ಎಸ್ಬಿಆರ್‌ ಘಟಿಕೋತ್ಸವ: ಪ್ರತಿಭೆಗಳಿಗೆ ₹3.50ಲಕ್ಷ ನಗದು ಪುರಸ್ಕಾರ

KannadaprabhaNewsNetwork |  
Published : Sep 14, 2026, 01:30 AM IST
ಫೋಟೋ- ಎಸ್ಬಿಆರ್‌ ಸಾಧನ | Kannada Prabha

ಸಾರಾಂಶ

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಎಸ್.ಬಿ.ಆರ್. ಕಾಲೇಜಿನಲ್ಲಿ ಮಿನಿ-ಘಟಿಕೋತ್ಸವ ಕಾರ್ಯಕ್ರಮ ಡಾ. ದಾಕ್ಷಾಯಿಣಿ ಅಪ್ಪ, ಚಿ. ದೊಡ್ಡಪ್ಪ ಅಪ್ಪ ಅವರ ನೇತೃತ್ವದಲ್ಲಿ ನಡೆಯಿತು. ಎಸ್.ಬಿ.ಆರ್. ನಲ್ಲಿ ಮಿನಿ-ಘಟಿಕೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಸನ್ಮಾನ ಸಮಾರಂಭದಲ್ಲಿ ನೀಟ್, ಐಐಟಿ, ಹಾಗೂ ದ್ವಿತೀಯ ಪಿಯುಸಿ ಬೋರ್ಡ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಹತ್ತು ವಿದ್ಯಾರ್ಥಿಗಳಿಗೆ 3.5 ಲಕ್ಷ ಮೌಲ್ಯದ ನಗದು ಬಹುಮಾನದ ಮತ್ತು ನೆನಪಿನ ಕಾಣಿಕೆ, ಹಾಗೂ 175ಕ್ಕೂ ಅಧಿಕ ಸಾಧಕ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಎಸ್.ಬಿ.ಆರ್. ಕಾಲೇಜಿನಲ್ಲಿ ಮಿನಿ-ಘಟಿಕೋತ್ಸವ ಕಾರ್ಯಕ್ರಮ ಡಾ. ದಾಕ್ಷಾಯಿಣಿ ಅಪ್ಪ, ಚಿ. ದೊಡ್ಡಪ್ಪ ಅಪ್ಪ ಅವರ ನೇತೃತ್ವದಲ್ಲಿ ನಡೆಯಿತು. ಎಸ್.ಬಿ.ಆರ್. ನಲ್ಲಿ ಮಿನಿ-ಘಟಿಕೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಸನ್ಮಾನ ಸಮಾರಂಭದಲ್ಲಿ ನೀಟ್, ಐಐಟಿ, ಹಾಗೂ ದ್ವಿತೀಯ ಪಿಯುಸಿ ಬೋರ್ಡ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಹತ್ತು ವಿದ್ಯಾರ್ಥಿಗಳಿಗೆ ₹3.5 ಲಕ್ಷ ಮೌಲ್ಯದ ನಗದು ಬಹುಮಾನದ ಮತ್ತು ನೆನಪಿನ ಕಾಣಿಕೆ, ಹಾಗೂ 175ಕ್ಕೂ ಅಧಿಕ ಸಾಧಕ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ನೀಟ್‍ನಲ್ಲಿ ಪ್ರಥಮ ಸ್ಥಾನ ಪಡೆದ ಚನ್ನಬಸವ ಕೊರಳ್ಳಿಗೆ ₹1ಲಕ್ಷ, ದ್ವಿತೀಯ ಸ್ಥಾನ ಸಿಮ್ರನ್ ಬಾನುಗೆ ₹50 ಸಾವಿರ, ತೃತೀಯ ಸ್ಥಾನದ ನವೀನ ಮಿಟೇಕರ, ಸಂಪತ್‍ಕುಮಾರ ಕಲಶೆಟ್ಟಿಗೆ ತಲಾ ₹25,000 ನೀಡಿ ಗೌರವಿಸಲಾಯಿತು.

ನೀಟ್‍ನಲ್ಲಿ 500ಕ್ಕೂ ಹೆಚ್ಚು ಅಂಕ ಪಡೆದ 150 ವಿದ್ಯಾರ್ಥಿಗಳನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ರಾಷ್ಟ್ರಮಟ್ಟದ ಜೆ.ಇ.ಇ ಅಡ್ವಾನ್ಸಡ್ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್‌ ಪಡೆದು ದೇಶದ ಪ್ರತಿಷ್ಠಿತ ಐಐಟಿ/ಎನ್‍ಐಟಿ ಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಾದ ಹರ್ಷವರ್ಧನ ರೆಡ್ಡಿ (ಐಐಟಿ ಹೈದರಾಬಾದ)ಗೆ ₹75,000, ಸಿದ್ಧಾರ್ಥ ವಾಯ್ (ಐಐಟಿ ಗೋವಾ)ಗೆ ₹30,000 ಸಾವಿರ ಪ್ರತ್ಯುಷ್‍ಕುಮಾರ (ಐಐಟಿ ಗೋವಾ) ಗೆ ₹25,000 ಐಐಟಿ/ಎನ್‍ಐಟಿ ಯಲ್ಲಿ ಪ್ರವೇಶ ಪಡೆದ ಒಟ್ಟು 23 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ದ್ವಿತೀಯ ಪಿಯುಸಿ ಬೋರ್ಡ್‌ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಸಿಮ್ರನ್ ಬಾನುಗೆ ₹5,000, ದ್ವಿತೀಯ ಸ್ಥಾನಕ್ಷಿತಿ ಪಾಟೀಲಗೆ ₹3,000, ತೃತೀಯರಾದ ಗೌತಮ್ ಮಹಿಪಾಲ್, ಸಹನಾ ಹಳ್ಳಿ ಅವರಿಗೆ ತಲಾ ₹2,000, ನಗದು, ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

‘ಹರ್ಷವರ್ಧನ ರೆಡ್ಡಿ’ ಪತಂಗೆ ₹50 ಸಾವಿರ ವಿದ್ಯಾರ್ಥಿ ವೇತನ, ಬಿರಾದಾರ್‌ ಸ್ಮರಣಾರ್ಥ ವಿದ್ಯಾರ್ಥಿ ವೇತನವನ್ನು ಸಿದ್ಧಾರ್ಥ ವಾಯ್’ಗೆ ನೀಡಲಾಯಿತು. ಕಾಲೇಜಿನ ಮೇಲ್ವಿಚಾರಕರಾದ ಡಾ. ಶ್ರೀಶೈಲ್ ಹೊಗಾಡೆ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ: ಬಸವಂತಪ್ಪ
ಉಪ್ಪಾರ ವೆಂಕಟೇಶನಿಗೆ ಪೊಲೀಸರಿಂದ ಹುಡುಕಾಟ