು ಅಭಿವೃದ್ಧಿ ದೃಷ್ಠಿಯಿಂದ ಪ್ರದೇಶ ಬಹಳ ದೂರವಿದೆ.ಈ ಪ್ರದೇಶ ಹೆಗ್ಗೆರೆ ಗ್ರಾಮದ ರುದ್ರಭೂಮಿಗೆ ಹೊಂದಿಕೊಂಡಿದ್ದು ಹೆಗ್ಗೆರೆ ಗ್ರಾಮದಿಂದ ಓಬಳಾಪುರ ಗ್ರಾಮಕ್ಕೆ ಹೋಗುವ ದಾರಿಯಲ್ಲಿದೆ. ಒಂದೇ ಸ್ಥಳದಲ್ಲಿ 3 ಶಿವನ ದೇವಾಲಯವಿದ್ದು ಈ ಮೂರು ದೇವಾಲಯಗಳ ಆಕೃತಿ ಒಂದೇ ತೆರೆನಾಗಿದ್ದು ಒಂದೆ ಸಮಯದಲ್ಲಿ ಕಟ್ಟಲಾಗಿರಬಹುದೆಂದು ನಂಬಿಕೆಯಿದೆ.
ಈ ದೇವಾಲಯದ ಪಕ್ಕದಲ್ಲಿಯೇ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಶಿವನ ದೇವಾಲಯವಿದ್ದು ಇಲ್ಲಿ ನಾಗಾಸಾಧು ಹೇಳುವಂತೆ ಯಾರು ಬೇಕಾದರೂ ಶಿವಲಿಂಗವನ್ನು ಮುಟ್ಟಿ ಪೂಜೆ ಸಲ್ಲಿಸಬಹುದಾಗಿದೆ.
*ಜೈನ ಬಸದಿಯಂತೆ ಇದನ್ನೂ ಅಭಿವೃದ್ಧಿ ಪಡಿಸಲಿ: ಈ ದೇವಾಲಯ ನಿರ್ಮಾಣದ ಕಾಲಘಟ್ಟದಲ್ಲಿಯೇ ಈ ಗ್ರಾಮದ ಮದ್ಯಭಾಗದಲ್ಲಿರುವ ಜೈನ ಬಸದಿಯನ್ನು ನಿರ್ಮಿಸಲಾಗಿರಬಹುದು ಎನ್ನಲಾಗುತ್ತಿದ್ದು, ಇದು ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇದನ್ನು ಪ್ರಾಚ್ಯವಸ್ತು ಇಲಾಕೆ ವತಿಯಿಂದ ಸಂರಕ್ಷಿಸಲಾಗಿದ್ದು ಇದೆ ಮಾದರಿಯಲ್ಲಿ ಈ ಶಿವದೇವಾಲಯಗಳನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ. ಇಂತಹ ಪ್ರಾಚ್ಯ ಸ್ಮಾರಕಗಳ ರಕ್ಷಣೆ ಮಾಡಿಕೊಳ್ಳುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ತೋರಿಸುಚ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.ಅಭಿವೃದ್ಧಿ ಮರೀಚಿಕೆ: ದೇವಾಲಯಗಳ ರಚನೆಯನ್ನು ನೋಡಿದರೆ ಚಾಲುಕ್ಯರ ಕಾಲದ ದೇವಾಲಯಗಳಿರಬಹುದು ಎನ್ನಲಾಗುತ್ತಿದ್ದು ಅವುಗಳಿಗೆ ಸೂಕ್ತ ರಕ್ಷಣೆಯಿಲ್ಲದೆ ಅವನತಿಯ ಹಂತಕ್ಕೆ ಬಂದಿವೆ. ಶಿವಲಿಂಗ ಕದ್ದೋಯ್ದಿರುವ ದೇವಾಲಯದ ಸುತ್ತಲೂ ಮುಳ್ಳಿನ ಗಿಡಗಂಟಿ ಬೆಳೆದು ನಿಂತಿವೆ. ಉಳಿದ ಎರಡು ದೇವಾಲಯಗಳ ಸುತ್ತಲೂ ಗಿಡ ಕೀಳಲಾಗಿದೆಯಾದರೂ ದೇವಾಲಯಕ್ಕೆ ಸೂಕ್ತ ರಕ್ಷಣೆಯಿಲ್ಲವಾಗಿದೆ.