ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕೋವಿಡ್ ಬಳಿಕ ಹಲವು ಮಕ್ಕಳು ಶಾಲೆಗಳಿಗೆ ಹೋಗುತ್ತಿರಲಿಲ್ಲ. ಹೊಲ-ಗದ್ದೆ, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಮಕ್ಕಳನ್ನು ಮರಳಿ ಶಾಲೆಗೆ ವಾಪಸ್ ಕರೆತರಲು ವಿದ್ಯಾರ್ಥಿ ವೇತನ ಕಾರ್ಯಕ್ರಮ ಜಾರಿಗೆ ತರಲಾಯಿತು. ತಮ್ಮ ಈ ಉದ್ದೇಶ ಈಡೇರುವಲ್ಲಿ ಯಶಸ್ವಿಯಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದಲ್ಲಿ ಆಶೀರ್ವಚನ ನೀಡಿ, 2 ವರ್ಷಗಳ ದೀರ್ಘಕಾಲದ ಕೋವಿಡ್ ಬಳಿಕ ಮಕ್ಕಳು ಶಾಲೆಗಳಿಗೆ ತೆರಳಲು ಮನಸ್ಸು ಮಾಡಿರಲಿಲ್ಲ. ಶಾಲೆ ಮಕ್ಕಳಿಗೆ ಅತ್ಯಂತ ಸುರಕ್ಷಿತ ಸ್ವರ್ಗವಾಗಿದೆ. ಆದ್ದರಿಂದ ವಿದ್ಯಾರ್ಥಿ ವೇತನ ನೀಡುವ ಮೂಲಕ ಅವರು ಶಾಲೆಗಳಿಗೆ ಆಕರ್ಷಿತರಾಗುವಂತೆ ಮಾಡಿದೆವು ಎಂದರು.
ವಿದ್ಯಾರ್ಥಿ ವೇತನ ಯೋಜನೆ ನಾವು ವಿದ್ಯಾರ್ಥಿ ವೇತನ ನೀಡಿದರೆ ಆ ಹಣವು ಪೋಷಕರಿಗೆ ಅನುಕೂಲ ಆಗಬಹುದೆಂಬ ಕಾರಣಕ್ಕೆ ಈ ಯೋಜನೆಯನ್ನು ಜಾರಿಗೆ ತಂದೆವು. ವಿದ್ಯಾರ್ಥಿಗಳು ಮತ್ತವರ ಪೋಷಕರ ಜಂಟಿ ಖಾತೆ ತೆರೆದು ಅವರ ಖಾತೆಗಳಿಗೆ ಹಣ ಪಾವತಿ ಮಾಡುತ್ತಿದ್ದೇವೆ. ‘ಭಾರತ್ ರಾಷ್ಟ್ರ ನಿರ್ಮಾಣ್ ವಿದ್ಯಾರ್ಥಿ ನಿಧಿ’ಯ ಮೂಲಕ ನಿಧಿ ಸಂಗ್ರಹಿಸಲಾಗುತ್ತಿದೆ ಎಂದು ವಿವರಿಸಿದರು. ಇದೇ ವೇಳೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮೂಲಕ ನಿತ್ಯ ಪೌಷ್ಟಿಕಾಂಶ ಮತ್ತು ಸಾಯಿಶ್ಯೂರ್ ಯೋಜನೆಗೆ ಬೆಂಬಲ ನೀಡುತ್ತಿರುವ ಐ ಫೈವ್ ಯೂತ್ ಫೌಂಡೇಶನ್'''''''' ಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಫೌಂಡೇಶನ್‌ನ ಸಹ ಸಂಸ್ಥಾಪಕ ಆರ್.ಸುಂದರ್ ಮತ್ತು ಉಷಾ ಸುಂದರ್ ಪ್ರಶಸ್ತಿ ಸ್ವೀಕರಿದರು.ನಾರ್ತ್ ಮೆಸಡೋನಿಯಾದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಐರಿಯಾನಾ ವೆಲ್ಕೋಸ್ಕಾ ಅವರಿಗೆ ''''''''ಒಂದು ಜಗತ್ತು ಒಂದು ಕುಟುಂಬ ಮಾನವೀಯ'''''''' ಪುರಸ್ಕಾರ ನೀಡಿ ಗೌರವಿಸಲಾಯಿತು.