ಕೊಪ್ಪಳ:
ಜಾಥಾಕ್ಕೆ ಚಾಲನೆ ನೀಡಿದ ಎಸ್‌ಡಿಎಂಸಿ ಅಧ್ಯಕ್ಷ ಬಡಕಪ್ಪ ರಾಮನಳ್ಳಿ ಮಾತನಾಡಿ, 1ನೇ ತರಗತಿಗೆ 5 ವರ್ಷ 5 ತಿಂಗಳು ತುಂಬಿರುವ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಬೇಕು. ಶಾಲೆಗೆ ಸೇರಿದ ಮಗು ನಿಯಮಿತವಾಗಿ ಶಾಲೆಯಲ್ಲಿ ಹಾಜರಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಟಾಟಾ ಕಲಿಕೆ ಟ್ರಸ್ಟ್ ಸಂಯೋಜಕ ಕಲ್ಲೇಶ ತಳವಾರ ಮಾತನಾಡಿ, ಅರ್ಹ ವಯಸ್ಸಿನ ಮಕ್ಕಳು ಶಾಲೆಗೆ ದಾಖಲಾಗಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಬೇಕು. ಸಮುದಾಯ, ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು.ಇದೇ ವೇಳೆ ದಾಖಲಾದ ಮಕ್ಕಳಿಗೆ ಹೂ ಮಳೆಗೆರೆದು ಸ್ವಾಗತಿಸಿದರೆ, ಎಸ್‌ಡಿಎಂಸಿ ವತಿಯಿಂದ ನೋಟ್‌ಬುಕ್ ವಿತರಿಸಲಾಯಿತು. ಗ್ರಾಪಂ ಸದಸ್ಯರಾದ ಶಿವಪ್ಪ ಮುರುಡಿ, ಸಣ್ಣ ಯಮನೂರಪ್ಪ ಬಗನಾಳ, ತಾಯಪ್ಪ, ಯಡಿಯಪ್ಪ ಭೋವಿ, ಬಡಕಪ್ಪ, ರಾಘು ಬಡಿಗೇರ, ಹನುಮಪ್ಪ ಮುರುಡಿ, ಬಸವರಾಜ್ ಮುಂಡರಗಿ, ಸತ್ಯಪ್ಪ, ಯಮನೂರಪ್ಪ ಕುಟಗನಹಳ್ಳಿ, ಮಲ್ಲಪ್ಪ ಹೊಸಳ್ಳಿ, ಇರಕಲ್‌ದ ಸಿಆರ್‌ಪಿ ಸಂತೋಷ, ಶಿಕ್ಷಕರಾದ ಕೊಟ್ರೇಶ್, ಮಲ್ಲಪ್ಪ, ಕಿರಣ, ಮಂಜಪ್ಪ, ಯಮನೂರಪ್ಪ, ಮುರಗೇಶ್, ಪ್ರಾಣೇಶ್ ಮತ್ತಿತರರು ಉಪಸ್ಥಿತರಿದ್ದರು.