ಫಲಾನುಭವಿಗಳಿಗೆ ಯೋಜನೆ ಸಮರ್ಪಕವಾಗಿ ತಲುಪಿಸಬೇಕು: ರಮೇಶ್ ಗೋವಿಂದೇಗೌಡ

KannadaprabhaNewsNetwork |  
Published : Jun 18, 2025, 11:49 PM IST
ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ವತಿಯಿಂದ ಪ್ರಗತಿ ಪರಿಶೀಲನಾ ಸಭೆ  | Kannada Prabha

ಸಾರಾಂಶ

ತರೀಕೆರೆ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಯೋಜನೆ ಫಲವನ್ನು ಸಮರ್ಪಕವಾಗಿ ತಲುಪಿಸಬೇಕೆಂದು ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ತರೀಕೆರೆ ಅಧ್ಯಕ್ಷ ರಮೇಶ್ ಗೋವಿಂದೇಗೌಡ ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ವತಿಯಿಂದ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಯೋಜನೆ ಫಲವನ್ನು ಸಮರ್ಪಕವಾಗಿ ತಲುಪಿಸಬೇಕೆಂದು ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ತರೀಕೆರೆ ಅಧ್ಯಕ್ಷ ರಮೇಶ್ ಗೋವಿಂದೇಗೌಡ ಹೇಳಿದ್ದಾರೆ.ಬುಧವಾರ ತರೀಕೆರೆ ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿಯಿಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಗ್ರಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕರ ಕುಂದು ಕೊರತೆಗಳನ್ನು ಬಗೆಹರಿಸುವ ಜತೆಗೆ ಸರ್ಕಾರದ ಅತ್ಯಂತ ಮಹತ್ತರವಾದ ಯೋಜನೆಗಳಾದ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವಲ್ಲಿ ಆಗುವ ಲೋಪ ದೋಷಗಳನ್ನು ಅರಿತು ನಿವಾರಿಸಬೇಕು ಎಂದರು.

ಲಿಂಗದಹಳ್ಳಿ ಹೋಬಳಿಯಲ್ಲಿ ಪದೇ ಪದೇ ವಿದ್ಯುತ್ ನಿಲುಗಡೆಯಾಗುತ್ತಿರುತ್ತದೆ. ಈ ಪ್ರದೇಶದ ಕಾಫಿ ಎಸ್ಟೇಟ್ ಭಾಗದಲ್ಲೂ ವಿದ್ಯುತ್ ಅಡಚಣೆಯಾಗುತ್ತಿದೆ, ವಿದ್ಯುತ್ ನಿಲುಗಡೆಯಿಂದ ಸಾರ್ವಜನಿಕರ ದೈನಂದಿನ ಕೆಲಸ ಕಾರ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದರು.

ಎಷ್ಟು ದಿವಸಕ್ಕೊಮ್ಮೆ ಜಂಗಲ್ ಕ್ಲಿಯರೆನ್ಸ್ ಮಾಡುತ್ತೀರಿ ಎಂದು ಪ್ರಶ್ನಿಸಿದ ಅವರು ವಿದ್ಯುತ್ ಕಂಬಗಳಲ್ಲಿ ಗಿಡ ಬಳ್ಳಿಗಳು ಬೆಳೆದಿದೆ, ಜಂಗಲ್ ಕ್ಲೀಯರೆನ್ಸ್ ಮಾಡಿಸಿ, ಸಣ್ಣ ಪುಟ್ಟ ಸಮಸ್ಯೆಗಳಿಗೆ ಕರೆಂಟು ಹೋಗುತ್ತದೆ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬೇಕು. ವಿದ್ಯುತ್ತನ್ನು ಸಮರ್ಪಕವಾಗಿ ನೀಡಬೇಕು ತಾಲೂಕಿನಲ್ಲಿ ಗೃಹಜ್ಯೋತಿ ಯೋಜನೆ ಉತ್ತಮ ಸಾಧನೆ ಮಾಡಿದೆ ಎಂದು ಹೇಳಿದರು.ತಾಲೂಕಿನಲ್ಲಿ ಸಾರ್ವಜನಿಕರು ಪಡಿತರ ಪಡೆಯಲು ಐದಾರು ಕಿ.ಮೀ.ದೂರ ಬರಬೇಕಾಗಿದೆ. ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಸಮೀಪದಲ್ಲೇ ನ್ಯಾಯಬೆಲೆ ಅಂಗಡಿಗಳನ್ನು ಪ್ರಾರಂಭಿಸಬೇಕು. ಹೊಸೂರು ಮತ್ತು ನಂದಿಹೊಸಳ್ಳಿಗಳಲ್ಲಿ ನ್ಯಾಯಬೆಲೆ ಅಂಗಡಿಗಳ ಉಪಕೇಂದ್ರ ತೆರೆಯಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಕೆ.ಎಸ್.ಆರ್.ಟಿ.ಸಿ.ಬಸ್.ಗಳಲ್ಲಿ ಪ್ರಯಾಣಿಕರ ಜೊತೆ ನಿರ್ವಾಹಕರು ಮತ್ತು ಚಾಲಕರು ಸೌಹಾರ್ದಯುತವಾಗಿ ನಡೆದು ಕೊಳ್ಳಬೇಕು. ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆಗೆ ಸಮಯಕ್ಕೆ ಸರಿಯಾಗಿ ಬರಬೇಕು. ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾದಿಕಾರ ಜಿಲ್ಲಾ ಉಪಾಧ್ಯಕ್ಷ ಸಮೀವುಲ್ಲಾ ಷರೀಫ್, ಜಿಲ್ಲಾ ಪ್ರಾದಿಕಾರ ಸದಸ್ಯರಾದ ಸಂತೋಷ್ ಕುಂಟನಮಡು, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಭಾಗ್ಯಲಕ್ಷ್ಮಿ, ಲಕ್ಷ್ಮೀಬಾಯಿ, ಮೆಹಬೂಬ್, ಶ್ರೀಧರ, ಮಣಿಕಂಠ, ಸಂತೋಷ್ ನಾಯಕ್,ಸಂತೋಷ್, ಮಾಲತೇಶ್, ಪ್ರಸನ್ನ, ಮೆಸ್ಕಾಂ ಇಲಾಖೆಯ ಎ.ಇ.ಇ.ಮಂಜುನಾಥ್ ನಾಯಕ್, ಆಹಾರ ಇಲಾಖೆಯ ಚಂದ್ರಕಲಾ, ಶಿಶು ಅಭಿವೃದ್ಧಿಮತ್ತು ಮಹಿಳಾ ಕಲ್ಯಾಣ ಇಲಾಖೆಯ ದ್ರಾಕ್ಷಾಯಿಣಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದಿಲೀಪ್, ಕೆ.ಎಸ್.ಅರ್.ಟಿ.ಸಿ..ಯ ಮಧು, ಚಂದ್ರಶೇಖರ್, ಅಶ್ವಿನಿ ಅವರುಗಳು ಸಭೆಯಲ್ಲಿ ಭಾಗವಹಿಸಿದ್ದರು.18ಕೆಟಿಆರ್.ಕೆ.04ಃ ತರೀಕೆರೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಮೇಶ್ ಗೋವಿಂದೇಗೌಡ ಅವರ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ