ಹೊನ್ನಮಾರನಹಳ್ಳಿಯಲ್ಲಿ ಶಾಲೆಯಲ್ಲಿ ವಾರ್ಷಿಕೋತ್ಸವ

KannadaprabhaNewsNetwork |  
Published : Jan 06, 2025, 01:01 AM IST
5ಎಚ್ಎಸ್ಎನ್10  :ಹೊನ್ನ ಮಾರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪಾಠಶಾಲೆಯಲ್ಲಿ ಆಯೋಜಿಸಿದ್ದ ನಮ್ಮೂರ ಶಾಲಾ ಹಬ್ಬದ ವಾರ್ಷಿಕೋತ್ಸವ ಸಮಾರಂಭವನ್ನು ಪ್ರಾಧ್ಯಾಪಕ ಬಸವರಾಜ್ ಉದ್ಘಾಟಿಸಿದರು. ವಿಠಲ್ ಕುಮಾರ್, ಚಂದ್ರಶೇಖರ್, ಶಿವೇಗೌಡ, ಅನಿಲ್, ಪ್ರಮೋದ್, ಕಾಳೇಗೌಡ, ಎಚ್. ಡಿ. ನಾಗರಾಜ್, ಪವಿತ್ರ, ಮಂಜೇಗೌಡ, ಇದ್ದರು. | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳ ಶಿಕ್ಷಕರುಗಳು ಉನ್ನತ ಮಟ್ಟದ ಶಿಕ್ಷಣ ಪಡೆದಿದ್ದು ಅದರ ಅನುಭವದಿಂದ ವಿದ್ಯಾರ್ಥಿಗಳನ್ನು ಸುಲಭ ರೀತಿಯಲ್ಲಿ ಶೈಕ್ಷಣಿಕ ವ್ಯವಸ್ಥೆಗೆ ಹೊಂದಾಣಿಕೆ ಮಾಡಿಸುತ್ತಾರೆ ಎಂದು ಪ್ರಾಧ್ಯಾಪಕ ಎಚ್. ಎನ್. ಬಸವರಾಜ್ ತಿಳಿಸಿದರು. ಹೋಬಳಿಯ ಹೊನ್ನ ಮಾರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪಾಠಶಾಲೆಯಲ್ಲಿ ಆಯೋಜಿಸಿದ್ದ ನಮ್ಮೂರ ಶಾಲಾ ಹಬ್ಬದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಸರ್ಕಾರಿ ಶಾಲೆಗಳ ಶಿಕ್ಷಕರುಗಳು ಉನ್ನತ ಮಟ್ಟದ ಶಿಕ್ಷಣ ಪಡೆದಿದ್ದು ಅದರ ಅನುಭವದಿಂದ ವಿದ್ಯಾರ್ಥಿಗಳನ್ನು ಸುಲಭ ರೀತಿಯಲ್ಲಿ ಶೈಕ್ಷಣಿಕ ವ್ಯವಸ್ಥೆಗೆ ಹೊಂದಾಣಿಕೆ ಮಾಡಿಸುತ್ತಾರೆ ಎಂದು ಪ್ರಾಧ್ಯಾಪಕ ಎಚ್. ಎನ್. ಬಸವರಾಜ್ ತಿಳಿಸಿದರು.

ಹೋಬಳಿಯ ಹೊನ್ನ ಮಾರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪಾಠಶಾಲೆಯಲ್ಲಿ ಆಯೋಜಿಸಿದ್ದ ನಮ್ಮೂರ ಶಾಲಾ ಹಬ್ಬದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ತಮ್ಮ ಮಕ್ಕಳೆಂಬ ಭಾವನೆಯೊಂದಿಗೆ ಶಿಕ್ಷಣ ನೀಡಿ ಉನ್ನತ ಮಟ್ಟಕ್ಕೆ ಭವಿಷ್ಯ ರೂಪಿಸುವ ಜವಾಬ್ದಾರಿಯ ಕರ್ತವ್ಯ ನಿರ್ವಹಿಸಿದರೆ ಸಾಮಾನ್ಯ ಬಡ ವರ್ಗದವರ ಮಕ್ಕಳು ಸಹ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕ್ಷೇತ್ರ ಸಮನ್ವಯ ಅಧಿಕಾರಿ ಅನಿಲ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ವಿವಿಧ ಸೌಲಭ್ಯಗಳು ಉಚಿತವಾಗಿರುತ್ತವೆ. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದರ ಜೊತೆಗೆ ಇತರರಿಗೆ ಮಾಹಿತಿ ನೀಡಿ ಗ್ರಾಮೀಣ ಮಕ್ಕಳಿಗೆ ಆಂಗ್ಲ ಮಾಧ್ಯಮದ ಶಿಕ್ಷಣ ನೀಡುವಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ವಿಠ್ಠಲ್ ಕುಮಾರ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್‌ ಎನ್. ಚಂದ್ರಶೇಖರ್, ಉಪಾಧ್ಯಕ್ಷೆ ಪವಿತ್ರ ನಟರಾಜ್, ಸಿಆರ್‌ಪಿ ಮಂಜೇಗೌಡ, ರಾಜ್ಯ ಪರಿಷತ್ ಸದಸ್ಯ ಪ್ರಮೋದ್, ಮುಖಂಡರುಗಳಾದ ಶಿವೇಗೌಡ, ಪ್ರೇಮ ಎಚ್‌.ಬಿ. ಗಂಗರಾಜ್, ನೌಕರರ ಸಂಘದ ಕಾರ್ಯದರ್ಶಿ ಕಾಳೇಗೌಡ, ಬಸವಚಾರ್, ಎಚ್. ಡಿ. ನಾಗರಾಜ್, ಸಣ್ಣಸ್ವಾಮಿ, ಹಿರಿಯಣ್ಣ, ಬಿ.ಎನ್. ರವಿ, ಜಯಂತಿ, ಕರಿಯಪ್ಪ ಗೌಡ, ಬಿಆರ್‌ಪಿ ಶ್ರೀಕಾಂತ್, ಅಶೋಕ್ ಸುಂದರಂ, ಮುಖ್ಯ ಶಿಕ್ಷಕಿ ಪ್ರೇಮಾ ಮೇರಿ, ಕಗ್ಗೆರೆ ಮಂಜೇಗೌಡ, ಶಿಕ್ಷಕರುಗಳಾದ ಡಿ. ಆರ್‌. ನಾಗೇಂದ್ರ ಪುರುಷೋತ್ತಮ್, ಹಲಗೆಗೌಡ, ಪೋಷಕರು, ಗ್ರಾಮಸ್ಥರು, ಇತರರು ಹಾಜರಿದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ