ರಸ್ತೆ ಗುಂಡಿ ಮುಚ್ಚಿದ ಶಾಲಾ ಮಕ್ಕಳು: ಸಾರ್ವಜನಿಕರಿಂದ ಮೆಚ್ಚುಗೆ

KannadaprabhaNewsNetwork |  
Published : Oct 06, 2026, 03:45 AM IST
ರಸ್ತೆ ಗುಂಡಿಗಳನ್ನು ಮುಚ್ಚಿದ ಶಾಲಾ ಹುಡುಗರು..ಗುಂಡಿ ಬಿದ್ದ ರಸ್ತೆಗಳ ಮೇಲೆ  ಓದುವ ಮಕ್ಕಳ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ.. | Kannada Prabha

ಸಾರಾಂಶ

ಕಳಸ: ಗುಂಡಿಗಳ ಹಾವಳಿಯಿಂದ ಓಡಾಟವೇ ದುಸ್ಥರವಾಗಿದ್ದ ರಸ್ತೆ ಗುಂಡಿ ಮುಚ್ಚಿದ ಮೂವರು ವಿದ್ಯಾರ್ಥಿಗಳು ತಾತ್ಕಾಲಿಕ ಪರಿಹಾರ ಒದಗಿಸಿ,ಬೇರೆಯವರಿಗೆ ಮಾದರಿಯಾಗಿದ್ದಾರೆ.

ಕಳಸ: ಗುಂಡಿಗಳ ಹಾವಳಿಯಿಂದ ಓಡಾಟವೇ ದುಸ್ಥರವಾಗಿದ್ದ ರಸ್ತೆ ಗುಂಡಿ ಮುಚ್ಚಿದ ಮೂವರು ವಿದ್ಯಾರ್ಥಿಗಳು ತಾತ್ಕಾಲಿಕ ಪರಿಹಾರ ಒದಗಿಸಿ,ಬೇರೆಯವರಿಗೆ ಮಾದರಿಯಾಗಿದ್ದಾರೆ.ತಾಲೂಕಿನ ಹಳುವಳ್ಳಿಯ ಮೂವರು ವಿದ್ಯಾರ್ಥಿಗಳು ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯನ್ನು ಮುಚ್ಚಿ ಎಲ್ಲರೂ ಮೆಚ್ಚುವ ಕೆಲಸ ಮಾಡಿದ್ದಾರೆ. ಕಳಸದಿಂದ ಬಾಳೆಹೊನ್ನೂರು ಸಂಪರ್ಕಿಸುವ ರಸ್ತೆಯಲ್ಲಿ ಹೊಂಡ-ಗುಂಡಿಗಳ ಸಂಖ್ಯೆ ಹೆಚ್ಚಾಗಿದ್ದು, ಈ ರಸ್ತೆಯಲ್ಲಿ ಪ್ರತಿನಿತ್ಯ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು .ಈ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿರುವುದರಿಂದ ಗುಂಡಿಯಲ್ಲಿ ರಸ್ತೆಯೋ ಅಥವಾ ರಸ್ತೆಯಲ್ಲಿ ಗುಂಡಿಯೋ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.ಈ ಸಮಸ್ಯೆಯನ್ನು ಗಮನಿಸಿದ ಕಳಸ ಪ್ರಬೋಧಿನಿ ಶಾಲೆಯ ವಿದ್ಯಾರ್ಥಿಗಳಾದ ಕೌಶಿಕ್, ಸಾತ್ವಿಕ್, ಪಾರ್ಥ ರವರು , ಶಾಲೆಗೆ ರಜೆ ಇರುವ ಸಂದರ್ಭದಲ್ಲಿ ಕಳಸ -ಬಾಳೆಹೊನ್ನೂರು ರಸ್ತೆಯ ಹಳುವಳ್ಳಿ ಎಂಬಲ್ಲಿ ರಸ್ತೆಯಲ್ಲಿ ಬಿದ್ದಿರುವ ಗುಂಡಿ ಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮಣ್ಣು, ಕಲ್ಲು ಸೇರಿದಂತೆ ರಸ್ತೆ ಬದಿಯಲ್ಲಿ ಲಭ್ಯವಿರುವ ವಸ್ತುಗಳನ್ನು ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ತಾತ್ಕಾಲಿಕ ಪರಿಹಾರ ಒದಗಿಸಿದ್ದಾರೆ. ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಶಾಲಾ ರಜೆ ದಿನವನ್ನು ಕೇವಲ ಆಟೋಟಗಳಿಗೆ ಮೀಸಲಿಡದೆ ಹಾಗೂ ಮೊಬೈಲ್ ಗೀಳಿಗೆ ಬೀಳದೆ ಇನ್ನೊಬ್ಬರಿಗೆ ಮಾದರಿ ಆಗುವಂತಹ ಕೆಲಸ ಮಾಡುತ್ತಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಮ್ಮ ಬಳಿ ಯಾವುದೇ ವಾಹನಗಳಿಲ್ಲ ಆದರೂ ಸಾರ್ವಜನಿಕರಿಗೆ ಓಡಾಡಲು ಯಾವುದೇ ತೊಂದರೆ ಆಗಬಾರದೆಂಬ ಉದ್ದೇಶದಿಂದ ನಾವು ಶಾಲೆಗೆ ರಜೆ ಇರುವ ಸಮಯದಲ್ಲಿ ಗುಂಡಿ ಮುಚ್ಚುವ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿ ತಮ್ಮ ಕೆಲಸ ಮುಂದುವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಂಜಾ ದಂಧೆ, ಪಾರ್ಕ್‌ ಅಕ್ರಮ ಮರೆಮಾಚಲು ಶೆಟ್ಟಿ ಯತ್ನ
ಪೌರಕಾರ್ಮಿಕರು ಸುರಕ್ಷತಾ ಸಾಧನ ಕಡ್ಡಾಯವಾಗಿ ಬಳಸಬೇಕು : ಬಸವರಾಜ್